ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಹೈರಾಣ: ಬೆಳಗ್ಗೆ 6 ಗಂಟೆಯಿಂದಲೇ ಕ್ಯೂ, ನೂಕುನುಗ್ಗಲು ತಳ್ಳಾಟದಲ್ಲೇ ಸುಸ್ತು

| Updated By: ಆಯೇಷಾ ಬಾನು

Updated on: Jun 30, 2022 | 11:11 PM

ಗದಗ ನಗರದ ಹೊಸ ಬಸ್ ನಿಲ್ದಾಣ, ಬೆಟಗೇರಿ ಬಸ್ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬೆಳಗ್ಗೆ 6 ಗಂಟೆಯಿಂದಲೇ ಬಸ್ ಪಾಸ್ ಗಾಗಿ ಕ್ಯೂ ನಿಂತಿದ್ದಾರೆ. ಆದ್ರೆ, ವಿದ್ಯಾರ್ಥಿಗಳಿಗೆ ಬಸ್ ಪಾಸ್ ಮಾತ್ರ ಸಿಗ್ತಾಯಿಲ್ಲಾ.

ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಹೈರಾಣ: ಬೆಳಗ್ಗೆ 6 ಗಂಟೆಯಿಂದಲೇ ಕ್ಯೂ, ನೂಕುನುಗ್ಗಲು ತಳ್ಳಾಟದಲ್ಲೇ ಸುಸ್ತು
ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಹೈರಾಣ
Follow us on

ಗದಗ: ಕಾಲೇಜಿನಲ್ಲಿ ಪಾಠ ಕಲಿಯಬೇಕಾದ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಗುದ್ದಾಡುವಂತಾಗಿದೆ. ಬೆಳಗ್ಗೆ ಆರು ಗಂಟೆಗೆ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಯುದ್ಧವೇ ಮಾಡಬೇಕಾಗಿದೆ. ಸಿನಿಮಾ ಬಂದಾಗ ಅಭಿಮಾನಿಗಳು ಟಿಕೆಟ್ ಪಡೆಯಲು ಹೇಗೆ ಹರಸಾಹಸ ಮಾಡ್ತಾರೆ ಹಾಗೇ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಹರಸಾಹಸ ಮಾಡ್ತಾಯಿದ್ದಾರೆ. ಅದರಲ್ಲೂ ಕೊನೆಗೆ ದಿನ ಆಗಿರೋದರಿಂದ ನೂಕುನುಗ್ಗಲು, ತಳ್ಳಾಟ ಆಗ್ತಾಯಿದೆ. ಇದರಲ್ಲಿ ಸಿಲುಕಿ ವಿದ್ಯಾರ್ಥಿನಿಯರು ಹೈರಾಣಾಗಿದ್ದಾರೆ. ವಿದ್ಯಾರ್ಥಿಗಳ ನಿಯಂತ್ರಣಕ್ಕೆ ಪೊಲೀಸ್ರು ಸುಸ್ತಾಗಿ ಹೋಗಿದ್ದಾರೆ.

ಗದಗ ನಗರದ ಹೊಸ ಬಸ್ ನಿಲ್ದಾಣ, ಬೆಟಗೇರಿ ಬಸ್ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬೆಳಗ್ಗೆ 6 ಗಂಟೆಯಿಂದಲೇ ಬಸ್ ಪಾಸ್ ಗಾಗಿ ಕ್ಯೂ ನಿಂತಿದ್ದಾರೆ. ಆದ್ರೆ, ವಿದ್ಯಾರ್ಥಿಗಳಿಗೆ ಬಸ್ ಪಾಸ್ ಮಾತ್ರ ಸಿಗ್ತಾಯಿಲ್ಲಾ. ಅದ್ರಲ್ಲೂ ಇಂದು ಕೊನೆ ದಿನವಾಗಿದೆ. ಗದಗ ಬೆಟಗೇರಿ ಅವಳಿ ನಗರದ ನಾನಾ ಕಾಲೇಜುಗಳ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಆಗಮಿಸಿದ್ದಾರೆ. ಬೆಟಗೇರಿ ಬಸ್ ಸ್ಟಾಂಡ್ ನಲ್ಲಿ ಒಂದು ಬಸ್ ಪಾಸ್ ವಿತರಣೆ ಮಾಡಲು ಕೌಂಟರ್ ತೆಗೆದಿದ್ದಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ನಾ ಮುಂದೆ ತಾ ಮುಂದೆ ಅಂತಾ ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಮುಗಿಬಿದ್ದಿದ್ದಾರೆ. ಈ ತಳಾಟ ನುಗ್ಗಾಟದಲ್ಲಿ ವಿದ್ಯಾರ್ಥಿನಿಯರು ಹೈರಾಣಾಗಿದ್ದಾರೆ. ಒಂದೇ ಒಂದು ಕೌಂಟರ್ ಇರೋದರಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಮಾವಣೆಗೊಂಡಿದ್ದಾರೆ. ಹೆಚ್ಚಿನ ಕೌಂಟರ್ ತೆಗೆದು ಬಸ್ ಪಾಸ್ ನೀಡಬೇಕು ಎಂದು ವಿದ್ಯಾರ್ಥಿನಿ ಅರ್ಪಿತಾ ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಸಿನಿಮಾ ಕಡೆಯಿಂದ ಸಿಕ್ತು ಮತ್ತೊಂದು ಅಪ್​ಡೇಟ್​; ಹೊಸ ಸಾಂಗ್ ರಿಲೀಸ್​ಗೆ ಡೇಟ್ ಫಿಕ್ಸ್

ಇನ್ನೂ ಬೆಟಗೇರಿಯ ಬಸ್ ನಿಲ್ದಾಣ ಮೊದಲೇ ಚಿಕ್ಕದು, ಇಷ್ಟೊಂದು ಕಡಿಮೆ ಜಾಗದಲ್ಲಿ ವಿದ್ಯಾರ್ಥಿಗಳಿಗೆ ಒಂದೇ ಕೌಂಟರ್ ನಲ್ಲಿ ಪಾಸ್ ಪಾಸ್ ನೀಡಲಾಗುತ್ತಿದೆ. ಹೀಗಾಗಿ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಪರದಾಟ ನಡೆಸಿದ್ದಾರೆ. ನಿನ್ನೆಯೇ ವಿದ್ಯಾರ್ಥಿಗಳಿಗೆ ಪಾಸ್ ನೀಡುವ ಕುರಿತು ಮಾಹಿತಿ ನೀಡಿದ್ದಾರೆ. ಹೀಗಾಗಿ ನೂಕುನುಗ್ಗಲು, ಗದ್ದಲ ಗಲಾಟೆ ನಡೆದು ವಿದ್ಯಾರ್ಥಿಗಳು ಗೋಳಾಡುತ್ತಿದ್ದಾರೆ. ಹೀಗಾಗಿ ಇನ್ನೊ ಒಂದು ವಾರ ಬಸ್ ಪಾಸ್ ಅವಧಿ ಮುಂದೂಡಬೇಕು ಅಂತ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಈ ಕುರಿತು ಗದಗ ಸಾರಿಗೆ ಸಂಸ್ಥೆಯ ಡಿಸಿ ಸಿನಯ್ಯ ಅವರನ್ನು ಹೇಳಿದ್ರೆ, ಬಸ್ ಪಾಸ್ ಕೊಡಲು ಇಂದು ಕೊನೆಯ ದಿನವಾಗಿದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಹಾಗಾಗಿ ಇನ್ನು ಹೆಚ್ಚಿನ ಕೌಂಟರ್ ತೆಗೆಯಲು ಸಿಬ್ಬಂದಿಗಳಿಗೆ ಹೇಳಲಾಗಿದೆ. ಆದ್ರೆ ಒಂದೇ ದಿನ ಇಷ್ಟೊಂದು ವಿದ್ಯಾರ್ಥಿಗಳಿಗೆ ಪಾಸ್ ನೀಡಲು ಆಗೋದಿಲ್ಲಾ. ಹಾಗಾಗಿ ಬಸ್ ಪಾಸ್ ನೀಡುವ ಇನ್ನೂ ಹೆಚ್ಚಿನ ಸಮಯವನ್ನು ನೀಡಬೇಕು ಅಂತ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಗಮನಕ್ಕೆ ತರಲಾಗುವುದು, ಅವರು ಹೆಚ್ಚಿನ ಕಾಲಾವಕಾಶ ನೀಡಿದ್ರೆ, ಮುಂದೆ ಬಸ್ ಪಾಸ್ ನೀಡಲಾಗುವುದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಅಂತಾ ಗದಗ KSRTC DC ಜಿ. ಸಿನಯ್ಯ ಹೇಳಿದ್ದಾರೆ.

ವಿದ್ಯಾರ್ಥಿಗಳು ಮುಂಜಾನೆಯಿಂದ ಉಪವಾಸ ವನವಾಸ ಅನುಭವಿಸುವಂತಾಗಿದೆ. ಸಾರಿಗೆ ಸಂಸ್ಥೆಯ ಅವ್ಯವಸ್ಥೆ ವಿರುದ್ಧ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡೆಸಿದ್ದಾರೆ. ಇನಾದ್ರು ಹಿರಿಯ ಅಧಿಕಾರಿಗಳು ಎಚ್ಚತ್ತುಕೊಂಡು, ಬಸ್ ಪಾಸ್ ಪಡೆಯಲು ಸೂಕ್ತವಾದ ವ್ಯವಸ್ಥೆ ಹಾಗೂ ಹೆಚ್ಚಿನ ಕಾಲವಕಾಶ ನೀಡಿದ್ರೆ, ವಿದ್ಯಾರ್ಥಿಗಳಿಗೆ ಅನಕೂಲವಾಗಲಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

Published On - 11:11 pm, Thu, 30 June 22