ಕಾರ್ಮಿಕರ ಮಕ್ಕಳಿಗೂ ತಟ್ಟಿದ ಗ್ಯಾರಂಟಿ ಯೋಜನೆ ಬಿಸಿ: ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಕೊಡಲಿ ಪೆಟ್ಟು
ಗ್ಯಾರಂಟಿಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವ ಸರ್ಕಾರ ಇದೀಗ ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ನೀಡುತ್ತಿದ್ದ ಸಹಾಯ ಧನ(ವಿದ್ಯಾರ್ಥಿ ವೇತನ) ಕಡಿತಗೊಳಿಸಿದೆ. ಇದರಿಂದ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾರ್ಮಿಕರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಗದಗ, ಜುಲೈ.24: ಕಾಂಗ್ರೆಸ್ (Congress) ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲೇ ಬೇಕೆಂದು ಪಂಚ ಗ್ಯಾರಂಟಿ (Congress Guarantee) ಯೋಜನೆಗಳನ್ನು ಘೋಷಿಸಿತ್ತು. ಆದರೆ ಈಗ ಗೆದ್ದು ಬಂದ ಬಳಿಕ ಈ ಯೋಜನೆಗಳನ್ನು ಪೂರ್ಣಗೊಳಿಸಲು ಹರಸಾಹಸ ಪಡುತ್ತಿದೆ. ಅನುದಾನಕ್ಕಾಗಿ ಹೆಣಗಾಡುತ್ತಿದೆ. ಇದೀಗ ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ನೀಡುತ್ತಿದ್ದ ಸಹಾಯ ಧನ(ವಿದ್ಯಾರ್ಥಿ ವೇತನ) ಕಡಿತಗೊಳಿಸಿದೆ. ಇದರಿಂದ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಬಿದ್ದಿದೆ.
ಗ್ಯಾರಂಟಿ ಯೋಜನೆ ಬಿಸಿ ಈಗ ಕಾರ್ಮಿಕರ ಮಕ್ಕಳಿಗೂ ತಟ್ಟಿದೆ. ಇದರಿಂದ ಮಕ್ಕಳ ಶಿಕ್ಷಣ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬಿದ್ದಿದೆ ಎಂಬ ಮಾತು ಕೇಳಿ ಬರುತ್ತಿದೆ. ಶೈಕ್ಷಣಿಕ ಅನುದಾನದಲ್ಲಿ ಭಾರಿ ಕಡಿತ ಮಾಡಿ ಮಾರ್ಚ್ 16ರಂದೇ ಸರ್ಕಾರ ಸುತ್ತೋಲೆ ಹೊರಡಿಸಿದ್ದು ಕಾರ್ಮಿಕ ಇಲಾಖೆ ಅಧೀನ ಕಾರ್ಯದರ್ಶಿ ಸುಮ ಎಸ್ ಅವ್ರಿಂದ ಅವರು ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾರ್ಮಿಕರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ತುಮಕೂರು ಬಳಿಕ ರಾಮನಗರಕ್ಕೂ ನಮ್ಮ ಮೆಟ್ರೋ ಸಂಚಾರ; ಟೆಂಡರ್ ಕರೆದ ಬಿಎಂಆರ್ಸಿಎಲ್
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಬಂಪರ್ ಸಹಾಯಧನ ನೀಡಲಾಗಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರದಿಂದ ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ಭಾರಿ ಹೊಡೆತ ಬಿದ್ದಿದೆ. KG, Pre Schoolಗೆ ನೀಡಲಾಗುತ್ತಿದ್ದ 5,000 ಧನ ಸಹಾಯ ಸಂಪೂರ್ಣ ರದ್ದು ಮಾಡಿ ಕಾಂಗ್ರೆಸ್ ಸರ್ಕಾರ ಆದೇಶ ಮಾಡಿದೆ. ಇನ್ನು 1 ರಿಂದ 4ನೇ ತರಗತಿಗೆ 5 ಸಾವಿರವಿದ್ದ ಸಹಾಯ ಧನ 1,800ಕ್ಕೆ ಕಡಿತಗೊಳಿಸಿದೆ. 5 ರಿಂದ 8ನೇ ತರಗತಿಗೆ 8 ಸಾವಿರ ಇದ್ದ ಶೈಕ್ಷಣಿಕ ಸಹಾಯ ಧನವನ್ನು 2,400ಕ್ಕೆ ಇಳಿಸಿದೆ. 9, 10ನೇ ತರಗತಿಗೆ 12 ಸಾವಿರ ಇದ್ದ ಸಹಾಯ ಧನವನ್ನು 3 ಸಾವಿರಕ್ಕೆ ಇಳಿಸಿದೆ.
PUCಗೆ ಇದ್ದ 15 ಸಾವಿರ ಸಹಾಯ ಧನವನ್ನು 4,600ಕ್ಕೆ ಇಳಿಸಿದೆ. Diploma, ITI 20 ಸಾವಿರದಿಂದ 4,600ಕ್ಕೆ ಕಡಿತಗೊಳಿಸಿದೆ. BA, B.COM ಯಾವುದೇ ಪದವಿಗೆ ಇದ್ದ 40 ಸಾವಿರ ಸಹಾಯ ಧನವನ್ನು 10 ಸಾವಿರಕ್ಕೆ ಇಳಿಸಲಾಗಿದೆ. MBBS, ENG, M.Tech, ME, 60 ಸಾವಿರ ಇದ್ದ ವಿದ್ಯಾರ್ಥಿ ವೇತನ 11 ಸಾವಿರಕ್ಕೆ ಕಡಿತಗೊಳಿಸಲಾಗಿದೆ. ಹೀಗೆ ಪ್ರತಿಯೊಂದು ಪದವಿಗಳಿಗೆ ನೀಡುವ ಶೈಕ್ಷಣಿಕ ಸಹಾಯಧನದಲ್ಲಿ ಕಾಂಗ್ರೆಸ್ ಭಾರಿ ಕಡಿತ ಮಾಡಿದೆ. ಗ್ಯಾರಂಟಿ ಯೋಜನೆಯಿಂದಲೇ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾರ್ಮಿಕ ವಲಯದಲ್ಲಿ ತೀವ್ರ ಅಸಮಾಧಾನ, ಆಕ್ರೋಶ ಭುಗಿಲೆದ್ದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ