ಗದಗ-ಬೆಂಗಳೂರು ವೋಲ್ವೋ ಬಸ್​ಗಾಗಿ ಮಾಜಿ ಕ್ರಿಕೆಟಿಗ ಇಟ್ಟ ಬೇಡಿಕೆಗೆ ಸಾರಿಗೆ ನಿಯಂತ್ರಣಾಧಿಕಾರಿ ಹೇಳಿದ್ದಿಷ್ಟು

ಬೆಂಗಳೂರು ನಿಂದ ಗದಗ ಜಿಲ್ಲೆಗೆ ವೋಲ್ವೊ ಬಸ್ ಸೇವೆ ಬಂದ್ ಆಗಿದ್ದು, ಪುನಾರಂಭಗೊಳಿಸಿ ಎಂದು ಸರ್ಕಾರಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಮನವಿ ಮಾಡಿದ್ದಾರೆ. ಈ ಹಿಂದೆ 2023 ರಲ್ಲೂ ಕೂಡ ಜೋಶಿ ಮನವಿ ಮೇರೆಗೆ ವೋಲ್ವೊ ಬಸ್ ಸೇವೆ ಸಾರಿಗೆ ಇಲಾಖೆ ಆರಂಭಿಸಿತ್ತು. ಆದ್ರೆ, ಕೆಲ ತಿಂಗಳ ದಿನಗಳ ನಂತರ ಸಾರಿಗೆ ಇಲಾಖೆ ಸೇವೆ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಮನವಿ ಮಾಡಿದ್ದು, ಸಾರಿಗೆ ನಿಯಂತ್ರಣಾಧಿಕಾರಿ ಈ ಕುರಿತು ಏನಂದ್ರು ಗೊತ್ತಾ? ಈ ಸ್ಟೋರಿ ಓದಿ.

ಗದಗ-ಬೆಂಗಳೂರು  ವೋಲ್ವೋ  ಬಸ್​ಗಾಗಿ ಮಾಜಿ ಕ್ರಿಕೆಟಿಗ ಇಟ್ಟ ಬೇಡಿಕೆಗೆ ಸಾರಿಗೆ ನಿಯಂತ್ರಣಾಧಿಕಾರಿ ಹೇಳಿದ್ದಿಷ್ಟು
ಸಾರಿಗೆ ನಿಯಂತ್ರಣಾಧಿಕಾರಿ
Edited By:

Updated on: Aug 21, 2024 | 4:07 PM

ಗದಗ, ಆ.21: ಗದಗ ಟು ಬೆಂಗಳೂರು ಮಧ್ಯೆ ವೋಲ್ವೋ ಬಸ್(Volvo bus)​ಗಾಗಿ ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಸಾರಿಗೆ ನಿಯಂತ್ರಣಾಧಿಕಾರಿ ಡಿ.ಎಂ ದೇವರಾಜು, ‘ಗದಗ- ಬೆಂಗಳೂರು ವೋಲ್ವೋ ಬಸ್ ಸಂಚಾರ ನಮ್ಮ ವ್ಯಾಪ್ತಿಯಲ್ಲಿ ಇಲ್ಲ, ನಮ್ಮಲ್ಲಿ ವೋಲ್ವೋ ಬಸ್ ಕೂಡ ಇಲ್ಲ. ಅದನ್ನು KSRTC ವೋಲ್ವೋ ಬಸ್ ಓಡಿಸಬೇಕು ಎಂದರು.

ಇನ್ನು ಕ್ರಿಕೆಟಿಗ ಸುನೀಲ್ ಜೋಶಿ ಅವರು ಹೇಳಿದ್ದಾರೆ. ‘ಈ ಮೊದಲು ಬೆಂಗಳೂರು ಕೆಎಸ್​ಆರ್​ಟಿಸಿ ಅವರು ಗದಗಗೆ ವೋಲ್ವೋ ಬಸ್ ಓಡಿಸಿದ್ದರು. ಆಗ ಆದಾಯ ಪ್ರಮಾಣ ಬಂದಿಲ್ಲ ಎಂದು ಸ್ಥಗಿತ ಮಾಡಿದ್ದಾರೆ. ಬಳಿಕ ಗದಗದಿಂದ ಎಸಿ ರಹಿತ ಸ್ಲೀಪರ್ ಓಡಿಸುತ್ತಿದ್ದೇವು. ಎರಡು ತಿಂಗಳಿಂದ ಬಸ್ ಸೋರುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಸ್ಥಗಿತ ಮಾಡಲಾಗಿದೆ. ಕೇಂದ್ರ ಕಚೇರಿ ಅನುಮತಿ ಪಡೆದು ರಿಪೇರಿಗೆ ಕಳಿಸಲಾಗಿದೆ. ಈಗ ರಿಪೇರಿ ಆಗಿ ಬಂದಿದೆ ಎಂದು ಹೇಳಿದರು.

ನಾನ್ ಎಸಿ ಸ್ಲೀಪರ್ ಬಸ್

ಇದನ್ನೂ ಓದಿ:ಗದಗ ಟು ಬೆಂಗಳೂರು ವೋಲ್ವೋ ಬಸ್ ಸೇವೆ ಪುನಾರಂಭಗೊಳಿಸುವಂತೆ ಸರ್ಕಾರಕ್ಕೆ ಸುನೀಲ್ ಜೋಶಿ ಮನವಿ

ಪಲ್ಲಕ್ಕಿ ಬಸ್ ನೀಡುವಂತೆ ಮನವಿ

ಇನ್ನು ಪಲ್ಲಕ್ಕಿ ಬಸ್ ನೀಡುವಂತೆ ಮನವಿ ಮಾಡಿದ್ದೇವೆ. ಎರಡು ಬಸ್ ನೀಡುವುದಾಗಿ ಹೇಳಿದ್ದಾರೆ.  ಎಸಿ ರಹಿತ ಬಸ್ 10 ಲಕ್ಷ ಕಿಲೋಮೀಟರ್ ಓಡಿವೆ. ಬೆಂಗಳೂರು ಟು ಗದಗ ವೋಲ್ವೋ ಬಸ್ ಓಡಿಸಲು ಕೇಂದ್ರ ಕಚೇರಿಗೆ ಮನವಿ ಮಾಡುತ್ತೆವೆ. ಆದರೆ,
ಗದಗ ಡಿಪೋದಿಂದ ವೋಲ್ವೋ ವ್ಯವಸ್ಥೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದೀಗ 10 ಲಕ್ಷ ಕಿಲೋಮೀಟರ್ ಓಡಿದ ನಾನ್ ಎಸಿ ಸ್ಲೀಪರ್ ಬಸ್ ಓಡಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:02 pm, Wed, 21 August 24