ಗದಗ: ಕೊವಿಡ್ ನೈಟ್ ಕರ್ಫ್ಯೂ ಉಲ್ಲಂಘನೆ ಮಾಡಿದ್ದನ್ನು ಒಪ್ಪಿಕೊಳ್ಳುತ್ತೇನೆ ಎಂದು ಗದಗದಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ತಪ್ಪೊಪ್ಪಿಕೊಂಡರು. ಕೊವಿಡ್ ನೈಟ್ ಕರ್ಫ್ಯೂ ಇದ್ದರೂ ನಿಯಮ ಪಾಲಿಸದೇ ಜನಾಶೀರ್ವಾದ ಯಾತ್ರೆ ಮಾಡಲಾಗಿತ್ತು. ಗದಗ ನಗರದ ವಿಠಲಾರೋಢ ಮಠ ಆವರಣದಲ್ಲಿ ರಾತ್ರಿ 10 ಗಂಟೆವರೆಗೂ ಜನಾಶೀರ್ವಾದ ಯಾತ್ರೆಯ (BJP Jan Ashirwad Yatra) ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದ ನಂತರ ಮಾತನಾಡಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ನಿಯಮ ಉಲ್ಲಂಘನೆ ಬಗ್ಗೆ ತಪ್ಪೊಪ್ಪಿಗೆಯ ಮಾತನಾಡಿದರು. ಕೊವಿಡ್ ನೈಟ್ ಕರ್ಫ್ಯೂ ಜಾರಿಯಲ್ಲಿದ್ದರೂ ರಾತ್ರಿ 10 ಗಂಟೆಯವರೆಗೂ ಜನಾಶೀರ್ವಾದ ಯಾತ್ರೆ ನಡೆಸಿ ಕೊವಿಡ್ ನಿಯಮ ಉಲ್ಲಂಘಿಸಿದ ಕುರಿತು ತಪ್ಪೊಪ್ಪಿಕೊಂಡರು.
ಎಲ್ಲರೂ ಕೊವಿಡ್ ನಿಯಮ ಪಾಲಿಸಬೇಕು. ಮಾಸ್ಕ್ ಹಾಕಿಕೊಳ್ಳಬೇಕು ಎಂಬುದು ನನ್ನ ಒತ್ತಾಯ. ಸದನದಲ್ಲಿ ಪರಿಚಯ ಮಾಡಿಕೊಳ್ಳಲು ಅವಕಾಶ ನೀಡದ ಕಾರಣ ಜನರ ಮಧ್ಯೆ ಬಂದಿದ್ದೇವೆ. ಸದನಕ್ಕಾದ ಗಧಾ ಪ್ರಹಾರದಿಂದಾಗಿ ಜನಾಶೀರ್ವಾದ ಯಾತ್ರೆ ಹಮ್ಮಿಕೊಂಡಿದ್ದೇವೆ ಎಂದ ಅವರು ಕೊವಿಡ್ ನೈಟ್ ಕರ್ಫ್ಯೂ ಜಾರಿಯಲ್ಲಿದ್ದರೂ ಜನಾಶೀರ್ವಾದ ಯಾತ್ರೆಯನ್ನು ರಾತ್ರಿ 10 ಗಂಟೆಯವರೆಗೂ ನಡೆಸಿದ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಹಾವೇರಿಯ ಬಿಜೆಪಿ ಕಾರ್ಯಕರ್ತರ ಜೇಬಿಗೆ ಬಿತ್ತು ಕತ್ತರಿ, 20 ಸಾವಿರ ಮಂಗಮಾಯ!
ಹಾವೇರಿ: ಬಿಜೆಪಿ ನಡೆಸುತ್ತಿರುವ ಜನಾಶೀರ್ವಾದ ಕಾರ್ಯಕ್ರಮಕ್ಕಾಗಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಇಂದು ಹಾವೇರಿ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಕೆಲವು ಖದೀಮರು ಕೈಚಳಕ ತೋರಿದ್ದು ಹಾವೇರಿ ನಗರದ ಮೈಲಾರ ಮಹಾದೇವಪ್ಪ ಸಭಾಭವನದ ಬಳಿ ಮೂವರ ಜೇಬು ಕತ್ತರಿಸಿ 20 ಸಾವಿರಕ್ಕೂ ಹೆಚ್ಚು ಹಣವನ್ನು ಲಪಟಾಯಿಸಿದ್ದಾರೆ. ಹಣ ಕಳೆದುಕೊಂಡ ಮೂವರೂ ಬಿಜೆಪಿ ಕಾರ್ಯಕರ್ತರು ಎಂದು ಹೇಳಲಾಗಿದ್ದು, ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲ್ಲಕೋಟಿ ಅವರ 15 ಸಾವಿರ, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ನಜೀರ್ ನದಾಫ್ ಅವರ 20 ಸಾವಿರ ಕಳ್ಳತನವಾಗಿದೆ. ಬ್ಯಾಡಗಿ ಎಂಎಲ್ಎ ವಿರೂಪಾಕ್ಷಪ್ಪ ಬಳ್ಳಾರಿ ಅವರು ಜೇಬಿನಿಂದ ಹಣ ಎಗರಿಸಲೂ ಕಳ್ಳರು ಪ್ರಯತ್ನಿಸಿದ್ದರು. ಜತೆಗೆ ಸುಮಾರು 15 ಮೊಬೈಲ್ ಕಳ್ಳತನವಾಗಿವೆ. ಆದರೆ ಈವರೆಗೆ ಈ ಕಳ್ಳತನಗಳ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಅಧಿಕಾರದಲ್ಲಿದ್ದಾಗ ಯಾವುದೇ ವರದಿ ಬಗ್ಗೆಯೂ ಮಾತಾಡದ ವಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ವರದಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ಯ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಬೇಕಿಲ್ಲ. ಏಕೆಂದರೆ ಇಗಾಗಲೇ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಬಗ್ಗೆ ಚರ್ಚೆ ನಡೆದಿದೆ ಎಂದು ಅವರು ತಿಳಿಸಿದರು. ಗುಂಡು ಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾಗೆ ಸ್ವಾಗತ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಆ ಘಟನೆ ಯಾವ ಸಮಯದಲ್ಲಿ ಹೇಗಾಯ್ತು ಎಂದು ಅರಿವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:
ಬಿಜೆಪಿ ಜನಾಶೀರ್ವಾದ ಯಾತ್ರೆ: ಗಾಳಿಯಲ್ಲಿ ಗುಂಡು ಹಾರಿಸಿ ಭಗವಂತ ಖೂಬಾಗೆ ಸ್ವಾಗತ; ಘಟನೆ ವಿರುದ್ಧ ಎಫ್ಐಆರ್ ದಾಖಲು
ಡಿಸೆಂಬರ್ನಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನ: ವಿವಿಧ ಕಾರ್ಯಕ್ರಮಗಳ ಬಗ್ಗೆ ಡಿಕೆ ಶಿವಕುಮಾರ್ ಮಾಹಿತಿ
(Union Minister A Narayana Swamy confess for violates Covid night curfew in Gadag BJP Jan Ashirvad Yatra)