ಗದಗ, ಸೆ.03: ಬೇಡಿಕೆ ಈಡೇರಿಸದ ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಶಿಕ್ಷಕರ ದಿನಾಚರಣೆ(Teachers Day) ಬಹಿಷ್ಕರಿಸಲು ತಾಲೂಕು ಮಟ್ಟದ ಕರ್ನಾಟಕ ಸಹಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ನಿರ್ಧಾರ ಮಾಡಲಾಗಿದೆ. ಈ ಕುರಿತು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು ಬಿಇಓಗೆ ಮನವಿ ಕೂಡ ಸಲ್ಲಿಸಿದ್ದು, ಸೆಪ್ಟೆಂಬರ್ 5 ರಂದು ಕಪ್ಪುಪಟ್ಟಿ ಧರಿಸಿ ಶಾಲೆಗೆ ಬರಲು ಶಿಕ್ಷಕರು ನಿರ್ಧರಿಸಿದ್ದಾರೆ.
ಶಿಕ್ಷಕರ ಪಿಎಸ್ಟಿ ಬೇಡಿಕೆ ಈಡೇರದ ಹಿನ್ನೆಲೆ ಬಹಿಷ್ಕಾರಕ್ಕೆ ನಿರ್ಧರಿಸಲಾಗಿದೆ. 2016 ಕ್ಕಿಂತ ಮುಂಚೆಯೇ ಶಿಕ್ಷಕರು ನೇಮಕವಾಗಿದ್ದಾರೆ. 1 ರಿಂದ 7 ಮತ್ತು 8 ನೇ ತರಗತಿ ಬೋಧನೆಗೂ ನೇಮಕವಾಗಿದ್ದಾರೆ. ಹೀಗಿದ್ದೂ ಪಿಎಸ್ಟಿ ಎಂಬ ಹಣೆಪಟ್ಟಿ ಕಟ್ಟಿ 1 ರಿಂದ 5 ನೇ ತರಗತಿಗೆ ಹಿಂದೂಡಲ್ಪಡಲಾಗಿದೆ. ಇದರಿಂದ ಮುಖ್ಯೋಪಾಧ್ಯಾಯರ ಬಡ್ತಿ ನೀಡದೇ, ಪ್ರೌಢಶಾಲೆಗೆ ಪದೋನ್ನತಿ ನೀಡುತ್ತಿಲ್ಲವಂತೆ.
ಇದನ್ನೂ ಓದಿ:ಮಾನಸಿಕ ಕಿರುಕುಳಕ್ಕೆ ಬೇಸತ್ತು ಸಾಮೂಹಿಕ ವರ್ಗಾವಣೆ ಕೇಳಿದ ಶಿಕ್ಷಕರು: ಬಿಇಓ ಅಧಿಕಾರಿಯನ್ನು ಕೂಡಿ ಹಾಕಿ ಬೆದರಿಕೆ
ಹೀಗಾಗಿ ಇತ್ತೀಚೆಗೆ ಫ್ರೀಡಂ ಪಾರ್ಕ್ನಲ್ಲಿ ನಡೆದ ಹೋರಾಟದಲ್ಲಿ C ಮತ್ತು R ನಿಯಮ ತಿದ್ದುಪಡಿಗೆ ಒತ್ತಾಯಿಸಲಾಗಿತ್ತು. ಈ ವೇಳೆ ಸಿಎಂ ಹಾಗೂ ಶಿಕ್ಷಣ ಸಚಿವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ಈವರೆಗೂ ಶಿಕ್ಷಣ ಇಲಾಖೆ ನಮ್ಮ ಸಮಸ್ಯೆ ಬಗೆಹರಿಸಿಲ್ಲ. ಹೀಗಾಗಿ ಶಿಕ್ಷಕರ ದಿನಾಚರಣೆಯಂದು ನಮ್ಮ ಶಾಲೆಯಲ್ಲಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತೇವೆ ಮತ್ತು ತಾಲೂಕು ಆಡಳಿತದಿಂದ ನಡೆಯುವ ಸಮಾರಂಭವನ್ನ ಬಹಿಷ್ಕರಿಸುತ್ತೇವೆ ಎಂದು ಮುಂಡರಗಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Tue, 3 September 24