ಮಂಡ್ಯ: ಮಾತು ಬಾರದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ತುಮಕೂರಿನಲ್ಲಿ ಗೂಡ್ಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ; ವ್ಯಕ್ತಿ ಸಾವು

| Updated By: shruti hegde

Updated on: Apr 06, 2021 | 12:55 PM

48 ವರ್ಷದ ಮೂಕ ಮಹಿಳೆ ಜಾನುವಾರು ಮೇಯಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಮೂವರು ಬಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

ಮಂಡ್ಯ: ಮಾತು ಬಾರದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ತುಮಕೂರಿನಲ್ಲಿ ಗೂಡ್ಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ; ವ್ಯಕ್ತಿ ಸಾವು
ಸಾಂದರ್ಭಿಕ ಚಿತ್ರ
Follow us on

ಮಂಡ್ಯ: ಮಾತು ಬಾರದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ನಡೆದಿದೆ. ಏಪ್ರಿಲ್ 1ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಗಳಾದ ಪ್ರಸನ್ನ, ಶೇಖರ್, ಕವನ್ ಎಂಬುವವರನ್ನು ಪಾಂಡವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

48 ವರ್ಷದ ಮೂಕ ಮಹಿಳೆ ಜಾನುವಾರು ಮೇಯಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಮೂವರು ಬಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಎರಡ್ಮೂರು ದಿನದಿಂದ ನೋವಿನಿಂದ ನರಳುತ್ತಿದ್ದ ಸಂತ್ರಸ್ತೆಯನ್ನು ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದೆ.

ದೇಗುಲದ ಬೀಗ ಒಡೆದು ಕಳ್ಳತನ
ನೆಲಮಂಗಲ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಭಟ್ಟರಹಳ್ಳಿಯ ಮಾರಮ್ಮ ದೇಗುಲದ ಬೀಗ ಒಡೆದು ಹುಂಡಿ ಹಣ, ಬೆಲೆ ಬಾಳುವ ದೇವಿಯ ಆಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ನೆಲಮಂಗಲ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅಪಘಾತ; ಓರ್ವ ಸಾವು
ತುಮಕೂರು: ಗುಬ್ಬಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಹೇರೂರು ಗ್ರಾಮದ ಬಳಿ ಗೂಡ್ಸ್ ವಾಹನ ಮತ್ತು ಕಾರಿನ ಮಧ್ಯೆ ಡಿಕ್ಕಿಯಾಗಿ ವ್ಯಕ್ತಿಯೊರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಡರಾತ್ರಿ ಅಪಘಾತ ನಡೆದಿದ್ದು, ಮೃತ ವ್ಯಕ್ತಿ ಚಿಕ್ಕನಾಯಕನಹಳ್ಳಿ ತಾಲೂಕಿನ ಮುದ್ದೇನಹಳ್ಳಿ ನಿವಾಸಿ ಎನ್ನಲಾಗಿದೆ.

ಇದನ್ನೂ ಓದಿ

ಮಗಳಿಂದಲೇ ಅತ್ಯಾಚಾರ ಆರೋಪ.. ಪತ್ನಿ, ಮಗಳ ಹೆಸರು ಬರೆದು ಆತ್ಮಹತ್ಯೆಗೆ ಶರಣಾದ ಅಪ್ಪ

ಬಾಗಿಲಿಗೆ ಬೀಗ ಹಾಕಿ, ಬೆಂಕಿಯಿಟ್ಟು ಏಳು ಜನರನ್ನು ಕೊಂದ‌ ವ್ಯಕ್ತಿ ಆತ್ಮಹತ್ಯೆ; ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

(gang rape on a woman in mandya)