
ಮದುವೆ- ಪ್ರತಿಯೊಂದು ಜಾತಿ, ಸಮುದಾಯ, ವರ್ಗದಲ್ಲಿ ವಿಭಿನ್ನ ಸಂಪ್ರದಾಯಗಳೊಂದಿಗೆ ನಡೆಯುತ್ತದೆ. ಸಾಮಾನ್ಯವಾಗಿ ಶುಭ ಕಾರ್ಯಗಳು ಆಷಾಢ ಮಾಸದಲ್ಲಿ ನಡೆಯುವುದಿಲ್ಲ. ಆದರೆ ದಕ್ಷಿಣ ಕನ್ನಡದ ಕರಾವಳಿ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಆಟಿ ತಿಂಗಳು (ಆಷಾಢ ಮಾಸ)ದಲ್ಲಿ ಮದುವೆ ನಡೆಯುತ್ತದೆ. ಅದು ಅಂತಿಂಥ ಮದುವೆಯಲ್ಲ ಪ್ರೇತಗಳ ಮದುವೆ! . ಅಚ್ಚರಿ ಎಂದೆನಿಸಿದರೂ ಇದು ಸತ್ಯ. ಇಲ್ಲಿ ಸಾಮಾನ್ಯ ಜನರ ಮದುವೆಯಂತೆಯೇ ಇಹಲೋಕ ತ್ಯಜಿಸಿದ ಗಂಡು ಮತ್ತು ಹೆಣ್ಣಿನ ಮದುವೆ ಸಾಂಪ್ರದಾಯಿಕ ರೀತಿಯಲ್ಲಿ ನಡೆಸಲಾಗುತ್ತದೆ. ಮದುವೆ ನಿಶ್ಚಿತಾರ್ಥದಿಂದ ಹಿಡಿದು ಕನ್ಯಾದಾನ, ಮಾಂಗಲ್ಯ ಧಾರಣೆ, ಹೆಣ್ಣಿನ ಗೃಹ ಪ್ರವೇಶ ಎಲ್ಲವನ್ನೂ ತುಂಬಾ ಅಚ್ಚುಕಟ್ಟಾಗಿ ಮಾಡಲಾಗುತ್ತದೆ. ಇತ್ತೀಚಿಗೆ ಇಂಥಾ ಪ್ರೇತ ಮದುವೆಗಳ ಸಂಖ್ಯೆ ಕಡಿಮೆ ಆಗಿದ್ದರೂ, ಗ್ರಾಮ ಪ್ರದೇಶದ ಜನರ ನಂಬಿಕೆಯಂತೆ ಅಲ್ಲೊಂದು ಇಲ್ಲೊಂದು ಮದುವೆಗಳು ನಡೆಯುತ್ತಿವೆ. ಈ ನಂಬಿಕೆ, ವಿಶಿಷ್ಟ ಆಚರಣೆ ಬಗ್ಗೆ ಮತ್ತಷ್ಟು ತಿಳಿಯೋಣ… ಈ ಮೊದಲೇ ಹೇಳಿದಂತೆ ಕೇರಳದ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ತುಳು ಭಾಷಿಗರಾಗಿರುವ ನಲ್ಕೆದಾಯೆ, ಮೊಗೇರ, ಮಾವಿಲನ್ ಜಾತಿಯವರಲ್ಲಿ ಈ ಮದುವೆ ನಡೆಯುತ್ತದೆ. ಮದುವೆ ಆದರೆ ಮಾತ್ರ ಬದುಕು ಪರಿಪೂರ್ಣ. ಅವಿವಾಹಿತರ ಆತ್ಮ ಮೋಕ್ಷ ಸಿಗದೆ ಅಲೆದಾಡುತ್ತದೆ ಎಂಬ ನಂಬಿಕೆ ಇಲ್ಲಿಯ ಜನರದ್ದು. ಹಾಗಾಗಿ ತಮ್ಮ ಕುಟುಂಬದಲ್ಲಿ ಯಾರಾದರೂ 18 ವರ್ಷಕ್ಕಿಂತ ಮೊದಲು ಸತ್ತಿದ್ದರೆ, ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂಬ ಉದ್ದೇಶದಿಂದ ಈ ಮದುವೆ ಮಾಡಲಾಗುತ್ತದೆ. ..its a serious tradition here. For those who died in child birth, they are usually married off to...
Published On - 10:17 am, Mon, 22 April 24