ಎಟಿಎಂನಲ್ಲಿ ಹುಡುಗಿಯ ಸಕ್ಕತ್ ಡ್ಯಾನ್ಸ್; ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್

|

Updated on: May 15, 2021 | 4:54 PM

ಸಾಮಾನ್ಯವಾಗಿ ಡ್ಯಾನ್ಸ್​ನ ಕಾರ್ಯಕ್ರಮಗಳಲ್ಲೊ ಅಥವಾ ಸ್ನೇಹಿತರ ಜೊತೆ ಮಾಡುತ್ತಾರೆ. ಆದರೆ ಇಲ್ಲೊಂದು ಹುಡುಗಿ ಎಟಿಎಂನಲ್ಲಿ ಡ್ಯಾನ್ಸ್ ಮಾಡಿದ್ದಾಳೆ. ಎಟಿಎಂನಲ್ಲಿ ಹೆಜ್ಜೆ ಹಾಕಿದ ಹುಡುಗಿಯ ಡ್ಯಾನ್ಸ್ ಸದ್ಯಕ್ಕೆ ಸಕ್ಕತ್ ವೈರಲ್ ಆಗಿದೆ.

ಎಟಿಎಂನಲ್ಲಿ ಹುಡುಗಿಯ ಸಕ್ಕತ್ ಡ್ಯಾನ್ಸ್; ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್
ಎಟಿಎಂನಲ್ಲಿ ಡ್ಯಾನ್ಸ್​ ಮಾಡಿದ ಹುಡುಗಿ
Follow us on

ಬೆಂಗಳೂರು: ಡ್ಯಾನ್ಸ್ ಎಂದರೆ ಕೆಲವರಿಗೆ ವಿಪರೀತ ಹುಚ್ಚು. ವಿದ್ಯಾರ್ಥಿಗಳಂತು ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಡ್ಯಾನ್ಸ್ ಮಾಡುವುದಕ್ಕೆ ಕಾಯುತ್ತಿರುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಯಾವಾಗ ಬರುತ್ತೆ.. ಯಾವಾಗ ಡ್ಯಾನ್ಸ್ ಮಾಡುತ್ತೀವಿ ಅಂತ ಯೋಚಿಸುತ್ತಿರುತ್ತಾರೆ. ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಮಾಡಿದ್ದೆ ತಡ ಓದುವ ಗೋಜಿಗೆ ಹೋಗದೆ ಅಂದಿನಿಂದಲೇ ಡ್ಯಾನ್ಸ್​ಗೆ ಸಂಬಂಧಿಸಿದ ಪೂರ್ವ ತಯಾರಿ ಮಾಡಿಕೊಳ್ಳುವಲ್ಲಿ ಬ್ಯುಸಿ ಆಗಿರುತ್ತಾರೆ. ಸಾಮಾನ್ಯವಾಗಿ ಡ್ಯಾನ್ಸ್​ನ ಕಾರ್ಯಕ್ರಮಗಳಲ್ಲೊ ಅಥವಾ ಸ್ನೇಹಿತರ ಜೊತೆ ಮಾಡುತ್ತಾರೆ. ಆದರೆ ಇಲ್ಲೊಂದು ಹುಡುಗಿ ಎಟಿಎಂನಲ್ಲಿ ಡ್ಯಾನ್ಸ್ ಮಾಡಿದ್ದಾಳೆ. ಎಟಿಎಂನಲ್ಲಿ ಹೆಜ್ಜೆ ಹಾಕಿದ ಹುಡುಗಿಯ ಡ್ಯಾನ್ಸ್ ಸದ್ಯಕ್ಕೆ ಸಕ್ಕತ್ ವೈರಲ್ ಆಗಿದೆ.

ಸಾಮಾನ್ಯವಾಗಿ ಎಟಿಎಂಗೆ ಹಣ ತೆಗೆಯಲು ಹೋಗುತ್ತಾರೆ. ಕೆಲವು ಕಡೆ ಹಣ ತೆಗೆಯಲು ಎಟಿಎಂ ಬಳಿ ಸರದಿ ಸಾಲಿನಲ್ಲಿ ನಿಂತು ಹರಸಾಹಸ ಪಡಬೇಕಾಗುತ್ತದೆ. ದುಡ್ಡು ಕೈ ಸಿಗುತ್ತಿದ್ದಂತೆ ಸಿಕ್ಕಿತ್ತಲ ಅಂತ ಎಟಿಎಂನಿಂದ ಹೊರ ಹೋಗುತ್ತಾರೆ. ಆದರೆ ಈ ಹುಡುಗಿ ಹಣ ತೆಗೆಯುವ ಜೊತೆಗೆ ಸಕ್ಕತ್ ಡ್ಯಾನ್ಸ್ ಮಾಡಿದ್ದಾಳೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಎಟಿಎಂ ಕಾರ್ಡ್ ಹಾಕುವುದರಿಂದ ಹಿಡಿದು ಹಣ ಬರುವ ತನಕ ನಾನಾ ರೀತಿಯ ಸ್ಟೆಪ್ಗಳನ್ನು ಹಾಕಿದ್ದಾಳೆ. ಎಟಿಎಂಗೆ ಪಿನ್ ಹಾಕುವಾಗ ಒಂದು ಸ್ಟೆಪ್.. ಹಣ ಸೂಚಿಸುವಾಗ ಇನ್ನೊಂದು ಸ್ಟೆಪ್.. ಕೊನೆಗೆ ಹಣ ಬಂದಾಗ ಮತ್ತೊಂದು ಸ್ಟೆಪ್ ಹಾಕಿದ್ದಾಳೆ. ಡ್ಯಾನ್ಸ್ ಮಾಡಿದ ಹುಡುಗಿಯ ಜೊತೆ ಇನ್ನೊಂದು ಹುಡುಗಿ ಡ್ಯಾನ್ಸ್ ವಿಡಿಯೋ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಣ ಬಂದ ಬಳಿಕ ಎಟಿಎಂ ನಮಸ್ಕಾರ ಕೂಡಾ ಮಾಡಿದ್ದಾಳೆ. ಹುಡುಗಿಯ ಡಿಫರೆಂಟ್ ಡಿಫರೆಂಟ್ ಸ್ಟೆಪ್ಸ್ ವಿಡಿಯೋ ಎಟಿಎಂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ

ದೆಹಲಿ ಸರ್ಕಾರದಿಂದ ಆಕ್ಸಿಜನ್ ಕಾನ್ಸನ್​ಟ್ರೇಟರ್ ಬ್ಯಾಂಕ್ ಆರಂಭ; 2 ಗಂಟೆಯಲ್ಲಿ ಆಕ್ಸಿಜನ್ ಹೋಮ್ ಡೆಲಿವರಿ ಸೇವೆ

ಅಪ್ಪ, ಅಮ್ಮ, ಅಜ್ಜ, ಅಜ್ಜಿ ಎಲ್ಲರನ್ನೂ ಕಸಿದುಕೊಂಡ ಕೊರೊನಾ; ಇಬ್ಬರು ಕಂದಮ್ಮಗಳ ಕಣ್ಣೆದುರೇ ಸ್ಮಶಾನವಾಯ್ತು ಮನೆ

(girl danced at ATM and her dance full viral in social media)