ಹಾಸನ: ಯುವತಿ ಜತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಧರ್ಮದೇಟು ನೀಡಿದ ಘಟನೆ ಹಾಸನದ ಬಸ್ ನಿಲ್ದಾಣದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಹಾಸನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಯುವತಿಯ ಜೊತೆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾನೆ ಇದನ್ನು ಸಹಿಸದ ಯುವತಿ ಅಲ್ಲಿಯೇ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.
ಬೇಲೂರಿನಲ್ಲಿ ಬಸ್ ಹತ್ತಿದ್ದ ವ್ಯಕ್ತಿ ಯುವತಿ ಪಕ್ಕ ಕುಳಿತು ದುರ್ವರ್ತನೆ ತೋರಿದ್ದಾನೆ ಇದರಿಂದ ಬೇಸತ್ತ ಯುವತಿ ಹಾಸನ ನಿಲ್ದಾಣಕ್ಕೆ ಬರುತ್ತಲೇ ಕುತ್ತಿಗೆ ಪಟ್ಟಿ ಹಿಡಿದು ಗೂಸ ನೀಡಿದ್ದಾಳೆ. ಇದಾದ ಬಳಿಕ ಈ ವ್ಯಕ್ತಿಯನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಸ್ ನಿಲ್ದಾಣ, ಪಾರ್ಕ್ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ನಡೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇವುಗಳ ವಿರುದ್ಧ ಸಿಡಿದೇಳುವ ಮಂದಿ ಇದ್ದಾರೆ ಎನ್ನುವುದು ಖುಷಿಯ ವಿಚಾರ. ಇನ್ನು ಇಂತಹವರ ವಿರುದ್ಧ ಕಠಿಣವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಆ ಮೂಲಕ ಸಮಾಜ ಸ್ವಾಸ್ಥ್ಯವನ್ನು ಕಾಪಾಡಬೇಕು ಎನ್ನವುದು ಕೂಡ ಅಷ್ಟೇ ಮುಖ್ಯ.
ಇದನ್ನೂ ಓದಿ:
ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನ ಬಂಧನ: ರಾಯಚೂರಿನಲ್ಲಿ ಪೊಲೀಸ್ ಅಧಿಕಾರಿಯ ಸಂಬಂಧಿಯಿಂದ ಅಮಾನವೀಯ ಕೃತ್ಯ