AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಸ್ಥಾನದಲ್ಲೇ ಮಹಿಳೆ ಜೊತೆ ಅಸಭ್ಯ ವರ್ತನೆ, ಪ್ರಶ್ನಿಸಿದಕ್ಕೆ ಪತಿ ಕೈ ಬೆರಳು ಮುರಿದು ಹಲ್ಲೆ.. ಕಿಡಿಗೇಡಿಗಳ ಕೃತ್ಯ ಕಂಡೂ ಕಾಣದಂತೆ ನಿಂತ ಭಕ್ತರು

ಆ ಕಾಮಾಂಧರು ದೇಗುಲದಲ್ಲೇ ಮಹಿಳೆ ಮೇಲೆ ಅಟ್ಟಹಾಸ ತೋರಿದ್ರು. ಇದನ್ನ ಪ್ರಶ್ನಿಸಿದ ಗಂಡನ ಕೈ ಬೆರಳುಗಳನ್ನೇ ಮುರಿದ್ರು. ಜಗನ್ಮಾತೆಯ ಸ್ಥಳ ಅನ್ನೋದನ್ನೂ ನೋಡದೆ ಮಗುವನ್ನು ಮೂಲೆಗೆ ತಳ್ಳಿದ್ರು. ಮಹಿಳೆಯನ್ನ ಸುತ್ತುವರೆದು ನಿಂತು ಕೀಟಲೆ ಮಾಡಿದ್ರು. ಸಿನಿಮಾ ಸ್ಟೈಲ್​ನಲ್ಲಿ ಕುಡುಕರ ಗ್ಯಾಂಗ್ ಅಟ್ಟಹಾಸ ಮೆರೆದ ಕರುಣಾಜನಕ ಕಥೆಯೊಂದು ಕರ್ನಾಟಕದಲ್ಲೇ ನಡೆದಿದೆ.

ದೇವಸ್ಥಾನದಲ್ಲೇ ಮಹಿಳೆ ಜೊತೆ ಅಸಭ್ಯ ವರ್ತನೆ, ಪ್ರಶ್ನಿಸಿದಕ್ಕೆ ಪತಿ ಕೈ ಬೆರಳು ಮುರಿದು ಹಲ್ಲೆ.. ಕಿಡಿಗೇಡಿಗಳ ಕೃತ್ಯ ಕಂಡೂ ಕಾಣದಂತೆ ನಿಂತ ಭಕ್ತರು
ಅಂತರಘಟ್ಟೆ ದುರ್ಗಾಂಭ ದೇವಾಲಯ
Follow us
ಆಯೇಷಾ ಬಾನು
|

Updated on: Mar 18, 2021 | 7:03 AM

ಚಿಕ್ಕಮಗಳೂರು: ಮಂಜನಾಯ್ಕ ಮತ್ತು ಶೀಲಾ ಬಾಯಿ ದಂಪತಿ ಮಗು ಜತೆ ಅಜ್ಜಂಪುರ ತಾಲೂಕಿನ ಅಂತರಘಟ್ಟಕ್ಕೆ ಪೂಜೆಗೆ ಹೋಗಿದ್ದರು. ಪತಿ ದೇವರಿಗೆ ಎಡೆ ಕೊಡೋದಕ್ಕೆ ಹೋಗಿದ್ದಾಗ ಅಲ್ಲಿ ಯಾರೂ ಊಹಿಸದ ಘಟನೆಯೊಂದು ನಡೆದುಬಿಟ್ಟಿದೆ. ಗಂಡ ದೇವರಿಗೆ ಎಡೆಕೊಡಲು ಹೋಗಿದ್ದಾಗ ಹೆಂಡ್ತಿ ಪೂಜೆಗೆ ರೆಡಿ ಮಾಡುತ್ತಿದ್ದಳು. ಆಗ ದೇಗುಲಕ್ಕೆ ಬಂದ 6 ಕೀಚಕರ ಗ್ಯಾಂಗ್ ದೇವಸ್ಥಾನದ ಆವರಣದಲ್ಲೇ ಆಕೆಯ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದಾರೆ.

ದೇವಸ್ಥಾನದ ಆವರಣದಲ್ಲೇ ಕುಡುಕರು ಪೂಜೆ ಮಾಡುತ್ತಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮಹಿಳೆಗೆ ಚಿತ್ರಹಿಂಸೆ ನೀಡಿದ್ದಾರೆ. ಆಗ ಅಲ್ಲಿಗೆ ಬಂದ ಗಂಡ ಯಾಕ್ರೋ ಅಂತಾ ಪ್ರಶ್ನೆ ಮಾಡಿದ್ದಕ್ಕೆ ಎಣ್ಣೆ ಏಟಲ್ಲಿ ಟೈಟಾಗಿದ್ದ 6 ಕುಡುಕರು ಕೈ ಬೆರಳನ್ನ ಮುರಿದು, ತುಳಿದಿದ್ದಾರೆ. ಇನ್ನು ಅಮ್ಮನ ಕಣ್ಣೀರು ಕಂಡು ಮಗು ಅಮ್ಮಾ ಅಂತಾ ಓಡಿ ಬಂದಾಗ ಮಗುವನ್ನು ಮೂಲೆಗೆ ತಳ್ಳಿದ್ದಾರೆ. ಮಕ್ಕಳ ಮೇಲೂ ಹಲ್ಲೆ ಮಾಡಿದ್ದಾರೆ. 6 ಜನರ ಮದ್ಯದ ಅಮಲನ್ನು ಎದುರಿಸಲಾಗದ ದಂಪತಿ ನಿಶಕ್ತರಾಗಿದ್ದಾರೆ. ಆದರೆ ಅಲ್ಲೇ ಇದ್ದ ಭಕ್ತರು ಕೂಡ ಮೂಕ ಪ್ರೇಕ್ಷಕರಾಗಿದ್ದರು ಎಂಬುದೇ ಘೋರ ದುರಂತ.

ಅಂತರಘಟ್ಟೆ ದುರ್ಗಾಂಭ ಅಂದ್ರೆ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೇ ಶಿವಮೊಗ್ಗದ ಭಕ್ತರು ಈ ದೇವಿಗೆ ನಡೆದುಕೊಳ್ತಾರೆ. 1 ತಿಂಗಳ ಹಿಂದೆಯಷ್ಟೇ ಅದ್ಧೂರಿ ಜಾತ್ರೆ ರಥೋತ್ಸವ ನಡೆದಿದ್ದ ಸಂದರ್ಭದಲ್ಲಿ ಸಾವಿರಾರು ಜನರು ಸನ್ನಿಧಿಗೆ ಆಗಮಿಸಿ ದರ್ಶನ ಪಡೆದಿದ್ದರು. ಆಗ ಯಾರೊಬ್ಬರೂ ಅಸಭ್ಯವಾಗಿ ವರ್ತಿಸಿರಲಿಲ್ಲ. ಆದ್ರೀಗ ತಿಂಗಳ ಪೂಜೆಯಲ್ಲಿ 6 ಜನ ಕುಡುಕರ ಗ್ಯಾಂಗ್ ಅಬಲೆಯ ಮೇಲೆ ಮುಗಿಬಿದ್ದಿದ್ದಾರೆ. ದೇಗುಲದಲ್ಲೇ ಮಾಡಬಾರದ್ದನ್ನ ಮಾಡಿ ನಾಗರಿಕ ಸಮಾಜ ತಲೆತಗ್ಗಿಸುವಂಥ ಕೃತ್ಯ ಎಸಗಿದ್ದಾರೆ. ಈಗ ಅಟ್ಯಾಕ್ ಮಾಡಿರೋ ದುರುಳರನ್ನು ಅಜ್ಜಂಪುರ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಮತ್ತೊಂದ್ಕಡೆ ಪೊಲೀಸರ ಕೈಲಿ ಲಾಕ್ ಆಗುತ್ತಿದ್ದಂತೆ ರಾಜಿಯಾಗುವ ನಾಟಕವಾಡಿದ್ದಾರಂತೆ. ಆದ್ರೆ ದುರುಳರ ಹಣದಾಸೆಗೆ ಬಗ್ಗದ ಸಂತ್ರಸ್ತ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆಯಂತೆ. ಪೊಲೀಸರು ಆರೋಪಿಗಳ ವಿಚಾರಣೆ ಮುಂದುವರಿಸಿದ್ದು, ಇಂಥ ನೀಚ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಲಿ ಅಂತಾ ಸಂತ್ರಸ್ತ ಕುಟುಂಬ ಆಗ್ರಹಿಸುತ್ತಿದೆ.

ಇದನ್ನೂ ಓದಿ: ಹುಳಿಮಾವು ಬಳಿ ಕುಡುಕನ ರಂಪಾಟ: ಸಿಗರೇಟ್​ಗಾಗಿ ಕಿರಿಕ್.. ಪೊಲೀಸರ ಮುಂದೆ ಅಸಭ್ಯ ವರ್ತನೆ