100 ವರ್ಷಕ್ಕೊಮ್ಮೆ ನಡೆಯುತ್ತಂತೆ ಈ ಜಾತ್ರೆ.. ಬೆಳಗಾವಿಯಲ್ಲಿ ಲಕ್ಷ್ಮೀದೇವಿಯ ಜಾತ್ರೆ ಸಡಗರ ಶುರು
ಆ ಗ್ರಾಮದಲ್ಲಿ ಒಂದು ತಲೆಮಾರಿಗೊಮ್ಮೆ ದೇವಿಯ ಜಾತ್ರೆಯನ್ನ ಮಾಡಲಾಗುತ್ತೆ. ಕೊರೊನಾದಿಂದ ಒಂದು ವರ್ಷ ಮುಂದೂಡಲ್ಪಟ್ಟಿದ್ದ ಜಾತ್ರೆಯನ್ನ ಈ ಬಾರಿ ಆ ಗ್ರಾಮಸ್ಥರು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. 101 ವರ್ಷದ ಇತಿಹಾಸ ಇರುವ ಆ ಜಾತ್ರೆಯನ್ನ ನಾವು ನೊಡ್ಕೊಂಡು ಬರೋಣ ಬನ್ನಿ..

ಬೆಳಗಾವಿ: ಆ ಗ್ರಾಮದಲ್ಲಿ ಒಂದು ತಲೆಮಾರಿಗೊಮ್ಮೆ ದೇವಿಯ ಜಾತ್ರೆಯನ್ನ ಮಾಡಲಾಗುತ್ತೆ. ಕೊರೊನಾದಿಂದ ಒಂದು ವರ್ಷ ಮುಂದೂಡಲ್ಪಟ್ಟಿದ್ದ ಜಾತ್ರೆಯನ್ನ ಈ ಬಾರಿ ಆ ಗ್ರಾಮಸ್ಥರು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. 101 ವರ್ಷದ ಇತಿಹಾಸ ಇರುವ ಆ ಜಾತ್ರೆಯನ್ನ ನಾವು ನೊಡ್ಕೊಂಡು ಬರೋಣ ಬನ್ನಿ..
ಅದ್ಧೂರಿ ರಥೋತ್ಸವ.. ಅಲಂಕಾರಗೊಂಡು ಕಂಗೊಳಿಸುತ್ತಿರುವ ಲಕ್ಷ್ಮೀ.. ಬಂಡಾರದಲ್ಲಿ ಮಿಂದೇಳುತ್ತಿರುವ ಭಕ್ತ ಸಾಗರ.. ಇಂತಹ ದೃಶ್ಯಗಳು ಸಾಮಾನ್ಯವಾಗಿ ಈ ಜಾತ್ರೆಯಲ್ಲಿ ಕಂಡು ಬರುತ್ತೆ. ಬೆಳಗಾವಿ ತಾಲೂಕಿನ ಈ ಹಿಂಡಲಗಾ ಗ್ರಾಮದಲ್ಲಿ ಮನೆ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ. ಎಲ್ಲಿ ನೋಡಿದ್ರೂ ಲಕ್ಷ್ಮೀ ದೇವಿಯ ಆರಾಧನೆ ಕಂಡು ಬರುತ್ತಿದೆ. ಇಲ್ಲಿ ಪ್ರತಿ ವರ್ಷವೂ ಲಕ್ಷ್ಮೀ ದೇವಿ ಜಾತ್ರೆ ನಡೆಯುವುದಿಲ್ಲ ಬದಲಿಗೆ ಪ್ರತಿ ನೂರು ವರ್ಷಕ್ಕೊಮ್ಮೆ ಈ ಜಾತ್ರೆ ನಡೆಯುತ್ತೆ.

ಲಕ್ಷ್ಮೀ ದೇವಿ ಜಾತ್ರೆಯಲ್ಲಿ ಭಂಡಾರವನ್ನ ಎರಚಿ ಸಂಭ್ರಮಿಸಿದ ಭಕ್ತರು
ಹೌದು 2020ಕ್ಕೆ ಈ ದೇವಿ ಜಾತ್ರೆಗೆ ನೂರು ವರ್ಷ ಆಗಿದೆ. ಕೊರೊನಾ ಹಿನ್ನೆಲೆ ಕಳೆದ ವರ್ಷ ಮಾಡಬೇಕಿದ್ದ ಜಾತ್ರೆಯನ್ನ ಈ ವರ್ಷ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. 5 ದಿನಗಳ ಕಾಲ ನಡೆಯುವ ದೇವಿ ಜಾತ್ರೆಗೆ ನಿನ್ನೆಯಿಂದ ಚಾಲನೆ ಸಿಕ್ಕಿದೆ. ಇನ್ನೂ ಲಕ್ಷ್ಮೀ ದೇವಿಯ ಮೂರ್ತಿಯನ್ನ ತೇರಿನಲ್ಲಿ ಕೂರಿಸಿ ನಂತ್ರ ಗ್ರಾಮಸ್ಥರೆಲ್ಲರೂ ಎಳೆದ್ರು. ಈ ವೇಳೆ ಭಂಡಾರವನ್ನ ಎರಚಿ ದೇವಿಯ ಆರಾಧನೆ ಮಾಡಿದ್ರು.

ಲಕ್ಷ್ಮೀ ದೇವಿಯ ಆರಾಧನೆಯಲ್ಲಿ ಭಕ್ತರು
ಇಲ್ಲಿ ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣವಿದ್ದು, ಐದು ದಿನಗಳ ಕಾಲ ಈ ದೇವಿಯ ಜಾತ್ರೆಯನ್ನ ಆಚರಿಸಲಾಗುತ್ತಿದೆ. ಈ ಜಾತ್ರೆಯಲ್ಲಿ ಮುಖ್ಯವಾಗಿ ದೇವಿಯನ್ನ ತೇರಿನಲ್ಲಿ ಕುಡಿಸಿ ಮುಖ್ಯ ಓಣಿಗಳಲ್ಲಿ ಒಟ್ಟಾಗಿ ಸಾಗುವುದೆ ವಿಶೇಷ. ನೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯನ್ನ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಮನೆ ಮನೆಯಲ್ಲೂ ಹಬ್ಬದ ವಾತಾವರಣ ಕಂಡು ಬರುತ್ತಿದ್ದು, ಭಕ್ತರು ಫುಲ್ ಕುಣಿದು ಕುಪ್ಪಳಿಸುತ್ತಿದ್ದಾರೆ.

ಬೆಳಗಾವಿಯಲ್ಲಿ ಲಕ್ಷ್ಮೀ ದೇವಿ ಜಾತ್ರೆ

ಬೆಳಗಾವಿಯಲ್ಲಿ ಲಕ್ಷ್ಮೀ ದೇವಿ ಜಾತ್ರೆ

ನೂರು ವರ್ಷಕ್ಕೊಮ್ಮೆ ನಡೆಯುತ್ತೆ ಈ ಜಾತ್ರೆ
ಇದನ್ನೂ ಓದಿ: ಬೀದರ್ ಜಿಲ್ಲೆಯ ಅಮರೇಶ್ವರ ಜಾತ್ರೆಯಲ್ಲಿ ಗಮನ ಸೆಳೆದ ಪಶು ಪ್ರದರ್ಶನ




