‘ರೈತರ ರಾಮ ಅವರ ಕಾಯಕ, ಮನೆ, ಮನಸ್ಸಿನಲ್ಲಿದ್ದಾನೆ.. ಆದ್ರೆ ಇವರು ಧರ್ಮದ ಅಫೀಮಿನ‌ ಕುರಿತು ಮಾತನಾಡ್ತಿದ್ದಾರೆ’

ಕೇಂದ್ರ ಸರ್ಕಾರ ದೇಶವನ್ನ ಮಾರಾಟ ಮಾಡಲು ಹೊರಟಿದೆ. ಸರ್ಕಾರ ವಿಕಾಸ, ನಿರುದ್ಯೋಗದ ಬಗ್ಗೆ ಮಾತನಾಡಬೇಕಿತ್ತು. ಆದರೆ ಇವರು ಧರ್ಮದ ಅಫೀಮಿನ‌ ಕುರಿತು ಮಾತನಾಡುತ್ತಿದ್ದಾರೆ. ರೈತರ ರಾಮ ಅವರ ಕಾಯಕ, ಮನೆ, ಮನಸ್ಸಿನಲ್ಲಿದ್ದಾನೆ. ಈ ಬಗ್ಗೆ ಇಡೀ ದೇಶಾದ್ಯಂತ ಆಂದೋಲನ ಮಾಡಬೇಕಿದೆ ಎಂದು ಯುದ್ವಿರ್​ ಸಿಂಗ್​ ಹೇಳಿದರು.

‘ರೈತರ ರಾಮ ಅವರ ಕಾಯಕ, ಮನೆ, ಮನಸ್ಸಿನಲ್ಲಿದ್ದಾನೆ.. ಆದ್ರೆ ಇವರು ಧರ್ಮದ ಅಫೀಮಿನ‌ ಕುರಿತು ಮಾತನಾಡ್ತಿದ್ದಾರೆ’
‘ರೈತರ ರಾಮ ಅವರ ಕಾಯಕ, ಮನೆ, ಮನಸ್ಸಿನಲ್ಲಿದ್ದಾನೆ.. ಆದ್ರೆ ಇವರು ಧರ್ಮದ ಅಫೀಮಿನ‌ ಕುರಿತು ಮಾತನಾಡ್ತಿದ್ದಾರೆ’
Follow us
KUSHAL V
|

Updated on:Mar 21, 2021 | 6:40 PM

ಹಾವೇರಿ: 3 ಕಾನೂನುಗಳು ಜಾರಿಯಾದರೆ ರೈತರು ನಾಶ ಆಗುತ್ತಾರೆ. ರೈತರು ನಾಶವಾದರೆ ಕೂಲಿ ಕಾರ್ಮಿಕರು ನಾಶವಾಗ್ತಾರೆ. ಇದರ ಜೊತೆಗೆ ಅನೇಕ ವರ್ಗದ ಜನರು ನಾಶವಾಗುತ್ತಾರೆ. ದೇಶದಲ್ಲಿ ದುಡಿವ, ಲೂಟಿಕೋರರ ವರ್ಗ ಎರಡೇ ಇದೆ. ಈಗ ಈ ಎರಡೂ ವರ್ಗಗಳ‌ ನಡುವೆ ಸಂಘರ್ಷ ನಡೆದಿದೆ ಎಂದು ನಗರದಲ್ಲಿ ನಡೆದ ರೈತ ಮಹಾ ಪಂಚಾಯತ್​​ ಸಮಾವೇಶದಲ್ಲಿ ರೈತ ನಾಯಕ ಯುದ್ವಿರ್ ಸಿಂಗ್ ಹೇಳಿದರು.

HVR FARMERS SAMAVESHA 3

ರೈತ ಮಹಾ ಪಂಚಾಯತ್​​ ಸಮಾವೇಶ

HVR FARMERS SAMAVESHA 4

ಕೇಂದ್ರ ಸರ್ಕಾರ ದೇಶವನ್ನ ಮಾರಾಟ ಮಾಡಲು ಹೊರಟಿದೆ. ಸರ್ಕಾರ ವಿಕಾಸ, ನಿರುದ್ಯೋಗದ ಬಗ್ಗೆ ಮಾತನಾಡಬೇಕಿತ್ತು. ಆದರೆ ಇವರು ಧರ್ಮದ ಅಫೀಮಿನ‌ ಕುರಿತು ಮಾತನಾಡುತ್ತಿದ್ದಾರೆ. ರೈತರ ರಾಮ ಅವರ ಕಾಯಕ, ಮನೆ, ಮನಸ್ಸಿನಲ್ಲಿದ್ದಾನೆ. ಈ ಬಗ್ಗೆ ಇಡೀ ದೇಶಾದ್ಯಂತ ಆಂದೋಲನ ಮಾಡಬೇಕಿದೆ ಎಂದು ಯುದ್ವಿರ್​ ಸಿಂಗ್​ ಹೇಳಿದರು. ದೆಹಲಿಯಂತೆ ಬೆಂಗಳೂರಿನಲ್ಲೂ ಹೋರಾಟ‌ ಮಾಡಬೇಕು. ರೈತರ ಹೋರಾಟಕ್ಕೆ ಸರ್ಕಾರ ಮಣಿಯಲೇಬೇಕು ಎಂದು ಸಮಾವೇಶದಲ್ಲಿ ರೈತ ನಾಯಕ ಯುದ್ವಿರ್ ಸಿಂಗ್ ಹೇಳಿದರು.

HVR FARMERS SAMAVESHA 2

ಯುದ್ವಿರ್ ಸಿಂಗ್

ನಗರದಲ್ಲಿ ರೈತ ಮಹಾ ಪಂಚಾಯತ್​​ ಸಮಾವೇಶಕ್ಕೆ ಚಾಲನೆ ಇತ್ತ, ರೈತ ಮಹಾ ಪಂಚಾಯತ್​​ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಸಮಾವೇಶದಲ್ಲಿ ರೈತ ನಾಯಕ ಟಿಕಾಯತ್, ಯುದ್ವೀರ್ ಸಿಂಗ್​ ಪಾಲ್ಗೊಂಡರು. ಸಮಾವೇಶ ಉದ್ಘಾಟನೆಗೂ ಮುನ್ನ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ದೆಹಲಿ ಹೋರಾಟದಲ್ಲಿ ಹುತಾತ್ಮರಾದ ರೈತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

HVR FARMERS SAMAVESHA 1

ಸಮಾವೇಶದಲ್ಲಿ ಯುದ್ವೀರ್​ ಸಿಂಗ್​ ಹಾಗೂ ರಾಕೇಶ್​ ಟಿಕಾಯತ್

‘ಕೇಂದ್ರ ಸರ್ಕಾರ ರೈತ ಮುಖಂಡರ ಜೊತೆ ಮಾತಾಡುತ್ತಿಲ್ಲ’ ದೆಹಲಿ ಹೋರಾಟ ಎಷ್ಟು ದಿನ ಮುಂದುವರಿಯುತ್ತೆ ಗೊತ್ತಿಲ್ಲ. ಎಷ್ಟು ಕಾಲ ಮುಂದುವರೆಸಬೇಕು ಎಂಬುವುದು ಗೊತ್ತಿಲ್ಲ. ಕೇಂದ್ರ ಸರ್ಕಾರ ರೈತ ಮುಖಂಡರ ಜೊತೆ ಮಾತಾಡುತ್ತಿಲ್ಲ. ಹೆಸರಿಗೆ ಮಾತ್ರ ಒಂದು ಪಕ್ಷದ ಸರ್ಕಾರ ಇದೆ. ವಾಸ್ತವವಾಗಿ ಈ ಸರ್ಕಾರ ಬಂಡವಾಳದಾರರ ಕೈಯಲ್ಲಿದೆ ಎಂದು ರೈತ ಮಹಾ ಪಂಚಾಯತ್​​ ಸಮಾವೇಶದಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ಹೇಳಿದರು.

ಕಿಸಾನ್ ಕ್ರಾಂತಿ ಗೇಟ್​ನಲ್ಲಿ ನಾವು ಕುಳಿತಿರೋ ಜಾಗದಲ್ಲಿ ಶಸ್ತ್ರಾಸ್ತ್ರಗಳನ್ನ ತಯಾರು ಮಾಡೋ ಕಂಪನಿ ಇದೆ. ಸರ್ಕಾರದ ಅಧೀನದಲ್ಲಿರೋ ಆ ಕಂಪನಿಯನ್ನ ಕೇಂದ್ರ ಮಾರಲು ಹೊರಟಿದೆ. ಇದರ ವಿರುದ್ಧ ಹೋರಾಟ ಮಾಡಿ ಕಂಪನಿ ರಕ್ಷಣೆ ಮಾಡೋ ಕೆಲಸ ನಾವು ಮಾಡ್ತಿದ್ದೇವೆ. ಭಾರತದ ಕೃಷಿ ಕ್ಷೇತ್ರದಲ್ಲಿ ಅನೇಕ ಕಂಪನಿಗಳು ನುಗ್ತಿವೆ. ಈ ಮೂರು ಕಾನೂನಿನ ತಿರುಳು ಕೂಡ ಅದೆ ಆಗಿದೆ. ಈ ಮೂರು ಕಾನೂನುಗಳನ್ನು ನಾವು ತಡೆದು ನಿಲ್ಲಿಸಬೇಕಿದೆ. ನಾವೆಲ್ಲರೂ ನಮ್ಮನಮ್ಮಲ್ಲಿರೋ ಟ್ರ್ಯಾಕ್ಟರ್​ಗಳನ್ನ ಅಸ್ತ್ರಗಳನ್ನಾಗಿ ಬಳಸಬೇಕು. ಟ್ರ್ಯಾಕ್ಟರ್​ಗಳನ್ನ ನಾವು ಈಗ ಹೊರಗೆ ತರಬೇಕಾಗಿದೆ ಎಂದು ಟಿಕಾಯತ್​ ಹೇಳಿದರು.

ಈ ಆಂದೋಲನದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಿಕೊಳ್ಳಬೇಕಿದೆ. ಮುಂದೊಂದು ದಿನ‌ ವಿವಿಧ ಕಂಪನಿಗಳು ಬಂದು ನಮ್ಮ ಭೂಮಿಗೆ ಕೈ ಹಾಕುತ್ತವೆ. ನಮಗೆ ಮುಂದೆ ತುಂಡು ಭೂಮಿಯೂ ಉಳಿಯೋದಿಲ್ಲ. ನಮ್ಮ ಪೂರ್ವಜರು ಬಿಟ್ಟು ಹೋಗಿರೋ ಭೂಮಿಯ ಉಳಿವಿಗಾಗಿ ನಾವು ಹೋರಾಟ ಮಾಡಬೇಕಿದೆ. 2021ನೇ ವರ್ಷ ಆಂದೋಲನ ಮತ್ತು ಚಳುವಳಿಯ ವರ್ಷ. ಈ ವರ್ಷ ಆಂದೋಲನ ಮಾಡಬೇಕಿದೆ. ನಮ್ಮ ನಮ್ಮ ಬದುಕಿನ ಉಳಿವಿಗಾಗಿ ಆಂದೋಲನ ಮಾಡಬೇಕಿದೆ. ಯಾವುದೋ ಸರ್ಕಾರ ತರಲು ನಾವು ಆಂದೋಲನ ಮಾಡಬೇಕಿಲ್ಲ. ನಮ್ಮ ಉಳಿವಿಗಾಗಿ ಆಂದೋಲನ ಮಾಡಬೇಕಿದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಆಂದೋಲನದಲ್ಲಿ ಭಾಗವಹಿಸಬೇಕಿದೆ ಎಂದು ರಾಕೇಶ್​ ಟಿಕಾಯತ್​ ಹೇಳಿದರು.

HVR FARMERS SAMAVESHA 5

ಸಮಾವೇಶದಲ್ಲಿ ಹಸಿರು ಶಾಲು ಬೀಸಿದ ರೈತರು

ಇದನ್ನೂ ಓದಿ: ‘ನಮ್ಮ ಸಮಾಜದಲ್ಲಿ ಕೊಳಕು ಮನಸ್ಸುಗಳು ಇವೆ; ಕಳ್ಳನೋ, ಸುಳ್ಳನೋ ನಮ್ಮವನು ಸಿಎಂ ಆಗಬೇಕೆಂದರೆ ಒಳ್ಳೇ ಸಮಾಜ ನಿರ್ಮಾಣ ಹೇಗೆ ಸಾಧ್ಯ?’

Published On - 6:01 pm, Sun, 21 March 21