Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು

Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
ಭಾರತೀಯ ಸೇನೆಯ ಟ್ಯಾಂಕ್
Follow us
sandhya thejappa
|

Updated on:Mar 21, 2021 | 5:42 PM

ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್​ಸೈಟ್​​ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

1) ಕಿಚ್ಚ ಸುದೀಪ್ ಅಭಿಮಾನಿಗಳಿಂದ ಮಾರಾಣಾಂತಿಕ ಹಲ್ಲೆ; ಅಹೋರಾತ್ರ ಆರೋಪ ಕಿಚ್ಚ ಸುದೀಪ್​ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದ ಬರಹಗಾರ ಹಾಗೂ ಚಿಂತಕ ಅಹೋರಾತ್ರ ಅವರ ಮನೆಗೆ ಶನಿವಾರ ಕೆಲವರು ನುಗ್ಗಿ ದಾಂಧಲೆ ಮಾಡಿದ್ದರು. ಈ ರೀತಿ ದಾಂಧಲೆ ಮಾಡಿದ್ದು ಕಿಚ್ಚ ಸುದೀಪ್​ ಅಭಿಮಾನಿಗಳು ಎಂದು ಅಹೋರಾತ್ರ ಆರೋಪಿಸಿದ್ದರು. Link: ಪೊಲೀಸರು ಸರಿಯಾಗಿ ನಡೆದುಕೊಂಡಿಲ್ಲ; ಅಹೋರಾತ್ರ ಆರೋಪ

2) ಕಾಂಗ್ರೆಸ್ ಟೀ ರಾಜಕಾರಣ ಮಾಡುತ್ತಿದೆ: ಮೋದಿ ಅಸ್ಸಾಂನಲ್ಲಿ ಎರಡನೇ ಬಾರಿ ಎನ್​ಡಿಎ ಸರ್ಕಾರ ಅಧಿಕಾರಕ್ಕೇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾನುವಾರ ಬೋಕಾಖಾತ್​ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಮೋದಿ, ಭಾಷಣವನ್ನು ಅಸ್ಸಾಮಿ ಭಾಷೆಯಲ್ಲಿ ಆರಂಭಿಸಿದ್ದಾರೆ. Link: ಚಹಾ ತೋಟದ ಕಾರ್ಮಿಕರ ಕಲ್ಯಾಣಕ್ಕೆ ಬಿಜೆಪಿ ಬದ್ಧ: ನರೇಂದ್ರ ಮೋದಿ

3) ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ರನ್ನು ಬಿಜೆಪಿಯಿಂದ ಉಚ್ಚಾಟಿಸಬೇಕು. ಮೊನ್ನೆ ಈ ಬಗ್ಗೆ 25ಕ್ಕೂ ಹೆಚ್ಚು ಶಾಸಕರು ಚರ್ಚೆ ನಡೆಸಿದ್ದೇವೆ. ಸೋಮವಾರ ಶಾಸಕ ಯತ್ನಾಳ್​ಗೆ ತಕ್ಕ ಉತ್ತರ ನೀಡುತ್ತೇವೆ ಎಂದು ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. Link: ಯತ್ನಾಳ್ ಒಬ್ಬ ಕಾಂಗ್ರೆಸ್ ಏಜೆಂಟ್ ಆಗಿ‌ ಕೆಲಸ ಮಾಡ್ತಿದ್ದಾರೆ, ಅವರನ್ನ ಬಿಜೆಪಿಯಿಂದ ಉಚ್ಚಾಟಿಸಬೇಕು -ರೇಣುಕಾಚಾರ್ಯ

4) ಪ್ರಬಲ ಮಿಲಿಟರಿ ಶಕ್ತಿಯಿರುವ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನ ವಿಶ್ವದ ಅತ್ಯಂತ ಪ್ರಬಲ ಮಿಲಿಟರಿ ಶಕ್ತಿಯಿರುವ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ರಕ್ಷಣಾ ವಿದ್ಯಮಾನಗಳನ್ನು ವಿಶ್ಲೇಷಿಸುವ ವೆಬ್​ಸೈಟ್​ ಮಿಲಿಟರಿ ಡೈರೆಕ್ಟ್​ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಚೀನಾ ಮೊದಲ ಸ್ಥಾನ ಪಡೆದುಕೊಂಡಿದೆ. Link: ಭಾರತದ್ದು ವಿಶ್ವದ 4ನೇ ಬಲಿಷ್ಠ ಸೇನೆ: ಮಿಲಿಟರಿ ಡೈರೆಕ್ಟ್ ಅಧ್ಯಯನ ವರದಿ

5) ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದ ಕೆಲವು ಖ್ಯಾತ ಉದ್ಯಮಿಗಳ ಹಿತಕ್ಕಾಗಿ ರೈತರ ಆದಾಯ ಮತ್ತು ಭವಿಷ್ಯವನ್ನು ಕಸಿಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದಿದ್ದಾರೆ. Link: ರೈತರ ಭವಿಷ್ಯ ಕಸಿಯಲು ಕೇಂದ್ರ ಪ್ರಯತ್ನಿಸುತ್ತಿದೆ: ಕೃಷಿ ಕಾಯ್ದೆ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

6) ನಮ್ಮ ಸಮಾಜದಲ್ಲಿ ಕೊಳಕು ಮನಸ್ಸುಗಳು ಇವೆ; ಪರೋಕ್ಷವಾಗಿ ಸಿದ್ದ ಟಾಂಟ್ ಕೆಲವರು ತಪ್ಪು ಮಾಡಿದರೂ, ಭ್ರಷ್ಟಾಚಾರ ಮಾಡಿದರೂ, ಜೈಲಿಗೆ ಹೋದರೂ ಸುಲಭವಾಗಿ ಮರೆತು ಹೋಗುತ್ತಾರೆ. ನಮ್ಮ ಜನರು ಕೂಡ ಹಾಗೇ ಇದ್ದಾರೆ. ಈಗ ಭ್ರಷ್ಟಾಚಾರ ಗಂಭೀರವಾದ ವಿಷಯವಲ್ಲದಂತಾಗಿದೆ ಎಂದು ಪರೋಕ್ಷವಾಗಿ ಸಿಎಂ ಬಿ.ಎಸ್​.ಯಡಿಯೂರಪ್ಪ ವಿಚಾರ ಪ್ರಸ್ತಾಪಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. Link: ‘ನಮ್ಮ ಸಮಾಜದಲ್ಲಿ ಕೊಳಕು ಮನಸ್ಸುಗಳು ಇವೆ; ಕಳ್ಳನೋ, ಸುಳ್ಳನೋ ನಮ್ಮವನು ಸಿಎಂ ಆಗಬೇಕೆಂದರೆ ಒಳ್ಳೇ ಸಮಾಜ ನಿರ್ಮಾಣ ಹೇಗೆ ಸಾಧ್ಯ?’

7) ಬಸನಗೌಡ ಯತ್ನಾಳ್ ಹೇಳಿಕೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿರುಗೇಟು ಶಾಸಕ ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯು ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಅಧೀನದಲ್ಲಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದರು. ಎಸ್‌ಐಟಿಯನ್ನು ಸ್ವತಂತ್ರವಾಗಿ ಬಿಟ್ಟಿದ್ದೇವೆ. 2016ರಲ್ಲಿ ಸಚಿವರೊಬ್ಬರ ಸಿಡಿ ಪ್ರಕರಣ ಬಯಲಾಗಿತ್ತು. ಆಗಲೂ ಸಿಐಡಿ ವಿಚಾರಣೆ ನಡೆಸಿತ್ತು. Link: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಬೇರೆ ತನಿಖಾ ಸಂಸ್ಥೆಗೆ ವಹಿಸುವುದಿಲ್ಲ: ಬಸವರಾಜ ಬೊಮ್ಮಾಯಿ

8) ಅರಣ್ಯ ಉಳಿಸುವಲ್ಲಿ ಸಸ್ಯ ಸಂಪತ್ತು ಮಹತ್ವ ಪಡೆದಿದೆ ಇಶಾ ಫೌಂಡೇಷನ್‌ನಿಂದ ಕಾವೇರಿ ಕಾಲಿಂಗ್ ಅಭಿಯಾನ ಒಂದು ವರ್ಷ ಪೂರ್ತಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಅರಣ್ಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವ ಸುಧಾಕರ್, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸೇರಿ ಹಲವರು ಭಾಗಿಯಾದ್ದರು. Link: International Day of Forests 2021| ನೈಸರ್ಗಿಕ ಸಂಪತ್ತು ಉಳಿಸಲು ಪ್ರತ್ಯೇಕ ಹಣ ಮೀಸಲಿಟ್ಟಿದ್ದೇವೆ: ಬಿ.ಎಸ್​.ಯಡಿಯೂರಪ್ಪ

9) ರಾಹುಲ್​ ಕ್ರಿಕೆಟ್​ ಬದುಕಿಗೆ ದೊಡ್ಡ ಗಂಡಾಂತರ ! ಒಂದು ಕಳಪೆ ಫಾರ್ಮ್​ ಮತ್ತು ಇನ್ನೊಂದು ಕ್ಯಾಪ್ಟನ್ ಬಾಯಿಂದ ಬಂದ ಗೊಂದಲಮಯ ಹೇಳಿಕೆ. ಈಗ ಕನ್ನಡಿಗ ಕೆಎಲ್ ರಾಹುಲ್ ಅವರ ತಲೆ ತೂಗುಗತ್ತಿಯಾಗಿ ನೇತಾಡಲು ಆರಂಭಿಸಿದೆ. ಅಹಮದಾಬಾದ್​ನಲ್ಲಿ ನಡೆದ 5 ಟಿ20 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆಎಲ್​ ರಾಹುಲ್​ ಬಗ್ಗೆ ಪಂದ್ಯಾವಳಿಯ ಆರಂಭದಲ್ಲಿ ಹೆಚ್ಚಿನ ನಿರೀಕ್ಷೆ ಇಡಲಾಗಿತ್ತು. ಆದರೆ ಎಲ್ಲರ ನಿರೀಕ್ಷೆಗಳನ್ನ ಹುಸಿಗೊಳಿಸಿದ ರಾಹುಲ್​ ಆಡಿದ ನಾಲ್ಕು ಪಂದ್ಯಗಳಲ್ಲಿ 2ರಲ್ಲಿ ಶೂನ್ಯಕ್ಕೆ ಔಟಾದರೆ, ಇನ್ನೇರಡು ಪಂದ್ಯಗಳಲ್ಲಿ ಎರಡಂಕ್ಕಿಯ ಮೊತ್ತವನ್ನು ಸಹ ದಾಟಲಿಲ್ಲ. Link: India vs England: ಕೊಹ್ಲಿಯ ಆ ಒಂದು ಮಾತು ಕನ್ನಡಿಗ ರಾಹುಲ್​ ಕ್ರಿಕೆಟ್​ ಬದುಕಿಗೆ ದೊಡ್ಡ ಗಂಡಾಂತರ ತಂದಿದೆ..!

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.

Published On - 5:39 pm, Sun, 21 March 21