India vs England: ಕೊಹ್ಲಿಯ ಆ ಒಂದು ಮಾತು ಕನ್ನಡಿಗ ರಾಹುಲ್​ ಕ್ರಿಕೆಟ್​ ಬದುಕಿಗೆ ದೊಡ್ಡ ಗಂಡಾಂತರ ತಂದಿದೆ..!

India vs England: ನಾನು ಖಂಡಿತವಾಗಿಯೂ ಓಪನರ್​ ಆಗಿ ರೋಹಿತ್‌ ಜೊತೆ ಉತ್ತಮ ಜೊತೆಯಾಟ ಆಡಲು ಇಷ್ಟಪಡುತ್ತೇನೆ. ಏಕೆಂದರೆ ಇಬ್ಬರಲ್ಲಿ ಒಬ್ಬರು ಕ್ರೀಸ್‌ನಲ್ಲಿ ಇದ್ದರೂ ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಆತ್ಮವಿಶ್ವಾಸ ಸಿಗಲಿದೆ.

India vs England: ಕೊಹ್ಲಿಯ ಆ ಒಂದು ಮಾತು ಕನ್ನಡಿಗ ರಾಹುಲ್​ ಕ್ರಿಕೆಟ್​ ಬದುಕಿಗೆ ದೊಡ್ಡ ಗಂಡಾಂತರ ತಂದಿದೆ..!
ಕರ್ನಾಟದಿಂದ ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಏಕೈಕ ಆಟಗಾರನೆಂದರೆ ಅದು ಕೆ ಎಲ್ ರಾಹುಲ್. ರಾಹುಲ್ ಟಿ20 ಕ್ರಿಕೆಟ್​ನಲ್ಲಿ ಒಟ್ಟು 48 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 142.19 ಸ್ಟ್ರೈಕ್ ರೇಟ್​ನಲ್ಲಿ 1557 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 12 ಅರ್ಧಶತಕಗಳು ಸೇರಿವೆ.
Follow us
ಪೃಥ್ವಿಶಂಕರ
|

Updated on: Mar 21, 2021 | 3:39 PM

ಅಹಮದಾಬಾದ್: ಒಂದು ಕಳಪೆ ಫಾರ್ಮ್​ ಮತ್ತು ಇನ್ನೊಂದು ಕ್ಯಾಪ್ಟನ್ ಬಾಯಿಂದ ಬಂದ ಗೊಂದಲಮಯ ಹೇಳಿಕೆ. ಈಗ ಕನ್ನಡಿಗ ಕೆಎಲ್ ರಾಹುಲ್ ಅವರ ತಲೆ ತೂಗುಗತ್ತಿಯಾಗಿ ನೇತಾಡಲು ಆರಂಭಿಸಿದೆ. ಅಹಮದಾಬಾದ್​ನಲ್ಲಿ ನಡೆದ 5 ಟಿ20 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆಎಲ್​ ರಾಹುಲ್​ ಬಗ್ಗೆ ಪಂದ್ಯಾವಳಿಯ ಆರಂಭದಲ್ಲಿ ಹೆಚ್ಚಿನ ನಿರೀಕ್ಷೆ ಇಡಲಾಗಿತ್ತು. ಆದರೆ ಎಲ್ಲರ ನಿರೀಕ್ಷೆಗಳನ್ನ ಹುಸಿಗೊಳಿಸಿದ ರಾಹುಲ್​ ಆಡಿದ ನಾಲ್ಕು ಪಂದ್ಯಗಳಲ್ಲಿ 2ರಲ್ಲಿ ಶೂನ್ಯಕ್ಕೆ ಔಟಾದರೆ, ಇನ್ನೇರಡು ಪಂದ್ಯಗಳಲ್ಲಿ ಎರಡಂಕ್ಕಿಯ ಮೊತ್ತವನ್ನು ಸಹ ದಾಟಲಿಲ್ಲ. ಹಾಗಾಗಿ ರಾಹುಲ್​ ಅವರನ್ನು ಕಡೆಯ ಪಂದ್ಯದಿಂದ ಕೈಬಿಡಲಾಯಿತು. ಹೀಗಾಗಿ ರಾಹುಲ್ ಬದಲು ನಾಯಕ ಕೊಹ್ಲಿಯೆ ರೋಹಿತ್​ ಜೊತೆಗೂಡಿ ಇನ್ನಿಂಗ್ಸ್ ಆರಂಭಿಸಿದರು. ಜೊತೆಗೆ ಒಳ್ಳೇಯ ಜೊತೆಯಾಟವನ್ನು ಸಹ ನೀಡಿದರು.

54 ಎಸೆತಗಳಲ್ಲಿ 98 ರನ್‌ಗಳ ಜೊತೆಯಾಟ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ, ಆರಂಭಿಕರಾದ ರೋಹಿತ್ ಶರ್ಮಾ ಮತ್ತು ನಾಯಕ ವಿರಾಟ್ ಕೊಹ್ಲಿ ಅದ್ಭುತ ಓಪನಿಂಗ್ ನೀಡಿ ಭದ್ರ ಬುನಾದಿ ಹಾಕಿಕೊಟ್ರು. ಕೊಹ್ಲಿಗಿಂತ ವೇಗವಾಗಿ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ, 34 ಬಾಲ್ನಲ್ಲಿ 64 ರನ್ಗಳಿಸಿದ್ರು. ನಾಯಕ ಕೊಹ್ಲಿ ಅನುಭವಿ ಓಪನರ್‌ ರೋಹಿತ್‌ ಶರ್ಮಾ ಜೊತೆಗೂಡಿ ಟೀಮ್ ಇಂಡಿಯಾ ಪರ ಇನಿಂಗ್ಸ್‌ ಆರಂಭಿಸಿದ್ದು ಎಲ್ಲರನ್ನು ನಿಬ್ಬೆರಗಾಗಿಸಿತ್ತು. ವೈಟ್‌ಬಾಲ್‌ ಕ್ರಿಕೆಟ್‌ನ ಇಬ್ಬರು ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಮುಂಚೂಣಿಯಲ್ಲಿ ನಿಂತು 54 ಎಸೆತಗಳಲ್ಲಿ 98 ರನ್‌ಗಳ ಜೊತೆಯಾಟ ಆಡುವುದರೊಂದಿಗೆ ಭಾರತದ ಭರ್ಜರಿ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟರು.​

ತನ್ನ ಸ್ಥಾನದ ಬಗ್ಗೆ ಆತಂಕ ಶುರುವಾಗಿದೆ.. ಈ ಇಬ್ಬರ ಆಟ ನೋಡಿದ ಕ್ರಿಕೆಟ್​ ಪಂಡಿತರು ಇನ್ಮುಂದೆ ಕೊಹ್ಲಿಯೇ ಆರಂಭಿಕನಾಗಿ ಕಣಕ್ಕಿಳಿಯಬೇಕು ಎನ್ನುತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಕೊಹ್ಲಿ ಸಹ ಐಪಿಎಲ್​ನಲ್ಲಿ ನಾನೇ ಓಪನರ್​ ಆಗಿ ಆಡುತ್ತೇನೆ ಎಂದಿದ್ದಾರೆ. ಹೀಗಾಗಿ ಕೊಹ್ಲಿಯ ಈ ಮಾತುಗಳನ್ನ ಕೇಳಿದ ರಾಹುಲ್​ಗೆ ಟೀಂ ಇಂಡಿಯಾದಲ್ಲಿ ತನ್ನ ಸ್ಥಾನದ ಬಗ್ಗೆ ಆತಂಕ ಶುರುವಾಗಿದೆ. ಒಂದು ವೇಳೆ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿದರೆ, ರಾಹುಲ್​ಗೆ ಬದಲಿ ಸ್ಥಾನ ಯಾವುದು ಎಂಬುದು ಸ್ಪಷ್ಟವಾಗಿಲ್ಲ. ಏಕೆಂದರೆ ಕೆಲವು ಪಂದ್ಯಗಳಲ್ಲಿ 6ನೇ ಕ್ರಮಾಂಕದಲ್ಲಿ ಇಳಿದು ಬ್ಯಾಟಿಂಗ್​ ಮಾಡಿರುವ ರಾಹುಲ್​ಗೆ ಅಂತಹ ಯಶಸ್ಸು ಸಿಕ್ಕಿಲ್ಲ. ಹಾಗಾಗಿ ರಾಹುಲ್​ ಓಪನರ್​ ಆಗಿರುವುದೇ ಒಳಿತು.

ಆಟಗಾರರು ಭಯಬಿಟ್ಟು ಮೈದಾನದಲ್ಲಿ ಬ್ಯಾಟ್​ ಬೀಸುತ್ತಾರೆ.. ಪಂದ್ಯದ ಗೆಲುವಿನ ಬಳಿಕ ಮಾತಾನಾಡಿದ ನಾಯಕ ಕೊಹ್ಲಿ ಹೌದು, ನಾನು ಐಪಿಎಲ್‌ನಲ್ಲೂ ಆರಂಭಿಕನಾಗಿ ಕಣಕ್ಕಿಳಿಯಲ್ಲಿದ್ದೇನೆ. ನೋಡಿ, ನಾನು ಈ ಹಿಂದೆ ಬೇರೆ ಬೇರೆ ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡಿದ್ದೇನೆ, ಆದರೆ ನಾವು ಈಗ ಬಹಳ ಮಧ್ಯಮ ಕ್ರಮಾಂಕವನ್ನು ಹೊಂದಿದ್ದೇವೆ ಎಂದು ನನಗೆ ಅನಿಸುತ್ತದೆ. ಹೀಗಾಗಿ ಇಬ್ಬರು ಶ್ರೇಷ್ಠ ಆಟಗಾರರಿಗೆ ಆಡಲು ಅತಿ ಹೆಚ್ಚು ಎಸೆತಗಳು ಸಿಗಲಿ ಎಂಬುದು ಇದರ ಹಿಂದಿನ ಉದ್ದೇಶ. ಹಾಗಾಗಿ ನಾನು ಖಂಡಿತವಾಗಿಯೂ ಓಪನರ್​ ಆಗಿ ರೋಹಿತ್‌ ಜೊತೆ ಉತ್ತಮ ಜೊತೆಯಾಟ ಆಡಲು ಇಷ್ಟಪಡುತ್ತೇನೆ. ಏಕೆಂದರೆ ಇಬ್ಬರಲ್ಲಿ ಒಬ್ಬರು ಕ್ರೀಸ್‌ನಲ್ಲಿ ಇದ್ದರೂ ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಆತ್ಮವಿಶ್ವಾಸ ಸಿಗಲಿದೆ. ಇದರಿಂದ ತಂಡದ ಮೊತ್ತವೂ ಹೆಚ್ಚಲಿದೆ. ಆಟಗಾರರು ಭಯಬಿಟ್ಟು ಮೈದಾನದಲ್ಲಿ ಬ್ಯಾಟ್​ ಬೀಸುತ್ತಾರೆ. ಹೀಗಾಗಿ ಇದನ್ನೇ ಮುಂದುವರಿಯಲು ಇಚ್ಚಿಸುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: India vs England: ಕಿಂಗ್​ ಕೊಹ್ಲಿ- ಬಟ್ಲರ್​ ವಾಕ್ಸಮರ! ವಿರಾಟ ರೂಪಕ್ಕೆ ಬೆದರಿದ​ ಬಟ್ಲರ್​, ವಿಡಿಯೋ ನೋಡಿ​!

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ