ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನ ಬಂಧನ: ರಾಯಚೂರಿನಲ್ಲಿ ಪೊಲೀಸ್ ಅಧಿಕಾರಿಯ ಸಂಬಂಧಿಯಿಂದ ಅಮಾನವೀಯ ಕೃತ್ಯ

ಗ್ರಾಮದ ಸರ್ಕಾರಿ ಶಾಲೆಯಲ್ಲಿ ಯುವಕೊಬ್ಬನಿಗೆ ಸೋಗರೆಡ್ಡಿ ಬಲವಂತವಾಗಿ ಸೆಕ್ಸ್ ಮಾಡಿದ್ದ, ಈ ನಿಟ್ಟಿನಲ್ಲಿ ಸಂತ್ರಸ್ಥ ಯುವಕ ನವೀನ್ ತಂದೆ ಸಿರವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಆ ಮೂಲಕ ಸಂತ್ರಸ್ತ ಯುವಕ ನೀಡಿದ್ದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನ ಬಂಧನ: ರಾಯಚೂರಿನಲ್ಲಿ ಪೊಲೀಸ್ ಅಧಿಕಾರಿಯ ಸಂಬಂಧಿಯಿಂದ ಅಮಾನವೀಯ ಕೃತ್ಯ
ಸೋಗರೆಡ್ಡಿ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Mar 13, 2021 | 11:03 AM

ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಯದ್ದಲದಿನ್ನಿ ಗ್ರಾಮದಲ್ಲಿ ಯುವಕನಿಗೆ ಲೈಂಗಿಕ ಕಿರುಕುಳ ಕೊಟ್ಟ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿರವಾರ ಪೊಲೀಸರು ಆರೋಪಿ ಸೋಗರೆಡ್ಡಿಯನ್ನ ಬಂಧಿಸಿದ್ದು, ಬಂಧಿತ ಆರೋಪಿ ಬೆಳಗಾವಿ ಮೂಲದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಸಂಬಂಧಿ ಎಂದು ತಿಳಿದು ಬಂದಿದೆ.

ಗ್ರಾಮದ ಸರ್ಕಾರಿ ಶಾಲೆಯಲ್ಲಿ ಯುವಕೊಬ್ಬನಿಗೆ ಸೋಗರೆಡ್ಡಿ ಬಲವಂತವಾಗಿ ಸೆಕ್ಸ್ ಮಾಡಿದ್ದ. ಜೊತೆಗೆ, ಬಲವಂತವಾಗಿ ಯುವಕನಿಗೆ ಸೆಕ್ಸ್ ಮಾಡಿದ ವಿಡಿಯೋ ಕೂಡ ವೈರಲ್ ಆಗಿತ್ತು. ಈ ನಿಟ್ಟಿನಲ್ಲಿ ಸಂತ್ರಸ್ಥ ಯುವಕನ ತಂದೆ ಸಿರವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಆ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಮೈಸೂರಿನಲ್ಲಿ ಮತ್ತೊಂದು ರೀತಿಯ ಅಮಾನವೀಯ ಘಟನೆ ನಡೆದಿತ್ತು! ಏನದು?: ಕಾಲ ಕೆಟ್ಟು ಹೋಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಹಿಳೆಯರು ಮಕ್ಕಳು ಮಾತ್ರವಲ್ಲ ಪ್ರಾಣಿಗಳು ಕೂಡ ಸುರಕ್ಷಿತವಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಮೈಸೂರಿನಲ್ಲಿ ನಡೆದಿರುವ ಅನಾಗರಿಕ ಹಾಗೂ ಹೇಯ ಕೃತ್ಯ. ಹೌದು ಮೈಸೂರಿನ ನಿವಾಸಿ ಸೋಮಶೇಖರ್ ಒಬ್ಬ ವಿಕೃತ ಮನಸಿನವನಾಗಿದ್ದು, ಈತ ಮಾಡಿರುವ ಕೃತ್ಯ ಹೇಳಲಾಗದಷ್ಟು ಅಸಹ್ಯವಾಗಿದೆ. ನಾಗರಿಕ ಸಮಾಜದಲ್ಲಿ ಇಂತಹ ಮನಸ್ಥಿತಿಯವರು ಕೂಡ ಇರುತ್ತಾರೆ ಎನ್ನುವ ಬಗ್ಗೆ ಇನ್ನಾದರು ಜನರು ಎಚ್ಚೆತ್ತು ಕೊಳ್ಳುವುದು ಅಗತ್ಯವಾಗಿದೆ.

ನಾಯಿಯೊಂದಕ್ಕೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸೋಮಶೇಖರ್ ಜೈಲು ಸೇರಿದ್ದಾ‌ನೆ. ಅಚ್ಚರಿ ಆದರೂ ಇದು ಸತ್ಯ. ಮೈಸೂರಿನ ಗೋಕುಲಂ 3ನೇ ಹಂತದ ಗಣಪತಿ ದೇವಸ್ಥಾನದ ಬಳಿ ಕಳೆದ ತಿಂಗಳು 11ರಂದು ಈ ಹೇಯ ಕೃತ್ಯ ನಡೆದಿದ್ದು, ಈತನ ಈ ಅನಾಗರಿಕ‌ ಕೃತ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು.

ಹೌದು ಅಲ್ಲೇ ಇದ್ದ ನಾಯಿ ಮೇಲೆ ಎರಗಿರುವ‌ ಪಾಪಿ ಸೋಮಶೇಖರ್ ನಾಯಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ವಿಕೃತ ಮನಸಿನ ಸೋಮಶೇಖರ್ ಪೊಲೀಸರ ಬಂಧನದಲ್ಲಿದ್ದಾನೆ.

ಇದನ್ನೂ ಓದಿ: Hathras Case| ಮತ್ತೆ ಸುದ್ದಿಯಾಯ್ತು ಹತ್ರಾಸ್​; ತನ್ನಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ತಂದೆಯನ್ನು ಗುಂಡಿಕ್ಕಿ ಕೊಂದ ಆರೋಪಿ