Hathras Case| ಮತ್ತೆ ಸುದ್ದಿಯಾಯ್ತು ಹತ್ರಾಸ್​; ತನ್ನಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ತಂದೆಯನ್ನು ಗುಂಡಿಕ್ಕಿ ಕೊಂದ ಆರೋಪಿ

ಅಪ್ಪನ ಹತ್ಯೆ ಆಗುತ್ತಿದ್ದಂತೆ ಸಂತ್ರಸ್ತೆ ಗೋಳಿಟ್ಟಿದ್ದಾಳೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ..ನ್ಯಾಯ ಕೊಡಿಸಿ..ಮೊದಲು ಆತ ನನಗೆ ಲೈಂಗಿಕ ಹಿಂಸೆ ನೀಡಿದ. ಈಗ ನನ್ನ ತಂದೆಯನ್ನೇ ಕೊಂದ. ನನ್ನ ತಂದೆ ಯಾರೊಂದಿಗೂ ವೈರತ್ವ ಕಟ್ಟಿಕೊಂಡವರಲ್ಲ ಎಂದು ಪೊಲೀಸ್​ ಸ್ಟೇಶನ್​ಹೊರಗೆ ನಿಂತು ದೊಡ್ಡದಾಗಿ ಅತ್ತಿದ್ದಾಳೆ.

Hathras Case| ಮತ್ತೆ ಸುದ್ದಿಯಾಯ್ತು ಹತ್ರಾಸ್​; ತನ್ನಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ತಂದೆಯನ್ನು ಗುಂಡಿಕ್ಕಿ ಕೊಂದ ಆರೋಪಿ
ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು
Follow us
Lakshmi Hegde
|

Updated on: Mar 02, 2021 | 7:39 PM

ಹತ್ರಾಸ್​: 2018ರಲ್ಲಿ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಜೈಲು ಸೇರಿದ್ದ ಆರೋಪಿ, ಇದೀಗ ಜಾಮೀನಿನ ಮೇಲೆ ಹೊರಬಂದು ಆಕೆಯ ತಂದೆಯನ್ನು ಗುಂಡಿಟ್ಟು ಕೊಂದಿದ್ದಾನೆ. ಸೋಮವಾರ ಆರೋಪಿ ಗೌರವ್ ಶರ್ಮಾ ದುಷ್ಕೃತ್ಯ ಎಸಗಿದ್ದಾನೆ. ಇಂದು ಆರೋಪಿ ಗೌರವ್ ಶರ್ಮಾ ಕುಟುಂಬ ಮತ್ತು ಸಂತ್ರಸ್ತ ಯುವತಿ ಕುಟುಂಬದ ಮಧ್ಯೆ ಸೋಮವಾರ ಸಂಜೆ 4.30ರ ಹೊತ್ತಿಗೆ ಹತ್ರಾಸ್​ ಗ್ರಾಮದ ಹೊರವಲಯದಲ್ಲಿರುವ ದೇವಸ್ಥಾನದ ಬಳಿ ದೊಡ್ಡ ವಾಗ್ವಾದ ನಡೆದಿದೆ. ಈ ಜಗಳ ಯುವತಿಯ ತಂದೆಯ ಸಾವಿನಲ್ಲಿ ಅಂತ್ಯಗೊಂಡಿದೆ.

ಈ ಘಟನೆಯ ಬಗ್ಗೆ ಹತ್ರಾಸ್​ ಪೊಲೀಸರು ವಿವರಿಸಿದ್ದಾರೆ. 2018ರಲ್ಲಿ ಯುವತಿಯ ತಂದೆ ಆರೋಪಿ ಗೌರವ್​ ಶರ್ಮಾ ವಿರುದ್ಧ ಲೈಂಗಿಕ ದೂರು ದಾಖಲಿಸಿದ್ದರು. ತನ್ನ ಮಗಳಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾನೆ ಎಂದು ಆರೋಪಿಸಿದ್ದರು. ಆದರೆ ಆತನ ಬಂಧನದ ನಂತರವೂ ಹೆಚ್ಚು ದಿನಗಳೇನೂ ಜೈಲಿನಲ್ಲಿ ಇರಲಿಲ್ಲ. ಒಂದೇ ತಿಂಗಳಲ್ಲಿ ಸ್ಥಳೀಯ ಕೋರ್ಟ್​ನಿಂದ ಜಾಮೀನು ಪಡೆದು ಹೊರಬಂದಿದ್ದ. ಈ ಪ್ರಕರಣ ನಡೆದಾಗಿನಿಂದಲೂ ಎರಡೂ ಕುಟುಂಬಗಳ ಮಧ್ಯೆ ಹಗೆತನ ಮುಂದುವರಿದಿತ್ತು. ಸೋಮವಾರ ಸಹ ಗೌರವ್​ ಶರ್ಮಾನ ಪತ್ನಿ ಮತ್ತು ಅತ್ತೆ ಹತ್ರಾಸ್​ ಹೊರವಲಯದಲ್ಲಿರುವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗಿದ್ದರು. ಅದೇ ವೇಳೆ, ಸಂತ್ರಸ್ತೆ ಮತ್ತು ಆಕೆಯ ಸೋದರಿ ಕೂಡ ಅದೇ ದೇಗುಲಕ್ಕೆ ಹೋಗಿದ್ದರು. ಅವರನ್ನು ನೋಡುತ್ತಿದ್ದಂತೆ ಗೌರವ್​ ಶರ್ಮಾ ಮನೆಯ ಮಹಿಳೆಯರು ಜಗಳ ತೆಗೆದರು. ಕೆಲವೇ ಹೊತ್ತಲ್ಲಿ ಅಲ್ಲಿಗೆ ಗೌರವ್​ ಶರ್ಮಾ ಕೂಡ ಬಂದ.. ಹಾಗೇ ಈ ಇಬ್ಬರು ಯುವತಿಯರ ತಂದೆಯೂ ಬಂದರು. ವಾಗ್ವಾದ ಮತ್ತೂ ತಾರಕಕ್ಕೇರಿತು. ಅಷ್ಟರಲ್ಲಿ ಗೌರವ್​ ಶರ್ಮಾ ತನ್ನ ಕುಟುಂಬದವರೇ ಆದ ಒಂದಷ್ಟು ಹುಡುಗರನ್ನು ಕರೆದ. ನಂತರ ಸಂತ್ರಸ್ತೆಯ ತಂದೆಗೆ ಗುಂಡಿನಿಂದ ಹೊಡೆದಿದ್ದಾನೆ. ತೀವ್ರ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿಗೆ ಹೋಗುವಷ್ಟರಲ್ಲೇ ಜೀವ ಹೋಗಿತ್ತು ಎಂದು ಹತ್ರಾಸ್​ ಪೊಲೀಸ್ ಮುಖ್ಯಸ್ಥ ವಿನೀತ್​ ಜೈಸ್ವಾಲ್​ ವಿಡಿಯೋ ಸ್ಟೇಟ್​ಮೆಂಟ್​ನಲ್ಲಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಗೌರವ್​ಶರ್ಮಾ ಕುಟುಂಬದ ಇನ್ನೋರ್ವ ಸದಸ್ಯ ಕೂಡ ಅರೆಸ್ಟ್ ಆಗಿದ್ದಾನೆ. ಇನ್ನು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಪೊಲೀಸರಿಗೆ ತಿಳಿಸಿದ್ದಾರೆ.

ಯುವತಿಯ ಆಕ್ರಂದನ ಅಪ್ಪನ ಹತ್ಯೆ ಆಗುತ್ತಿದ್ದಂತೆ ಸಂತ್ರಸ್ತೆ ಗೋಳಿಟ್ಟಿದ್ದಾಳೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ..ನ್ಯಾಯ ಕೊಡಿಸಿ..ಮೊದಲು ಆತ ನನಗೆ ಲೈಂಗಿಕ ಹಿಂಸೆ ನೀಡಿದ. ಈಗ ನನ್ನ ತಂದೆಯನ್ನೇ ಕೊಂದ. ನನ್ನ ತಂದೆ ಯಾರೊಂದಿಗೂ ವೈರತ್ವ ಕಟ್ಟಿಕೊಂಡವರಲ್ಲ ಎಂದು ಪೊಲೀಸ್​ ಸ್ಟೇಶನ್​ಹೊರಗೆ ನಿಂತು ದೊಡ್ಡದಾಗಿ ಅಳುತ್ತಿರುವುದನ್ನು ಮಾಧ್ಯಮಗಳು ವಿಡಿಯೋ ಮಾಡಿವೆ. ಕೇಸ್​ ವಾಪಸ್​ ಪಡೆಯುವಂತೆ ನಮಗೆ ಸದಾ ಬೆದರಿಕೆ ಒಡ್ಡುತ್ತಿದ್ದ. ಆದರೆ ನನ್ನ ತಂದೆ ಒಪ್ಪಿರಲಿಲ್ಲ. ದೇವಸ್ಥಾನದಲ್ಲೂ ಅಷ್ಟೇ ಅವರೇ ಮೊದಲು ಜಗಳಕ್ಕೆ ಬಂದರು. ನಾವು ಅಲ್ಲಿಂದ ಹೊರಟರೂ ನಮ್ಮನ್ನು ಬಿಡಲಿಲ್ಲ ಎಂದೂ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.

ಇನ್ನು ಈ ಆರೋಪಿ ಗೌರವ್​ ಶರ್ಮಾ ಗೌರವ್ ಸೊಂಗ್ರಾ ಎಂಬ ಹೆಸರಲ್ಲಿ ಫೇಸ್​ಬುಕ್​ ಅಕೌಂಟ್​ ಬಳಕೆ ಮಾಡುತ್ತಿದ್ದಾನೆ. ಅದರಲ್ಲಿ ಆತ ತನ್ನನ್ನು ತಾನು ಸಮಾಜವಾದಿ ಪಕ್ಷದ ಮುಖಂಡ ಎಂದು ಬರೆದುಕೊಂಡಿದ್ದಾನೆ. ಇತ್ತೀಚೆಗೆ ಅಂದರೆ ಫೆ.27ರಂದು ತನ್ನ ಫೇಸ್​ಬುಕ್​ನಲ್ಲಿ ಒಂದು ಪೋಸ್ಟ್ ಹಾಕಿದ್ದ ಗೌರವ್​, ಮಾರ್ಚ್​ 3ರಂದು ಅಖಿಲೇಶ್​ ಯಾದವ್​ ಅವರು ಅಲಿಘಡ್​ನಲ್ಲಿ ರೈತರ ಸಭೆ ಕರೆದಿದ್ದು, ಅದರಲ್ಲಿ ಪಾಲ್ಗೊಳ್ಳಿ ಎಂದು ಜನರಿಗೆ ಕರೆಕೊಟ್ಟಿದ್ದಾನೆ ಎಂದೂ ಪೋಲಿಸರು ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೇ ನಡೆದಿದೆ ಗ್ಯಾಂಗ್ ರೇಪ್​ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ 20 ವರ್ಷ ದಲಿತ ಯುವತಿಯ ಮೇಲೆ ನಾಲ್ವರು ಗ್ಯಾಂಗ್​ರೇಪ್​ ಮಾಡಿದ್ದರು. ಇದು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ನಂತರ ಆ ಯುವತಿ ದೆಹಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಅದರಲ್ಲೂ ಪೊಲೀಸರು ರಾತ್ರೋರಾತ್ರಿ ಯುವತಿಯ ಶವಸಂಸ್ಕಾರ ಮಾಡಿ, ಇಡೀ ದೇಶದ ಟೀಕೆಗೆ ಗುರಿಯಾಗಿದ್ದರು. ಈ ಕೇಸ್​ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.

ಇದನ್ನೂ ಓದಿ: ಹತ್ರಾಸ್​ ಗ್ಯಾಂಗ್​ರೇಪ್: ನಾಲ್ವರು ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್​ಶೀಟ್

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ