ಮೈಸೂರು: ರಾಜ್ಯಾದ್ಯಂತ ಮುಂಗಾರು ಮಳೆ ಜೋರಾಗಿಯೇ ಬೀಳುತ್ತಿದೆ. ಮಡಿಕೇರಿ ಭಾಗದಲ್ಲೂ ಮಳೆ ಉತ್ತಮವಾಗಿದೆ. ಈ ಮಧ್ಯೆ, ಕಬಿನಿ ಜಲಾನಯನ ಪ್ರದೇಶದಲ್ಲಿಯೂ ಮಳೆ ಬಿರುಸುಗೊಂಡಿದೆ. ಇದರಿಂದ ನಿಧಾನವಾಗಿ ತುಂಬತೊಡಗಿದ್ದ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಈಗ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಜುಲೈ ಅಂತ್ಯದ ವೇಳೆಗೆ ಕಾವೇರಿ ಜಲಾನಯ ಪ್ರದೇಶಗಳಲ್ಲಿ ಮುಂಗಾರಿ ಮಳೆ ಹೆಚ್ಚಾಗಿ ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಕೆಆರ್‌ಎಸ್ ಅಣೆಕಟ್ಟೆ ಭರ್ತಿ ಯಾಗುವ ವಾಡಿಕೆಯಿದೆ.
ಅದರಂತೆ ನಿನ್ನೆ ಮತ್ತು ಇಂದು ಕಬಿನಿ ಜಲಾಶಯ ಪ್ರದೇಶದಲ್ಲಿ ಮಳೆ ಬೀಳುತ್ತಿದ್ದು, ಕಬಿನಿ ಜಲಾಶಯದಲ್ಲಿ ನೀರಿನ ಒಳಹರಿವು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಜಲಾಶಯದ ಇಂದಿನ ಒಳ ಹರಿವು 11,628 ಕ್ಯೂಸೆಕ್ ಗೆ ಹೆಚ್ಚಳಗೊಂಡಿದೆ. ಜಲಾಶಯದ ಹೊರಹರಿವು 1,700 ಕ್ಯೂಸೆಕ್ ನಷ್ಟಾಗಿದೆ. ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯವು ಸಮುದ್ರ ಮಟ್ಟದಿಂದ 2284 ಅಡಿ ಸಾಮರ್ಥ್ಯ ಹೊಂದಿದೆ. ಜಲಾಶಯದ ಇಂದಿನ ನೀರಿನ ಮಟ್ಟ 2278.71 ಅಡಿಗೆ ಏರಿಕೆಯಾಗಿದೆ. ಜಲಾಶಯದಲ್ಲಿ ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದೆ. ಜಲಾಶಯದಲ್ಲಿಂದು 16.31 ಟಿಎಂಸಿ ನೀರು ಸಂಗ್ರಹಗೊಂಡಿದೆ.
6ನೇ ಬಾರಿಗೆ ಕಾವೇರಿ ಮಾತೆಗೆ ಬಾಗಿನ ಅರ್ಪಿಸಲು ಸಜ್ಜಾಗುತ್ತಿರುವ ಸಿಎಂ ಯಡಿಯೂರಪ್ಪ: ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
5ನೇ ಬಾರಿಗೆ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ ಭಾಗ್ಯ ನನ್ನದು CM ಯಡಿಯೂರಪ್ಪ
ಇನ್ನು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಡ್ಯಾಂ ಕೆಆರ್‌ಎಸ್ ಡ್ಯಾಂ ನಲ್ಲಿ ಇಂದಿನ ನೀರಿನ ಮಟ್ಟ ಹೀಗಿದೆ:
ಡ್ಯಾಂ ನ ಗರಿಷ್ಠ ಮಟ್ಟ – 124.80 ಅಡಿ
ಇಂದಿನ ಮಟ್ಟ – 89.62 ಅಡಿ
ಒಳಹರಿವು – 6039 ಕ್ಯೂಸೆಕ್
ಹೊರ ಹರಿವು- 1426 ಕ್ಯೂಸೆಕ್
Karnataka Dams: ಜುಲೈ18 ರವರೆಗೂ ವರುಣನ ಆರ್ಭಟ, ಜಲಾಶಯಗಳತ್ತ ಹರಿದುಬರುತ್ತಿದೆ ಮಳೆ ನೀರು
(good rain in kabini reservoir catchment area krs dam gets more inflow of water)
Published On - 12:22 pm, Thu, 15 July 21