ಮಂಡ್ಯ ಜಿಲ್ಲಾದ್ಯಂತ ಉತ್ತಮ ಮಳೆ, ಅರಳಿ ನಿಂತ ಕೆಂಪು ಸುಂದ್ರಿ ಗುಲಾಬಿ: ರೈತರ ಮೊಗದಲ್ಲಿ ಮಂದಹಾಸ

| Updated By: ಗಂಗಾಧರ​ ಬ. ಸಾಬೋಜಿ

Updated on: May 26, 2024 | 5:47 PM

ಕೆಂಪು ಬಣ್ಣದ ಗುಲಾಬಿ, ಪ್ರೀತಿ, ಪ್ರೇಮದ ಸಂತೇಕ. ತಮ್ಮ ಪ್ರೀತಿ ನಿವೇದನೆಯನ್ನ ಗುಲಾಬಿ ಕೊಡುವ ಮೂಲಕ ಕೂಡ ಹೇಳಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಹಾರಕ್ಕೆ, ದೇವರ ಮುಡಿಗೂ ಕೂಡ ಅರ್ಪಣೆಯಾಗುತ್ತದೆ. ಆದರೆ ಇಂತಹ ಗುಲಾಬಿ ಹೂವಿಗೆ ಕೆಲವೇ ದಿನಗಳ ಕೆಳಗೆ ಸಂಕಷ್ಟ ಎದುರಾಗಿತ್ತು. ಬಿಸಿಲ ಜಳಕ್ಕೆ ಪ್ರೀತಿಯ ಸಂಕೇತವಾದ ಗುಲಾಬಿ ಮುದುಡಿ ಹೋಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಗುಲಾಬಿಗೆ ಮತ್ತೆ ಕಳೆ ಬಂದಿದೆ.

ಮಂಡ್ಯ ಜಿಲ್ಲಾದ್ಯಂತ ಉತ್ತಮ ಮಳೆ, ಅರಳಿ ನಿಂತ ಕೆಂಪು ಸುಂದ್ರಿ ಗುಲಾಬಿ: ರೈತರ ಮೊಗದಲ್ಲಿ ಮಂದಹಾಸ
ಮಂಡ್ಯ ಜಿಲ್ಲಾದ್ಯಂತ ಉತ್ತಮ ಮಳೆ, ಅರಳಿ ನಿಂತ ಕೆಂಪು ಸುಂದ್ರಿ ಗುಲಾಬಿ: ರೈತರ ಮೊಗದಲ್ಲಿ ಮಂದಹಾಸ
Follow us on

ಮಂಡ್ಯ, ಮೇ 26: ಸಕ್ಕರಿನಗರಿ ಮಂಡ್ಯದಲ್ಲಿ ಕೆಲವೇ ದಿನಗಳ ಕೆಳಗೆ ಭೀಕರ ಬರ. ಬಿಸಿಲ ಜಳಕ್ಕೆ ರೈತ ಸಮುದಾಯ ತತ್ತರಿಸಿ ಹೋಗಿತ್ತು. ಬೆಳೆದ ಬೆಳೆಗಳನ್ನ ಉಳಿಸಿಕೊಳ್ಳಲು ಪರದಾಟ ನಡೆಸುತ್ತಿದ್ದರು. ಆದರೆ ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದೆ (Rain). ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆ ಮೂಲಕ ಬಾಡಿಹೋಗಿದ್ದ ಗುಲಾಬಿ (rose) ಹೂವಿಗೆ ಕಳೆ ಬಂದಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುಲಾಬಿ ಬೆಳೆಯನ್ನ ಕಳೆದ ಹಲವು ವರ್ಷಗಳಿಂದ ಬೆಳೆಯುತ್ತಾ ಬಂದಿದ್ದಾರೆ. ಉತ್ತಮ ಮಳೆ ಬಂದಿದ್ದರಿಂದ ಗುಲಾಬಿ ಬೆಳೆಗೆ ಕಳೆ ಬಂದಿದೆ. ಸಂಕಷ್ಟದಲ್ಲಿ ಇದ್ದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.

ಕೆಂಪು ಬಣ್ಣದ ಗುಲಾಬಿ, ಪ್ರೀತಿ, ಪ್ರೇಮದ ಸಂತೇಕ. ತಮ್ಮ ಪ್ರೀತಿ ನಿವೇದನೆಯನ್ನ ಗುಲಾಬಿ ಕೊಡುವ ಮೂಲಕ ಕೂಡ ಹೇಳಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಹಾರಕ್ಕೆ, ದೇವರ ಮುಡಿಗೂ ಕೂಡ ಅರ್ಪಣೆಯಾಗುತ್ತದೆ. ಆದರೆ ಇಂತಹ ಗುಲಾಬಿ ಹೂವಿಗೆ ಕೆಲವೇ ದಿನಗಳ ಕೆಳಗೆ ಸಂಕಷ್ಟ ಎದುರಾಗಿತ್ತು. ಬಿಸಿಲ ಜಳಕ್ಕೆ ಪ್ರೀತಿಯ
ಸಂಕೇತವಾದ ಗುಲಾಬಿ ಮುದುಡಿ ಹೋಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಗುಲಾಬಿಗೆ ಮತ್ತೆ ಕಳೆ ಬಂದಿದೆ.

ಇದನ್ನೂ ಓದಿ: ವಾವ್ಹ್..!ಧಾರವಾಡದ ಸೌಂದರ್ಯ ಹೆಚ್ಚಿಸಿದ ಗುಲ್‌ ಮೊಹರ್‌ ಹೂವುಗಳು; ಈ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

ಅಂದಹಾಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಹೆಚ್ಚಾಗಿ ಗುಲಾಬಿ ಬೆಳೆಯನ್ನ ಬೆಳೆಯಲಾಗುತ್ತದೆ. ಕಳೆದ ಹಲವು ವರ್ಷಗಳಿಂದ ರೈತಾಪಿ ವರ್ಗ ಗುಲಾಬಿ ಬೆಳೆಯನ್ನೇ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿ ಬೆಳೆಯುವ ಗುಲಾಬಿ ಬೆಳೆಗೆ ಡಿಮ್ಯಾಂಡ್ ಸಹ ಇದೆ.

ಬಹುತೇಕ ರೈತರು ಮೈಸೂರು ಮಾರುಕಟ್ಟೆಗೆ ಗುಲಾಬಿ ಹೂವನ್ನ ಮಾರಾಟ ಮಾಡುತ್ತಾರೆ. ಇಲ್ಲಿನ ಗುಲಾಬಿ ಬಹುತೇಕ ಗುಲ್ಕಾನ್ ಮಾಡಲು ಬಳಸಿದ್ರೆ, ಮತ್ತಷ್ಟು ಗುಲಾಬಿ ಹೂವುಗಳು ದೇವರ ಮುಡಿಗೆ ಸೇರುತ್ತವೆ. ದೇವರ ಹಾರಕ್ಕೂ ಕೂಡ ಗುಲಾಬಿ ಹೂವನ್ನ ಬಳಸಲಾಗುತ್ತದೆ. ಕೆಲವಷ್ಟು ರೈತರು ದೇವಸ್ಥಾನಗಳ ಬಳಿ ಗುಲಾಬಿ ಹೂವನ್ನ ಮಾರಾಟ ಮಾಡಿದ್ರೆ, ಮತ್ತಷ್ಟು ರೈತರು ಇಂತಿಷ್ಟು ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಇದನ್ನೂ ಓದಿ: ಮಂಡ್ಯ: ಮನಸ್ಸಿಗೆ ಮುದ ನೀಡುತ್ತಿದ್ದ ಕೊಕ್ಕರೆಗಳ ನೆಲೆವೀಡು ಬೆಳ್ಳೂರು ಪಕ್ಷಿಧಾಮ ಖಾಲಿ ಖಾಲಿ

ಕಳೆದ ಹಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತನ ಮೊಗದಲ್ಲಿ ಮಂದಹಾಸ ಮೂಡಿದ್ದು, ಗುಲಾಬಿ ಹೂವಿಗೆ ಮತ್ತಷ್ಟು ಕಳೆ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.