AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ವರ್ಷ ಬಳಿಕ 13 ಕೋಟಿ ರೂ. ವೆಚ್ಚದ ಗೋದಾಮು‌ ಕಾಮಗಾರಿ ಆರಂಭ: ರೈತರು ಖುಷ್​!

ರೈತರ ದವಸ ಧಾನ್ಯಗಳನ್ನ ಸಂಗ್ರಹ ಮಾಡುವ ಉದ್ದೇಶದಿಂದ ಬೀದರ್ ಜಿಲ್ಲೆಯ ಔರಾದ್ ಪಟ್ಣದಲ್ಲಿ 2015-16 ನೇ ಸಾಲಿನಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಉಗ್ರಾಣ ನಿಗಮದಿಂದ ಔರಾದ್ ಪಟ್ಟಣದ ರೈತ ಭವನದ ಹಿಂದೆ ಬೃಹತ್ ಎರಡು ಗೋದಾಮನ್ನ ನಿರ್ಮಿಣ ಮಾಡಲಾಗುತ್ತಿತ್ತು. ಗೋದಾಮು ಕಾಮಗಾರಿಯನ್ನ ಅರ್ಧಕ್ಕೆ ನಿಲ್ಲಿಸಿ ಗುತ್ತಿಗೆದಾರ ಪಲಾಯನ ಮಾಡಿದ್ದ.

7 ವರ್ಷ ಬಳಿಕ 13 ಕೋಟಿ ರೂ. ವೆಚ್ಚದ ಗೋದಾಮು‌ ಕಾಮಗಾರಿ ಆರಂಭ: ರೈತರು ಖುಷ್​!
7 ವರ್ಷ ಬಳಿಕ 13 ಕೋಟಿ ರೂ. ವೆಚ್ಚದ ಗೋದಾಮು‌ ಕಾಮಗಾರಿ ಆರಂಭ: ರೈತರು ಖುಷ್​!
ಸುರೇಶ ನಾಯಕ
| Updated By: ಗಂಗಾಧರ​ ಬ. ಸಾಬೋಜಿ|

Updated on: May 26, 2024 | 4:59 PM

Share

ಬೀದರ್, ಮೇ 26: ರೈತರು (Farmers) ಬೆಳೆಸಿದ ದವಸ ಧಾನ್ಯವನ್ನ ಸಂಗ್ರಹಿಸಲು ಬೃಹತ್ ಗೋದಾಮು ನಿರ್ಮಿಸಲಾಗುತ್ತಿತ್ತು. 13 ಕೋಟಿ ರೂ. ವೆಚ್ಚದ ಗೋದಾಮು (godown) ಕಾಮಗಾರಿ ಅರ್ಧಕ್ಕೆ ಬಿಟ್ಟು ಗುತ್ತಿಗೆದಾರ ಪಲಾಯನ ಮಾಡಿದ್ದ. ಸ್ಥಳೀಯ ನಿವಾಸಿಯೊಬ್ಬರು ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಎರಡು ವರ್ಷದ ಸತತ ಹೋರಾಟದ ಬಳಿಕ ಗೋದಾಮು ಕಾಮಗಾರಿ ಆರಂಭವಾಗಿದ್ದು ರೈತರ ಖಷಿ ಹೆಚ್ಚಿಸಿದೆ.

ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಗುತ್ತಿಗೆದಾರ ಪಲಾಯನ

ರೈತರ ದವಸ ಧಾನ್ಯಗಳನ್ನ ಸಂಗ್ರಹ ಮಾಡುವ ಉದ್ದೇಶದಿಂದ ಬೀದರ್ ಜಿಲ್ಲೆಯ ಔರಾದ್ ಪಟ್ಣದಲ್ಲಿ 2015-16 ನೇ ಸಾಲಿನಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಉಗ್ರಾಣ ನಿಗಮದಿಂದ ಔರಾದ್ ಪಟ್ಟಣದ ರೈತ ಭವನದ ಹಿಂದೆ ಬೃಹತ್ ಎರಡು ಗೋದಾಮನ್ನ ನಿರ್ಮಿಣ ಮಾಡಲಾಗುತ್ತಿತ್ತು. ಗೋದಾಮು ಕಾಮಗಾರಿಯನ್ನ ಅರ್ಧಕ್ಕೆ ನಿಲ್ಲಿಸಿ ಗುತ್ತಿಗೆದಾರ ಪಲಾಯನ ಮಾಡಿದ್ದ. ಬಂದ್ ಆಗಿದ್ದ ಗೋದಾಮು ಕಾಮಗಾರಿ ಇಂದು, ನಾಳೆ ಆರಂಭವಾಗುತ್ತದೆಂದು ರೈತರು ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದರು. ಆದರೆ ಐದು ವರ್ಷಗಳು ಕಳೆದರೂ ಕೂಡಾ ಕಾಮಗಾರಿ ಆರಂಭವಾಗುವ ಯಾವ ಲಕ್ಷಣಗಳು ಕೂಡ  ಗೋಚರಿಸಲಿಲ್ಲ.

ಇದನ್ನೂ ಓದಿ: ಬೀದರ್​​ನಲ್ಲೊಂದು ಹೈಟೆಕ್​​ ಸರ್ಕಾರಿ ಆಸ್ಪತ್ರೆ: ಬಡ ರೋಗಿಗಳ ಪಾಲಿಗೆ ಸಂಜೀವಿನಿ

ಹೀಗಾಗಿ ಔರಾದ್ ನಿವಾಸಿ ಸಾಮಾಜಿಕ ಹೋರಾಟಗಾರ ಗುರುನಾಂಥ್ ವಡ್ಡೆ ಎಂಬುವರು ಹೈಕೋರ್ಟ್​ನಲ್ಲಿ ಸಾರ್ವಜನಿಕರ ಹಿತಾಸಕ್ತಿ ಸರ್ಜಿಯನ್ನ 2023 ರಲ್ಲಿ ಹೈಕೋರ್ಟ್ ಗೆ ಸಲ್ಲಿಸಿದರು ಎರಡು ವರ್ಷದ ಹೋರಾಟದ ಬಳಿಕ ಈಗ ಕಾಮಗಾರ ಆರಂಭವಾಗಿದ್ದು ಕಾಮಗಾರಿ ನಿಂತೂಕೊಂಡು ಏಳು ವರ್ಷದ ಬಳಿಕ ಕಾಮಗಾರಿ ಮರು ಆರಂಭವಾಗಿದ್ದು ಸಾರ್ವಜನಿಕರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ಔರಾದ್ ತಾಲೂಕಿನ ರೈತರು ತಾವು ಬೆಳೆಸಿದ ದವಸ ಧಾನ್ಯಗಳನ್ನ ಸಂಗ್ರಹಿಸಿಡುವ ಉದ್ದೇಶದಿಂದ ಈ ಇಲ್ಲಿ ಗೋದಾಮು ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ಕಳೆದ ಏಳು ವರ್ಷದಿಂದ ಗೋದಾಮು ಕಾಮಗಾರಿ ಆರ್ಧಕ್ಕೆ ನಿಂತುಕೊಂಡಿದ್ದು ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದಾಗಿ ಗೋದಾಮು ನಿರ್ಮಾಣ ಉದ್ದೇಶವಿಲ್ಲಿ ವಿಫಲವಾಗಿದ್ದು ರೈತರು ಆಕ್ರೋಶ ಹೆಚ್ಚಿಸುವಂತೆ ಮಾಡಿತ್ತು.

ಇದನ್ನೂ ಓದಿ: ಬರಡು ಭೂಮಿಯಲ್ಲಿ ಬಂಪರ್ ಮಾವಿನ ಫಸಲು; ವಿದೇಶಕ್ಕೂ ರಫ್ತು, ಎರಡು ಕೋಟಿ ರೂಪಾಯಿಗೂ ಅಧಿಕ ಲಾಭ

ಇನ್ನೂ ರೈತರು ತಾವು ಬೆಳೆದ ದವಸ ಧಾನ್ಯವನ್ನ ಖಾಸಗಿ ಗೋದಾಮಿನಲ್ಲಿ ಹೆಚ್ಚಿಗೆ ಹಣವನ್ನ ಕೊಟ್ಟು ತಮ್ಮ ದವಸಧಾನ್ಯವನ್ನ ಇಡುವಂತಾ ಸ್ಥಿತಿಯಿಲ್ಲಿ ಎದುರಾಗಿತ್ತು. ಇನ್ನೂ ಏಳು ವರ್ಷದಿಂದ ಗೋದಾಮು ಕಾಮಗಾರಿ ಅರ್ಧಕ್ಕೆ ನಿಂತುಕೊಂಡಿರುವ ಪರಿಣಾಮದಿಂದಾಗಿ ಮಳೆ, ಬಿಸಿಲಿಗೆ ಅರ್ಧಕ್ಕೆ ನಿಂತುಕೊಂಡಿರುವ ಕಟ್ಟಡ ಉಪಯೋಗಕ್ಕೆ ಬಾರದಂತಾಗಿದೆ.

1139.86 ಲಕ್ಷ ರೂ. ಹಣ ನಷ್ಟ

ಗೋದಾಮಿನ ಚಾವಣಿ ಕೆಲಸವನ್ನ ಮಾಡಲಾಗಿದೆ ಮಳೆಯಿಂದಾ ಚಾವಣಿಗೆ ಹಾಕಿದ ಕಬ್ಬಿಣದ ಸಲಾಖೆಗಳು ತುಕ್ಕು ಹಿಡಿದಿದ್ದು ಮರು ಉಪಯೋಗಕ್ಕೆ ಬಾರದಂತಾಗಿದೆ. ಇದರಿಂದಾಗಿ ಉಗ್ರಾಣ ನಿರ್ಮಾಣಕ್ಕೆ ಬಳಸಲಾಗಿರುವ ಸುಮಾರು 1139.86 ಲಕ್ಷ ರೂ. ಹಣ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿತ್ತು.

ಸರಕಾರದ ಭೊಕ್ಕಸಕ್ಕೆ ಕೊಟ್ಯಾಂತರ ರೂ. ನಷ್ಟವಾಗಿದ್ದು ಈ ಹಣವನ್ನ ಗುತ್ತಿಗೆದಾರನಿಂದ ಮರಳಿ ಪಡೆದುಕೊಂಡು ಆತನ ಮೇಲೆ ಕ್ರಿಮಿನಲ್ ಪ್ರಕರಣ ಹಾಕಿ ಆತನನ್ನ ಜೈಲಿಗೆ ಕಳುಹಿಸಬೇಕೆಂದು ಇಲ್ಲಿನ ರೈತರು ಹೇಳುತ್ತಿದ್ದರು ಈಗ ಅದೇ ರೈತರ ಹೋರಾಟದ ಫಲವಾಗಿ ಗೋದಾಮು ಕಾಮಗಾರಿ ಆರಂಭವಾಗಿದೆ.

ಕೊಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದ್ದು ಈಗ ಮರು ಕಾಮಗಾರಿ ಆರಂಭವಾಗಿದೆ. ಕೋರ್ಟ್ ಸೂಚನೆ ಮೇರೆಗೆ ಕಾಮಗಾರಿ ಆರಂಭವಾಗಿದ್ದು ರೈತರಿಗೆ ಖುಷಿ ತಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!