AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರಡು ಭೂಮಿಯಲ್ಲಿ ಬಂಪರ್ ಮಾವಿನ ಫಸಲು; ವಿದೇಶಕ್ಕೂ ರಫ್ತು, ಎರಡು ಕೋಟಿ ರೂಪಾಯಿಗೂ ಅಧಿಕ ಲಾಭ

ಕಳೆದ ಹದಿನೈದು ವರ್ಷದಿಂದಾ ಆ ರೈತ ಮಾವು ಬೆಳೆಸುತ್ತಿದ್ದಾನೆ. ದೇಶ, ವಿದೇಶದಲ್ಲಿ ಬೇಡಿಕೆಯಿರುವ ಬಾದಾಮಿ, ರಸಪೂರಿ, ಅಲ್ಫೋನ್ಸಾ. ತೋತಾಪುರಿ ತಳಿಯ ಮಾವು ಬೆಳೆಸಿದ್ದಾರೆ. ನಾಲ್ಕೈದು ವರ್ಷದಿಂದಾ ವಿದೇಶಕ್ಕೆ ಮಾವಿನ ಹಣ್ಣನ್ನ ರಫ್ತು ಮಾಡುತ್ತಿದ್ದು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಬರಡು ಭೂಮಿಯಲ್ಲಿ ಬಂಪರ್ ಮಾವಿನ ಫಸಲು; ವಿದೇಶಕ್ಕೂ ರಫ್ತು, ಎರಡು ಕೋಟಿ ರೂಪಾಯಿಗೂ ಅಧಿಕ ಲಾಭ
ಸುರೇಶ ನಾಯಕ
| Updated By: ಕಿರಣ್ ಹನುಮಂತ್​ ಮಾದಾರ್|

Updated on:May 15, 2024 | 2:47 PM

Share

ಬೀದರ್, ಮೇ.15: ಜಿಲ್ಲೆಯ ಹುಮ್ನಾಬಾದ್(Humnabad) ತಾಲೂಕಿನ ಬಶೀಲಾಪುರ ಗ್ರಾಮದ ಬಳಿ 71 ಎಕರೆಯಷ್ಟೂ ಜಮೀನಿನಲ್ಲಿ ತೆಲಂಗಾಣ ಮೂಲದ ಸುಧಾಕರ ಎಂಬುವರು ವಿವಿಧ ಜಾತಿಯ ಮಾವು(Mango) ಬೆಳೆಸಿದ್ದು, ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಇನ್ನು ಸುಧಾಕರ ಎಂಬುವವರ ಮಾವಿನ ತೋಟದ ಮಾವುನ್ನು ಅತೀಫ್ ಎಂಬ ರೈತ,  ಒಂದು ಕೋಟಿ ರೂಪಾಯಿಗೆ ಖರೀಧಿಸಿದ್ದು. ಅದನ್ನು ಮಾರಾಟ ಮಾಡಿ ವರ್ಷಕ್ಕೆ ಎರಡು ಕೋಟಿಗೂ ಅಧಿಕ ಲಾಭವನ್ನ ಮಾಡುತ್ತಿದ್ದಾರೆ. ಇವರ ತೋಟದಲ್ಲಿ ಮಾವು ಪ್ರಿಯರ ಮೆಚ್ಚಿನ ತಳಿಗಳಾದ ದಸೇರಾ, ಮಲ್ಲಿಕಾ, ಕೇಸರ್, ಬಾದಾಮಿ, ರಸಪೂರಿ, ಆಲ್ಫೋನ್ಸಾ, ತೋತಾಪುರಿ ಮಾವು ಸೇರಿದಂತೆ ವಿವಿಧ ಬಗೆಯ ತಳಿಗಳ ಮಾವುಗಳು ಇವೆ.

ವಿದೇಶಕ್ಕೂ ರಫ್ತು

ಪ್ರತಿದಿನವೂ 20 ಕ್ಕೂ ಹೆಚ್ಚು ಕೆಲಸಗಾರರು ಮಾವು ಕಟಾವು ಮಾಡಿ ಫ್ಯಾಕ್ ಮಾಡಿ ಹೈದ್ರಾಬಾದ್​ಗೆ ಕಳುಹಿಸಿಕೊಡುತ್ತಾರೆ. ಬಳಿಕ ಅಲ್ಲಿಂದ ಹೈದ್ರಾಬಾದ್ ಇಂದ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನ ಫ್ಯಾಕ್ ಮಾಡಿ ವಿದೇಶಕ್ಕೆ ರಫ್ತು ಮಾಡುತ್ತಾರೆಂದು ತೋಟಗಾರಿಕೆ ಇಲಾಖೆ ಅಧಿಕಾರಿ ಸಂತೋಷ್ ಎಂಬುವವರು ಹೇಳುತ್ತಿದ್ದಾರೆ.

ಇದನ್ನೂ ಓದಿ:ಧಾರವಾಡದಲ್ಲಿ ಮಾವು ಮೇಳ ಆರಂಭ; ಇಲ್ಲಿವೆ ವಿವಿಧ ಬಗೆಯ ಹಣ್ಣುಗಳು

ಬೀದರ್ ಜಿಲ್ಲೆಯಲ್ಲಿ ಮಾವು ಬೆಳೆಗೆ ಉತ್ತಮವಾದ ಮಣ್ಣು ಹಾಗೂ ಉತ್ತಮ ಹವಾಮಾನ ಇರುವುದರಿಂದ ಇಲ್ಲಿ ಮಾವು ಬೆಳೆಯಲು ಉತ್ತಮವಾಗಿದೆ ಎಂದು ಇಲ್ಲಿನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಈ ವರ್ಷ ಡಿಸೆಂಬರ್​ದಿಂದ ಜನವರಿಯಲ್ಲಿ ಶೇ.65ರಷ್ಟು ಗಿಡಗಳು ಹೂ ಬಿಟ್ಟಿದ್ದು, ಅಕಾಲಿಕ ಮಳೆ ಮತ್ತು ಹೆಚ್ಚು ಇಬ್ಬನಿ ಕಾಣಿಸಿಕೊಳ್ಳದ ಕಾರಣ ಉತ್ತಮ ಫಸಲು ಬರುವ ನಿರೀಕ್ಷೆ ಇದೆ. ಸದ್ಯಕ್ಕೆ ಮಾವಿನ ಬೆಳೆಗೆ ಯಾವುದೇ ರೋಗ ಮತ್ತು ಕೀಟಗಳ ಬಾಧೆ ತಟ್ಟಿಲ್ಲ. ಜೊತೆಗೆ ಪ್ರತಿವರ್ಷ ಕಾಡುತ್ತಿದ್ದ ಮ್ಯಾಂಗೋ ಹ್ಯಾಪರ್ ರೋಗ ಈ ಬಾರಿ ಕಾಣಿಸಿಕೊಂಡಿಲ್ಲ. ಇದು ರೈತನಿಗೆ ವರದಾನವಾಗಿದೆ.

ರಾಜ್ಯ ಸೇರಿದಂತೆ ನೆರೆಯ ರಾಜ್ಯಕ್ಕೂ ರಫ್ತು

ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನ ಕೊನೆಯ ವಾರ ಮತ್ತು ಜನವರಿ ತಿಂಗಳಿನ ಮೊದಲ ವಾರದಲ್ಲಿ ಮಾವಿನ ಗಿಡಗಳು ಹೂವು ಬಿಟ್ಟರೆ, ಏಪ್ರಿಲ್ ಮತ್ತು ಮೇ ತಿಂಗಳಾಂತ್ಯದವರೆಗೂ ಫಸಲು ಮಾರುಕಟ್ಟೆಗೆ ಬರುತ್ತಿವೆ. ಇವರು ಬೆಳೆಸಿದ ಮಾವು ವಿದೇಶಕ್ಕೆ ಅಷ್ಟೇ ಅಲ್ಲದೆ ರಾಜ್ಯದ ಮೈಸೂರು, ಬೆಂಗಳೂರು, ಮಂಗಳೂರು, ಪುಣೆ, ಮುಂಬೈ ಸೇರಿದಂತೆ ನೆರೆಯ ರಾಜ್ಯದ ಪ್ರಮುಖ ಪಟ್ಟಣಗಳಿಗೂ ಹೋಗುವುದು ವಿಶೇಷ.

ಇನ್ನು ಇವರು ಇಡೀ ಮವಿನ ತೋಟವನ್ನ ಒಂದು ವರ್ಷಕ್ಕೆ ಲೀಸ್​ಗೆ ಕೊಟ್ಟಿರುವುದರಿಂದ ಮಾಲೀಕರಾದ ಸುಧಾಕರ್​ಗೆ ಹಣ್ಣು ಕಟಾವು ಮಾಡುವುದು ಲಾಭನಷ್ಟದ ಸಮಸ್ಯೆಯಿಲ್ಲ. ಜೊತೆಗೆ ಇದನ್ನ ಲೀಸ್​ಗೆ ಪಡೆದ ಅತೀಫ್ ಕೂಡ ಉತ್ತಮ ಆದಾಯ ಗಳಿಸುತ್ತಿದ್ದಾನೆ. ಬರಡು ಭೂಮಿಯಲ್ಲಿ ಮಾವಿನ ಕೃಷಿಯಿಂದ ಈ ರೈತರು ವರ್ಷಕ್ಕೆ ಎರಡು ಕೋಟಿಗೂ ಅಧಿಕ ಲಾಭ ಮಾಡಿಕೊಳ್ಳುತ್ತಿದ್ದಾರೆ. ಒಂದೇ ಜಾತಿಯ ಹಣ್ಣಿಗೆ ಒತ್ತೂಕೊಡದೆ ಎಲ್ಲಾ ಜಾತಿಯ ಮಾವು ಬೆಳೆಸಿದ್ದರಿಂದಾಗಿ ಈ ರೈತ ಹೆಚ್ಚಿನ ಲಾಭ ಪಡೆಯುವುದರ ಜೊತೆಗೆ ವಿದೇಶಕ್ಕೂ ಕೂಡ ಹಣ್ಣುಗಳನ್ನ ರಫ್ತು ಮಾಡುತ್ತಿದ್ದು, ಎಲ್ಲಾ ರೈತರಿಗಿಂತ ಭಿನ್ನವಾಗಿ ಕಾಣುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 2:46 pm, Wed, 15 May 24

ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್
ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್