ಮದ್ವೆಯಲ್ಲಿ ಮಹಿಳೆಯ ಚಿನ್ನದ ಸರಕ್ಕೆ ಕೈ ಹಾಕಿದ ಕಳ್ಳನಿಗೆ ಬಿತ್ತು ಧರ್ಮದೇಟು
ಇತ್ತೀಚೆಗೆ ಕಳ್ಳರ ಹಾವಳಿ ಹೆಚ್ಚಾಗಿದೆ. ಅದರಂತೆ ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು(Gauribidanur) ನಗರದ ಸಾಯಿಕೃಷ್ಣ ಫಂಕ್ಷನ್ ಹಾಲ್ನಲ್ಲಿ ನಡೆದಿದ್ದ ಮದುವೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಇತ್ತ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿಯೂ ಸರಣಿ ಕಳ್ಳತನ ನಡೆದಿದ್ದು, ಹನೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ, ಮೇ.26: ಜಿಲ್ಲೆಯ ಗೌರಿಬಿದನೂರು(Gauribidanur) ನಗರದ ಸಾಯಿಕೃಷ್ಣ ಫಂಕ್ಷನ್ ಹಾಲ್ನಲ್ಲಿ ನಡೆದಿದ್ದ ಮದುವೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಚಿನ್ನದ ಸರ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖದೀಮನಿಗೆ ಮದುವೆ ಮನೆಯವರೇ ಸೇರಿ ಧರ್ಮದೇಟು ಕೊಟ್ಟು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಆಂಧ್ರದ ಮುಲ್ಲಮೋತುಕಪಲ್ಲಿ ಗ್ರಾಮದ ನರೇಶ್ ಎಂಬಾತ ಬಂಧಿತ ಆರೋಪಿ. ಈ ಕುರಿತು ಗೌರಿಬಿದನೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹನೂರಿನಲ್ಲಿ ಸರಣಿ ಕಳ್ಳತನ
ಚಾಮರಾಜನಗರ: ಜಿಲ್ಲೆಯ ಹನೂರು ಪಟ್ಟಣದಲ್ಲಿ ಸರಣಿ ಕಳ್ಳತನ ನಡೆದಿದೆ. ಸೊಪ್ಪಿನಕೇರಿಯ ಗೋವಿಂದರಾಜು ಎಂಬುವರ ಮನೆಯ ಬೀಗ ಒಡೆದು 10 ಗ್ರಾಂ ಚಿನ್ನ, 69 ಸಾವಿರ ನಗದು ಎಗರಿಸಿದ್ದಾರೆ. ದೇವಾಂಗಪೇಟೆಯ ಸರಸ್ವತಿ ಎಂಬುವರ ಮನೆಯಲ್ಲೂ 20 ಸಾವಿರ ನಗದು, ಒಂದು ಜೊತೆ ಚಿನ್ನದ ಓಲೆ ಕದ್ದಿದ್ದರೆ, ಇತ್ತ ಚೌಡೇಶ್ವರಿ ದೇವಸ್ಥಾನದ ಬೀಗ ಮುರಿದು ಹುಂಡಿ ಹಣವನ್ನ ಕದ್ದೊಯ್ದಿದ್ದಾರೆ. ಈ ಕುರಿತು ಹನೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಖದೀಮರಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಅಂಧ ವೈದ್ಯರ ಮನೆಯಲ್ಲಿ ಕಳ್ಳತನ: ಮಹಡಿಯಿಂದ ಬಿದ್ದು ಸಿಕ್ಕಿಹಾಕಿಕೊಂಡ ಹಳೆಯ ಕಳ್ಳ, ಈ ಸಿನಿಮೀಯ ಸ್ಟೋರಿ ಓದಿ
ದೇವಾಲಯ ಕಳುವು ಮಾಡ್ತಿದ್ದ ಇಬ್ಬರು ಆರೋಪಿಗಳ ಬಂಧನ
ಕೋಲಾರ: ದೇವಾಲಯಗಳಲ್ಲಿ ಕಳುವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಕೋಲಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಕೃಷ್ಣಗಿರಿಯ ಮೂರ್ತಿ ಹಾಗೂ ವಿಜಿ ಬಂಧಿತ ಆರೋಪಿಗಳು. ಐಸಂದ್ರ ಮಿಟ್ಟೂರು ಗ್ರಾಮದ ಚಾಮುಂಡೇಶ್ವರಿ ದೇವಾಲಯದಲ್ಲಿ ಕಳವು ಮಾಡಿದ್ದರು. ಬಂಧಿತರಿಂದ ದೀಪಸ್ತಂಭ, ಆರತಿ ತಟ್ಟೆ, ಮಂಗಳಾರತಿ ತಟ್ಟೆ, ಹಾಗೂ ಹುಂಡಿಯಲ್ಲಿದ್ದ 1,598 ರೂಪಾಯಿ ಸೇರಿದಂತೆ 96,598 ಸಾವಿರ ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Sun, 26 May 24