AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಧ ವೈದ್ಯರ ಮನೆಯಲ್ಲಿ ಕಳ್ಳತನ: ಮಹಡಿಯಿಂದ ಬಿದ್ದು ಸಿಕ್ಕಿಹಾಕಿಕೊಂಡ ಹಳೆಯ ಕಳ್ಳ, ಈ ಸಿನಿಮೀಯ ಸ್ಟೋರಿ ಓದಿ

ಹೀಗೆ ಕಳ್ಳತನ ಮಾಡಲು ಬಂದಿದ್ದವನ ಹೆಸರು ರವಿ. ವೃತ್ತಿಯಲ್ಲಿ ಕಾರ್ಪೆಂಟರ್. ಈತ ತಾನು ಕೆಲಸ ಮಾಡಿದ ಡಾ ಬಾಲಾಜಿ ಎಂಬುವವರ ಮನೆಯಲ್ಲೇ ಕಳ್ಳತನ ಮಾಡಿ‌ ಸಿಕ್ಕಿ ಬಿದ್ದಿದ್ದಾನೆ. ಹೌದು ಡಾ ಬಾಲಾಜಿ ಅವರಿಗೆ ಕಣ್ಣು ಕಾಣುವುದಿಲ್ಲ. ತಮ್ಮ ಮನೆಯ ಕಾಂರ್ಪೆಂಟರ್ ಕೆಲಸವನ್ನು ರವಿಗೆ ನೀಡಿದ್ದರು. ಬೀರು ಸೇರಿ ಹಲವು ಕೆಲಸ ಮಾಡಿದ್ದ.

ಅಂಧ ವೈದ್ಯರ ಮನೆಯಲ್ಲಿ ಕಳ್ಳತನ: ಮಹಡಿಯಿಂದ ಬಿದ್ದು ಸಿಕ್ಕಿಹಾಕಿಕೊಂಡ ಹಳೆಯ ಕಳ್ಳ, ಈ ಸಿನಿಮೀಯ ಸ್ಟೋರಿ ಓದಿ
ಅಂಧ ವೈದ್ಯರ ಮನೆಯಲ್ಲಿ ಕಳ್ಳತನ: ಮಹಡಿಯಿಂದ ಬಿದ್ದು ಸಿಕ್ಕಿಹಾಕಿಕೊಂಡ ಕಳ್ಳ
ರಾಮ್​, ಮೈಸೂರು
| Updated By: ಸಾಧು ಶ್ರೀನಾಥ್​|

Updated on: May 20, 2024 | 12:34 PM

Share

ನಿಜಕ್ಕೂ ಕಾಲ ಕೆಟ್ಟೋಗಿದೆ. ಯಾರನ್ನು ನಂಬೋದು ? ಯಾರನ್ನು ಬಿಡೋದು ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ. ಇದಕ್ಕೆ ಸಾಕ್ಷಿ ಮೈಸೂರಿನಲ್ಲಿ ನಡೆದಿರುವ ಸಿನಿಮೀಯ ರೀತಿಯ ಈ ಘಟನೆ. ಏನು ಅಂತೀರಾ? ಹಾಗಿದ್ರೆ ಈ ಸ್ಟೋರಿ ನೋಡಿ. ಕಟ್ಟಡದಿಂದ ಕೆಳಗೆ ಇಳಿ ಬಿಟ್ಟ ಸೀರೆ. ತಲೆಯಿಂದ ರಕ್ತ ಸುರಿಯುತ್ತಿದ್ದರೂ ಸಹ ಪೆಚ್ಚಾಗಿ ಕುಳಿತ ವ್ಯಕ್ತಿ. ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಮೈಸೂರಿನ ಮಾನಸಿನಗರ. ಅಂದ್ಹಾಗೆ ಈತ ಒಬ್ಬ ಕಳ್ಳ (thief). ಮನೆಯೊಂದರಲ್ಲಿ ಕಳ್ಳತನ (house theft) ಮಾಡಲು (carpenter) ಬಂದು ಮನೆಯವರಿಗೆ ಸಿಕ್ಕಿಹಾಕಿಕೊಂಡಾಗ ತಪ್ಪಿಸಿಕೊಳ್ಳಲು ಮನೆಯ ಮಹಡಿಯ ಮೇಲಿಂದ ಜಿಗಿದು ತಪ್ಪಿಸಿಕೊಳ್ಳಲು ಹೋಗಿ ತಲೆಗೆ ಪೆಟ್ಟು‌ ಮಾಡಿಕೊಂಡಿದ್ದಾನೆ.

ಹೀಗೆ ಕಳ್ಳತನ ಮಾಡಲು ಬಂದಿದ್ದವನ ಹೆಸರು ರವಿ. ವೃತ್ತಿಯಲ್ಲಿ ಕಾರ್ಪೆಂಟರ್. ಈತ ತಾನು ಕೆಲಸ ಮಾಡಿದ ಡಾ ಬಾಲಾಜಿ ಎಂಬುವವರ ಮನೆಯಲ್ಲೇ ಕಳ್ಳತನ ಮಾಡಿ‌ ಸಿಕ್ಕಿ ಬಿದ್ದಿದ್ದಾನೆ. ಹೌದು ಡಾ ಬಾಲಾಜಿ ಅವರಿಗೆ ಕಣ್ಣು ಕಾಣುವುದಿಲ್ಲ. ತಮ್ಮ ಮನೆಯ ಕಾಂರ್ಪೆಂಟರ್ ಕೆಲಸವನ್ನು ರವಿಗೆ ನೀಡಿದ್ದರು. ಬೀರು ಸೇರಿ ಹಲವು ಕೆಲಸ ಮಾಡಿದ್ದ.

ಅಷ್ಟೇ ಅಲ್ಲ, ಜೊತೆಗೆ ಆ ಬೀರುವಿನ ಹಾಗೂ ಮನೆಯ ನಕಲಿ ಕೀ ಸಹ ಮಾಡಿ‌ ಇಟ್ಟುಕೊಂಡಿದ್ದ. ಬಾಲಾಜಿ ಹಾಗೂ ಅವರ ಮನೆಯವರು ಇಲ್ಲದಾಗ ಬಂದು ಕಳ್ಳತನ ಮಾಡಿದ್ದ. ಇದೇ ರೀತಿ ಮೂರು ಬಾರಿ ಕಳ್ಳತನ ಮಾಡಿದ್ದಾನೆ. ಇದೀಗ ನಾಲ್ಕನೆಯ ಬಾರಿಗೆ ಕಳ್ಳತನ ಮಾಡಲು ಬಂದು ಸಿಕ್ಕಿ ಬಿದ್ದಿದ್ದಾನೆ.

Also Read: ಹತ್ತಾರು ವರ್ಷದಿಂದ ಕಾಟನ್‌ವುಡ್ ಮರದಲ್ಲೇ ನೂರಾರು ಜೇನುಗೂಡು ಕಟ್ಟುತ್ತಿದೆ! ಅದರ ವಿಶೇಷ ಮಾಹಿತಿ ಇಲ್ಲಿದೆ

ರವಿ ತಾನು ಸಿಕ್ಕಿಬಿದ್ದ ಮನೆಯ ಮಹಡಿಯ ಮೇಲಿಂದ ಜಿಗಿದು ಪರಾರಿಯಾಗಲು ಮುಂದಾಗಿದ್ದಾನೆ. ಈ ಪ್ರಯತ್ನದಲ್ಲಿ ಮಹಡಿಯಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟು‌ ಮಾಡಿಕೊಂಡಿದ್ದಾನೆ ಎಂದು ಡಾ ಬಾಲಾಜಿ ಪತ್ನಿ ಅವರ ಪತ್ನಿ ಹರಿಣಿ ಹೇಳಿದ್ದಾರೆ.

ತಕ್ಷಣ ಮೈಸೂರು ಗ್ರಾಮಾಂತರ ಪೊಲೀಸರಿಗೆ ವಿಷಯ ತಿಳಿಸಿದ ಬಾಲಾಜಿ ಅವರು ರವಿಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಸದ್ಯ ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ರವಿ ಜೈಲು ಸೇರಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.