AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​​ನಲ್ಲೊಂದು ಹೈಟೆಕ್​​ ಸರ್ಕಾರಿ ಆಸ್ಪತ್ರೆ: ಬಡ ರೋಗಿಗಳ ಪಾಲಿಗೆ ಸಂಜೀವಿನಿ

ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಹೈಟೆಕ್ ಆಸ್ಪತ್ರೆಯದು. ಈ ಆಸ್ಪತ್ರೆಯಲ್ಲಿ ಪ್ರತಿದಿನವೂ ಇನ್ನೂರವರೆಗೆ ರೋಗಿಗಳು ಚಿಕಿತ್ಸೆ ಪಡೆದುಕೊಂಡು ಹೋಗುತ್ತಾರೆ. ಇಸಿಜಿ, ಎಕ್ಸರೆ, ಶಸ್ತ್ರಚಿಕಿತ್ಸಾ ಕೊಠಡಿ, ಕಣ್ಣಿನ ಶಸ್ತ್ರಚಿಕಿತ್ಸಾ ಕೊಠಡಿ, ಆಧುನಿಕ ಸೌಲಭ್ಯಗಳಿರುವ ಪ್ರಯೋಗಾಲಯವಿದ್ದು ಜಿಲ್ಲೆಯಲ್ಲಿಯೇ ಮಾದರಿ ಆಸ್ಪತ್ರೆಯಾಗಿದೆ. ಔರಾದ್ ತಾಲೂಕಿನ ಸಂತಪುರ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ ಗುರುತಿಸಿಕೊಂಡಿದೆ.

ಬೀದರ್​​ನಲ್ಲೊಂದು ಹೈಟೆಕ್​​ ಸರ್ಕಾರಿ ಆಸ್ಪತ್ರೆ: ಬಡ ರೋಗಿಗಳ ಪಾಲಿಗೆ ಸಂಜೀವಿನಿ
ಬೀದರ್​​ನಲ್ಲೊಂದು ಹೈಟೆಕ್​​ ಸರ್ಕಾರಿ ಆಸ್ಪತ್ರೆ: ಬಡ ರೋಗಿಗಳ ಪಾಲಿಗೆ ಸಂಜೀವಿನಿ
ಸುರೇಶ ನಾಯಕ
| Updated By: ಗಂಗಾಧರ​ ಬ. ಸಾಬೋಜಿ|

Updated on: May 20, 2024 | 10:08 PM

Share

ಬೀದರ್, ಮೇ 20: ಔರಾದ್ ತಾಲೂಕು ಜಿಲ್ಲೆಯಲ್ಲಿಯೇ ಅತಿ ಹಿಂದೂಳಿದ ತಾಲೂಕು ಎಂಬ ಹಣೆ ಪಟ್ಟಿಕಟ್ಟಿಕೊಂಡಿರುವ ತಾಲೂಕ್ಕಾಗಿದೆ. ಇಂತಹ ಹಿಂದೂಳಿದ ತಾಲೂಕಿನಲ್ಲಿ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಆಸ್ಪತ್ರೆಯಂತಾ ಸಂತಪುರ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ ಗುರುತಿಸಿಕೊಂಡಿದೆ. ಸರಕಾರಿ ಆಸ್ಪತ್ರೆ (Govt Hospital) ಅಂದರೆ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗೋದಿಲ್ಲ, ಯಾವುದೆ ರೋಗಕ್ಕೂ ಕೂಡಾ ಇಲ್ಲಿ ಹಣ ವಸೂಲಿ ಮಾಡಲಾಗುತ್ತದೆ ಎಂದು ಆಪವಾದ ಇದ್ದೆ ಇರುತ್ತದೆ ಆದರೆ ಈ ಆಸ್ಪತ್ರೆಯೂ ರೋಗಿಗಳ ಪಾಲಿಗೆ ಸಂಜಿವೀನಿಯಂತೆ ಕೆಲಸ ಮಾಡುತ್ತಿದೆ.

ಮಹಾರಾಷ್ಟ್ರ, ತೆಲಂಗಾಣ ಗಡಿ ಹಂಚಿಕೊಂಡಿರುವ ತಾಲೂಕು ಆಗಿರುವುದರಿಂದಾಗಿ ಅನ್ಯರಾಜ್ಯದ ರೋಗಿಗಳು ಕೂಡಾ ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಇನ್ನೂ ಇಲ್ಲಿಗೆ ಬರುವ ರೋಗಿಗಳಿಗೆ ಇಲ್ಲಿನ ವೈದ್ಯರು, ನರ್ಸಗಳು, ಡಿ ಗ್ರುಪ್ ನೌಕರರು ಬಾಂಧವ್ಯದಿಂದ ನಡೆದುಕೊಂಡು ಅವರಿಗಿರುವ ರೋಗಕಕ್ಕೆ ಸರಿಯಾದ ಚಿಕಿತ್ಸೆಕೊಟ್ಟು ಕಳುಹಿಸಿಕೊಡುತ್ತಾರೆ. ಇಸಿಜಿ, ಎಕ್ಸರೆ, ಕಣ್ಣಿನ ಚಿಕಿತ್ಸೆ, ದಂತ ಚಿಕಿತ್ಸೆ, ಹೆರಿಗೆ, ಸಿಜರಿಯನ್, ಹೀಗೆ ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಎಲ್ಲಾ ಸೌಲಭ್ಯಗಳು ಇಲ್ಲಿನ ಆಸ್ಪತ್ರೆಯಲ್ಲಿ ಇರೋದ್ರಿಂದಾಗಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುತ್ತಿದೆಂದು ಇಲ್ಲಿನ ವೈದ್ಯರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಬರಡು ಭೂಮಿಯಲ್ಲಿ ಬಂಪರ್ ಮಾವಿನ ಫಸಲು; ವಿದೇಶಕ್ಕೂ ರಫ್ತು, ಎರಡು ಕೋಟಿ ರೂಪಾಯಿಗೂ ಅಧಿಕ ಲಾಭ

ಈ ಆಸ್ಪತ್ರೆಯಲ್ಲಿ ಹೆರಿಗೆ, ಅಪಘಾತಗಳಿಗೆ ವೈದ್ಯಕೀಯ ಚಿಕಿತ್ಸೆ, ಪ್ರತಿ ಗುರುವಾರ ಗೃಹಿಣಿಯರಿಗೆ ಶಸ್ತ್ರ ಚಿಕಿತ್ಸೆ, ರಾತ್ರಿ ವೇಳೆಯೂ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಆಧಾರ್‌ ನೋಂದಣಿ ಮಾಡಿ, ಇಂಜೆಕ್ಷನ್‌, ಔಷಧಿಗಳನ್ನು ನೀಡಲಾಗುತ್ತಿದೆ. ಹಿಂದೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರಲು ರೋಗಿಗಳು ಹಿಂಜರಿಯುತ್ತಿದ್ದರು. ಇಂದು ಆಸ್ಪತ್ರೆ ಸುಸಜ್ಜಿತವಾಗಿ ನಿರ್ಮಾಣಗೊಂಡು 24 ಘಂಟೆಗಳ ಕಾಲ ಸೇವೆ ದೊರೆತ್ತಿರುವ ಹಿನ್ನೆಲೆಯಲ್ಲಿ ಪ್ರತಿ ದಿನ 150 ರಿಂದ 200ಕ್ಕೂ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ.

ತಿಂಗಳಿಗೆ 300ಕ್ಕೂ ಅಧಿಕ ಶಸ್ತ್ರ ಚಿಕಿತ್ಸೆ ಮಹಿಳೆಯರು ಹೆರಿಗೆ ನಂತರ ಮಕ್ಕಳು ಮುಂದೆ ಆಗದಂತೆ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳುತ್ತಾರೆ. 24 ಘಂಟೆಗಳ ಚಿಕಿತ್ಸೆ, ಹೆರಿಗೆ, ಆಂಬ್ಯುಲೆನ್ಸ್, ಯಾವುದೇ ಕಾಯಿಲೆಗೆ ಪರಿಹಾರ, ಪ್ರತಿ ನಿತ್ಯ 10 ರಿಂದ 15 ಮಂದಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುತ್ತಾರೆ. ಇವರಿಗೆ ಹಾಲು, ಬ್ರೆಡ್‌, ಹೆಚ್ಚಿನ ಚಿಕಿತ್ಸೆ ಒದಗಿಸಲಾಗುತ್ತದೆ. ಸ್ಥಳೀಯ ಜನರ ಸಹಕಾರ ಸಂಘ, ಸಂಸ್ಥೆಗಳ ಮತ್ತು ಸಿಬ್ಬಂದಿ ಶ್ರಮ ಫಲದಿಂದ ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹತ್ತರು ಪ್ರಶಸ್ತಿಗಳು ಸಿಕ್ಕಿವೆ. ತುರ್ತು ಚಿಕಿತ್ಸೆಗೆ ಪ್ರತ್ಯೇಕ ಕೊಠಡಿ ಇದ್ದು, ಅಲ್ಲಿ ದಿನದ 24 ಗಂಟೆಯೂ ಸೇವೆ ಲಭ್ಯ ಇರುತ್ತದೆ. ಹೀಗಾಗಿ ಇಲ್ಲಿಗೆ ಬರುವ ರೋಗಿಗಳಿಗೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ಸಿಗುತ್ತಿದೆ ಎಂದು ರೋಗಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ: ಬೀದರ್​ನಲ್ಲಿ ಸಿದ್ದವಾಯ್ತು ಹೈಟೆಕ್ ನವಜಾತ ಶಿಶು ಘಟಕ; ಅಪೌಷ್ಟಿಕತೆ, ಕಾಮಾಲೆಯಾದ ಮಕ್ಕಳಿಗಿಲ್ಲಿ ಸಿಗ್ತಿದೆ ಉಚಿತ ಚಿಕಿತ್ಸೆ

ಇಲ್ಲಿಗೆ ಬರುವ ರೋಗಿಗಳಿಗೆ ಉತ್ತಮವಾದ ಚಿಕಿತ್ಸೆ ಸಿಗುತ್ತಿದ್ದು ರೋಗಿಗಳು ತಮ್ಮ ರೋಗವಾಸಿಮಾಡಿಕೊಂಡು ಹೋಗುತ್ತಿದ್ದಾರೆ. ಸರಕಾರಿ ಆಸ್ಪತ್ರೆಗಳೆಂದರೆ ಅಲ್ಲಿ ಸರಿಯಾಗಿ ಚಿಕಿತ್ಸೆ ಸಿಗುವುದಿಲ್ಲ ಎಂಬ ಕೂಗಿನ ನಡುವೆಯೂ ಈ ಸಮುದಾಯ ಆರೋಗ್ಯ ಕೇಂದ್ರ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನ ನೀಡುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.