ಬೀದರ್​ನಲ್ಲಿ ಸಿದ್ದವಾಯ್ತು ಹೈಟೆಕ್ ನವಜಾತ ಶಿಶು ಘಟಕ; ಅಪೌಷ್ಟಿಕತೆ, ಕಾಮಾಲೆಯಾದ ಮಕ್ಕಳಿಗಿಲ್ಲಿ ಸಿಗ್ತಿದೆ ಉಚಿತ ಚಿಕಿತ್ಸೆ

ಬೀದರ್​ ಜಿಲ್ಲೆಯಲ್ಲಿ ಪ್ರತಿವರ್ಷ ಹತ್ತಾರು ಹಸುಗೂಸುಗಳು ಸಾವನ್ನಪ್ಪುತಿದ್ದವು. ಅವಧಿಗೆ ಪೂರ್ವ ಜನನ, ಅಪೌಷ್ಟಿಕತೆ, ಕಡಿಮೆ ತೂಕ, ಕಾಮಾಲೆ ರೋಗದಿಂದ ಗುಣಮಟ್ಟದ ಚಿಕಿತ್ಸೆ ಸಿಗದೆ ಕಂದಮ್ಮಗಳ ಸಾವು ಏರುತ್ತಿತ್ತು. ಇದಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ಅಲ್ಲಿ ಹೈಟೆಕ್ ಮಾದರಿಯ ನವಜಾತ ಶಿಶು ಘಟಕ ಆರಂಭಿಸಿದ್ದು, ಶಿಶುಗಳ ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

ಬೀದರ್​ನಲ್ಲಿ ಸಿದ್ದವಾಯ್ತು ಹೈಟೆಕ್ ನವಜಾತ ಶಿಶು ಘಟಕ; ಅಪೌಷ್ಟಿಕತೆ, ಕಾಮಾಲೆಯಾದ ಮಕ್ಕಳಿಗಿಲ್ಲಿ ಸಿಗ್ತಿದೆ ಉಚಿತ ಚಿಕಿತ್ಸೆ
ಬೀದರ್​ನಲ್ಲಿ ಹೈಟೆಕ್ ನವಜಾತ ಶಿಶು ಘಟಕ
Follow us
ಸುರೇಶ ನಾಯಕ
| Updated By: ಕಿರಣ್ ಹನುಮಂತ್​ ಮಾದಾರ್

Updated on: May 10, 2024 | 8:54 PM

ಬೀದರ್​, ಮೇ.10: ಆಧು​ನಿಕ ತಂತ್ರ​ಜ್ಞಾ​ನದ ಫಲ​ವಾಗಿ ವೈದ್ಯ​ಕೀಯ ಕ್ಷೇತ್ರದಲ್ಲಿ ಸಾಕಷ್ಟು ಬೆಳ​ವ​ಣಿ​ಗೆ​ಯಾ​ದರೂ ನವ​ಜಾತ ಶಿಶು​ಗಳ ಮರ​ಣ ಪೂರ್ತಿ ನಿಂತಿಲ್ಲ. ಆದರೆ, ಅವುಗಳ ಪ್ರಮಾಣದಲ್ಲಿ ಮಾತ್ರ ಇಳಿ​ಮು​ಖ​ವಾ​ಗಿದ್ದು ಸಂತೋ​ಷದ ಸಂಗತಿ. ಅನೇಕ ಕಾರ​ಣ​ಗ​ಳಿಂದಾಗಿ ರಾಜ್ಯ​ದ ವಿವಿ​ಧೆಡೆ ನವ​ಜಾತ ಶಿಶು​ಗಳ ಸಾವಿನ ಸಂಖ್ಯೆ ಹೆಚ್ಚಿ​ದ್ದರೂ ಗಡೀ ಜಿಲ್ಲೆ ಬೀದರ್(Bidar)​ನಲ್ಲಿ ಕಳೆದ ನಾಲ್ಕು ವರ್ಷದಿಂದ ಶಿಶುಗಳ ಸಾವಿನ ಸಂಖ್ಯೆಯಲ್ಲಿ ಇಳಿ​ಮು​ಖ​ವಾ​ಗು​ತ್ತಿದೆ. ಅದಕ್ಕೆ ಪ್ರಮುಖವಾದ ಕಾರಣ ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಅತ್ಯಾಧುನಿಕ ಹೈಟೆಕ್ ಮಾದರಿಯಲ್ಲಿ ನವಜಾತ ಶಿಶು ಘಟಕ ಆರಂಭಿಸಿದ್ದು.

ದಿನದ 24 ಗಂಟೆಯೂ ಶಿಶುಗಳಿಗೆ ಚಿಕಿತ್ಸೆ

ಇದರಿಂದ ಇಲ್ಲಿ ಸುಧಾರಿತ ವೈದ್ಯಕೀಯ ಚಿಕಿತ್ಸೆ ಹಸು ಗೂಸುಗಳಿಗೆ ಸಿಗುತ್ತಿದ್ದು, ದಿನದ 24 ಗಂಟೆಯೂ ಶಿಶುಗಳಿಗೆ ಚಿಕಿತ್ಸೆ ಕೊಡುತ್ತಿದೆ. ಈ ಹಿನ್ನಲೆ ನವಜಾತ ಶಿಶುಗಳ ಸಾವಿನ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಕೆಯಾಗಿದೆ. ಜಿಲ್ಲೆಯ ಯಾವ ಖಾಸಗಿ ಆಸ್ಪತ್ರೆಯಲ್ಲೂ ಇಲ್ಲದ ಅತ್ಯಾಧುನಿಕ 30 ಬೆಡ್ ಸೌಲಭ್ಯಯುಳ್ಳ ಎನ್​ಐಸಿಯು ಘಟಕ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಲಾಗಿದ್ದು, 6 ವೆಂಟಿಲೇಟರ್​ಗಳು, 35 ನರ್ಸಿಂಗ್ ಸ್ಟಾಪ್ ಇದೆ. 4 ಜನರ ನುರಿತ ವೈದ್ಯರು ಇಲ್ಲಿ ಹಗಲು ರಾತ್ರಿ ಎನ್ನದೆ ಶಿಶುಗಳ ಆರೋಗ್ಯ ನೋಡಿಕೊಳ್ಳುತ್ತಿದ್ದು, ಇದು ಜಿಲ್ಲೆಯಲ್ಲಿಯೇ ಮಾದರಿ ನವಜಾತ ಶಿಶು ಘಟಕವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ:ಅವಳಿ ಗಂಡು ಶಿಶುಗಳ ಸಾವು: ಮನೆ ಮಂದಿಯ ಅಸಹಾಯಕತೆ, ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದೆ ಸಮಾಜಸೇವಕ

ಇಲ್ಲಿರುವ ಎನ್​ಐಸಿಯು ನಲ್ಲಿ ಉಚಿತ ಚಿಕಿತ್ಸೆ, ಆದರೆ ಇದನ್ನೇ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸಿದರೆ ಪ್ರತಿ ದಿನ 10 ರಿಂದ 15 ಸಾವಿರ ರೂಪಾಯಿ ವರೆಗೆ ಹಣ  ಕೊಡಬೇಕಾಗುತ್ತದೆ. ಇನ್ನು ಅವಧಿಗೆ ಪೂರ್ವ ಜನನ, ಅಪೌಷ್ಟಿಕತೆ, ಕಡಿಮೆ ತೂಕ, ಕಾಮಾಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಎನ್​ಐಸಿಯುನಲ್ಲಿ ಚಿಕಿತ್ಸೆ ಕೊಡಿಸುವುದು ಅನಿವಾರ್ಯ. ಇಂತಹ ಚಿಕಿತ್ಸೆಯನ್ನ ಒಂದು ನವಜಾತ ಶಿಶುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸಬೇಕಾದರೆ ಪ್ರತಿ ಬೇಡ್ ಚಾರ್ಜ್ 10 ಸಾವಿರ ರೂಪಾಯಿ ಇರುತ್ತದೆ. ಪ್ರತಿ ದಿನ ಏಳು ಸಾವಿರ ರೂಪಾಯಿ ಮೌಲ್ಯದ ಇಂಜೆಕ್ಷನ್ ಕೂಡ ಕೊಡಬೇಕಾಗುತ್ತದೆ. ಒಂದು ವಾರಗಳ ಕಾಲ ಒಂದು ಮಗು ಎನ್ ಐಸಿಯುನಲ್ಲಿ ಚಿಕಿತ್ಸೆ ಪಡೆದರೆ ಎರಡರಿಂದ ಮೂರು ಲಕ್ಷ ರೂಪಾಯಿ ಕಟ್ಟಿಟ್ಟ ಬುತ್ತಿ. ಆದರೆ, ಇದೇ ಚಿಕಿತ್ಸೆಯನ್ನ ಜಿಲ್ಲಾಸ್ಪತ್ರೆಯಲ್ಲಿ ಪಡೆದರೆ ಒಂದೂ ನಯಾಪೈಸೆ ಕೂಡ ಖರ್ಚಾಗುವುದಿಲ್ಲ. ಇದು ಸರ್ಕಾರಿ ಆಸ್ಪತ್ರೆಯಲ್ಲಿ ಆರಂಭವಾಗಿರುವುದರಿಂದ ಶಿಶು ಮರಣ ಪ್ರಮಾಣವೂ ಕೂಡ ಕಡಿಮೆಯಾಗಿದೆ. ‘

ಇನ್ನು ನವಜಾತ ಶಿಶು ಘಟಕ ಎರಡು ವರ್ಷದ ಹಿಂದೆ ಆರಂಭವಾಗಿದೆ. ಈ ಘಟಕ ಆರಂಭವಾಗುವುದಕ್ಕಿಂತ ಮುನ್ನಈ ಹಿಂದೆ ಒಂದು ಸಾವಿರ ಶಿಶುಗಳು ಜನಿಸಿದರೆ ಶೇಕಡಾ 60 ರಷ್ಟು ಶಿಶುಗಳು ಸಾವನ್ನಪ್ಪುತ್ತಿದ್ದವೂ, ಆದರೆ ಈಗ ಶೇಕಡಾ 30 ಕ್ಕೆ ಬಂದು ನಿಂತಿದೆ. ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇಲ್ಲಿಗೆ ಬರುವ ಹಸುಗೂಸುಗಳಿಗೆ ಉತ್ತಮವಾದ ಚಿಕಿತ್ಸೆ ಸಿಗುತ್ತಿದೆ. ಸರಕಾರಿ ಆಸ್ಪತ್ರೆಗಳೆಂದರೇ ಅಲ್ಲಿ ಸರಿಯಾಗಿ ಚಿಕಿತ್ಸೆ ಸಿಗುವುದಿಲ್ಲ ಎಂಬ ಕೂಗಿನ ನಡುವೆಯೂ ಈ ಆಸ್ಪತ್ರೆ ಶಿಶುಗಳಿಗೆ ಉತ್ತಮ ಚಿಕಿತ್ಸೆಯನ್ನ ನೀಡುತ್ತಿದೆ. ದಿನದ 24 ಗಂಟೆಯೂ ಇಲ್ಲಿ ನುರಿತ ತಜ್ಜ ವೈದ್ಯರ ತಂಡ ಸೇವೆ ಮಾಡುತ್ತಿದ್ದು, ಇಲ್ಲಿಗೆ ಬರುವ ರೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಆಸ್ಪತ್ರೆ ವೈದ್ಯರು ನೋಡಿಕೊಳ್ಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ
ಮರಳಿನಲ್ಲಿ ಸಿಲುಕಿಕೊಂಡ ಫೆರಾರಿ ಕಾರು; ರಸ್ತೆಗೆ ಎಳೆದು ತಂದ ಎತ್ತಿನ ಗಾಡಿ
ಮರಳಿನಲ್ಲಿ ಸಿಲುಕಿಕೊಂಡ ಫೆರಾರಿ ಕಾರು; ರಸ್ತೆಗೆ ಎಳೆದು ತಂದ ಎತ್ತಿನ ಗಾಡಿ