New Year 2025: ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ವಿಶ್ವದಾದ್ಯಂತ 2025ರ ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಆಕ್ಲೆಂಡ್‌ನಲ್ಲಿ ನಡೆದ ಆಚರಣೆಗಳು ವಿಶೇಷವಾಗಿದ್ದು, ಸ್ಕೈ ಟವರ್‌ನಿಂದ ಪಟಾಕಿಗಳು ಸಿಡಿಸಲಾಯಿತು. ಕೇಕ್ ಕತ್ತರಿಸುವುದು, ಪಟಾಕಿ ಸಿಡಿಸುವುದು ಮುಂತಾದ ಆಚರಣೆಗಳು ಜನರಲ್ಲಿ ಉತ್ಸಾಹವನ್ನು ತಂದಿವೆ. ಜಗತ್ತಿನಾದ್ಯಂತ ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದು, ಜನರು ಕುಣಿದು ಕುಪ್ಪಳಿಸಿದ್ದಾರೆ.
ಹೊಸ ವರ್ಷವನ್ನು (New Year) ಕೇವಲ ಭಾರತ ದೇಶದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. 2024ಕ್ಕೆ ಗುಡ್ ಬಾಯ್ ಹೇಳಿ ಈಗಾಗಲೇ ಜಗತ್ತಿನ ಹಲವೆಡೆ 2025ಕ್ಕೆ ಹಾಯ್ ಹೇಳಲಾಗಿದೆ. ನ್ಯೂಯಾರ್ಕ್ನ ಆಕ್ಲೆಂಡ್‌ನಲ್ಲಿ ನೂತನ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ 2025ನ್ನು ಆಕ್ಲೆಂಡ್ ಜನರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಆಕ್ಲೆಂಡ್ನ ಸ್ಕೈ ಟವರ್‌ನಿಂದ ಬೆಳಕಿನ ಬಾಣ ಬಿರುಸುಗಳು ಸಿಡಿದಿವೆ. ಕೌಂಟ್ಡೌನ್ ಮುಗಿಯುತ್ತಿದ್ದಂತೆ ಆಗಸದಲ್ಲಿ ಬೆಳಕಿನ ಚಿತ್ತಾರವೇ ಮೂಡಿತ್ತು. ಸಿಡಿಮದ್ದು ಸಿಡಿಯುತ್ತಿದ್ದಂತೆ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos