ವರ್ಷದ ಕೊನೆಯ ಸೂರ್ಯಾಸ್ತಮಾನವನ್ನು ನೋಡಿರದವರಿಗೆ ಇಲ್ಲಿದೆ ದೃಶ್ಯಕಾವ್ಯ!
ಹೊಸ ವರ್ಷವನ್ನು ಬರಮಾಡಿಕೊಳ್ಳಲು ಎಲ್ಲರೂ ಉತ್ಸುಕತೆಯಿಂದ ಕಾಯುತ್ತಿದ್ದಾರೆ. ನಮ್ಮಿಂದ ಅದು ಸುಮಾರು 4 ಗಂಟೆಗಳಷ್ಟು ಮಾತ್ರ ದೂರದಲ್ಲಿದೆ. ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಜನ ಕೇಕ್ಗಳೊಂದಿಗೆ ರೆಡಿಯಾಗಿ ಕೂತಿದ್ದಾರೆ. ಹೊಸ ವರ್ಷ ಸಮಸ್ತ ಕನ್ನಡಿಗರಿಗೆ ಒಳಿತು ಮಾಡಲಿ ಮತ್ತು ಹೊಸ ವರ್ಷದಲ್ಲಿ ಏನೆಲ್ಲ ಸಾಧಿಸಬೇಕೆಂದು ಛಲ ತೊಟ್ಟಿದ್ದಾರೋ ಅವೆಲ್ಲ ಈಡೇರಲಿ, ಯಾರೂ ನಿರಾಶರಾಗೋದು ಬೇಡ.
ಹುಬ್ಬಳ್ಳಿ: ಹೊಸ ವರ್ಷ 2025 ರ ಆಗಮನಕ್ಕಾಗಿ ನಾವಿನ್ನೂ ಕಾಯುತ್ತಿದ್ದೇವೆ, ಕ್ಷಣಗಣನೆ ಆರಂಭವಾಗಿದೆ. ನಮ್ಮ ಹುಬ್ಬಳ್ಳಿ ವರದಿಗಾರ ಮತ್ತು ಕೆಮೆರಾಮನ್ ಒಂದು ಸುಂದರವಾದ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ದೃಶ್ಯವನ್ನು ಸೆರೆಹಿಡಿದಿದ್ದು ನಗರದ ಉಣಕಲ್ ಕೆರೆಯಲ್ಲಿ. ವರ್ಷ 2024 ರ ಕೊನೆಯ ಸೂರ್ಯಾಸ್ತಮಾನದ ದೃಶ್ಯವಿದು. ನಾಳೆ ಬೆಳಗ್ಗೆ ನಮ್ಮ ಮತ್ತು ನಿಮ್ಮ ಊರುಗಳಲ್ಲಿ 2025ರ ಮೊದಲ ಸೂರ್ಯೋದಯ ಆಗಲಿದೆ. ಹೊಸ ವರ್ಷಕ್ಕೆ ಅಂತ ಅನೇಕರು ರೆಸ್ಯುಲೂಷನ್ ಗಳು ಮಾಡಿಕೊಂಡಿರುತ್ತಾರೆ, ಅವರಿಗೆಲ್ಲ ಒಳ್ಳೆಯದಾಗಲಿ ಮತ್ತು ತಾವು ತೊಡುವ ಪಣಕ್ಕೆ ಬದ್ಧರಾಗಿರಲಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: New Year 2025: ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
Latest Videos