AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸವರ್ಷ ಸಂಭ್ರಮಾಚರಣೆಯ ಭರದಲ್ಲಿ ನಿಮಗಾಗಿ ಮನೆಯಲ್ಲಿ ಕಾಯುತ್ತಿರುವ ಜನರನ್ನು ಮರೆಯಬೇಡಿ: ಜಾಹ್ನವಿ, ಡಿಸಿಪಿ

ಹೊಸವರ್ಷ ಸಂಭ್ರಮಾಚರಣೆಯ ಭರದಲ್ಲಿ ನಿಮಗಾಗಿ ಮನೆಯಲ್ಲಿ ಕಾಯುತ್ತಿರುವ ಜನರನ್ನು ಮರೆಯಬೇಡಿ: ಜಾಹ್ನವಿ, ಡಿಸಿಪಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 31, 2024 | 4:50 PM

Share

ಕೇವಲ 2-3 ನಿಮಿಷಗಳ ಮೋಜಿಗಾಗಿ ಯಾರೂ ಹುಚ್ಚು ಮತ್ತು ಅಪಾಯಕಾರಿ ಸಾಹಸಗಳಿಗೆ ಕೈ ಹಾಕಬಾರದು, ಮನೆಗಳಲ್ಲಿ ಅಪ್ಪ ಅಮ್ಮನೋ, ಹೆಂಡತಿ ಮಕ್ಕಳೋ, ಅಣ್ಣ-ತಮ್ಮ ಇಲ್ಲ ಅಕ್ಕ-ತಂಗಿ ಕಾಯುತ್ತಿದ್ದಾರೆ ಅನ್ನೋದನ್ನು ಜನ ಮರೆಯಬಾರದು, ಎಲ್ಲ ಕಡೆ ಕೆಮೆರಾಗಳನ್ನು ಅಳವಡಿಸಲಾಗಿದೆ, ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದರೆ ತಪ್ಪಿಸಿಕೊಳ್ಳುವ ಅವಕಾಶವೇ ಇಲ್ಲ ಎಂದು ಜಾಹ್ನವಿ ಹೇಳಿದರು.

ಮೈಸೂರು: ರಾಜ್ಯದ ಸಾಂಸ್ಕೃತಿಕ ನಗರಿ ಎನಿಸಿಕೊಂಡಿರುವ ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಯಾವುದೇ ಅಹಿತಕಾರಿ ಘಟನೆ ಮತ್ತು ಅಪಘಾತಗಳು ಜರುಗದಂತಿರಲು ನಗರದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರಿ ವಿಭಾಗದ ಪೊಲೀಸ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ನಮ್ಮ ಮೈಸೂರು ವರದಿಗಾರನೊಂದಿಗೆ ಮಾತಾಡಿರುವ ಡಿಸಿಪಿ ಜಾಹ್ನವಿ, ಸಾಕಷ್ಟು ಪ್ರವಾಸಿಗರು ಮೈಸೂರಿಗೆ ಆಗಮಿಸಿರುವುದರಿಂದ ಟ್ರಾಫಿಕ್ ದೃಷ್ಟಿಯಿಂದ ಇವತ್ತಿನ ದಿನ ಮಹತ್ವದೆಂದು ಹೇಳುತ್ತಾರೆ. ರಸ್ತೆಗಳ ಮೇಲೆ, ರಿಂಗ್ ರೋಡಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ, ವ್ಹೀಲಿಂಗ್, ಡ್ರಂಕ್ ಅಂಡ್ ಡ್ರೈವ್ ಮೊದಲಾದವುಗಳ ಮೇಲೆ ನಿಗಾ ಇಡಲು ಮತ್ತು ತಪ್ಪಿಸಲು ಸುಮಾರು 200 ಚೆಕ್ ಪಾಯಿಂಟ್​​​ಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್​​ರೊಂದಿಗೆ ಕೈಜೋಡಿಸಿದ ಪಾಲಿಕೆ: ಏನೆಲ್ಲಾ ರೂಲ್ಸ್ ಗೊತ್ತಾ?