ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್​​ರೊಂದಿಗೆ ಕೈಜೋಡಿಸಿದ ಪಾಲಿಕೆ: ಏನೆಲ್ಲಾ ರೂಲ್ಸ್ ಗೊತ್ತಾ?

ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆಗೆ ಸರ್ಕಾರ ಅನುಮತಿ ನೀಡಿದೆ. ರಾತ್ರಿ 1 ರಿಂದ 2ರೊಳಗೆ ಆಚರಣೆ ಮುಗಿಸಬೇಕು. M.G ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ಗಳಲ್ಲಿ ಆಚರಣೆಗೆ ಅನುಮತಿ ಇದೆ. ರಾತ್ರಿ 9 ಗಂಟೆಯ ನಂತರ ಪ್ರಮುಖ ಫ್ಲೈಓವರ್‌ಗಳು ಬಂದ್ ಆಗಲಿವೆ. ಡ್ರಿಂಕ್ ಆ್ಯಂಡ್ ಡ್ರೈವ್ ಮತ್ತು ಅನುಚಿತ ವರ್ತನೆಗೆ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ.

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್​​ರೊಂದಿಗೆ ಕೈಜೋಡಿಸಿದ ಪಾಲಿಕೆ: ಏನೆಲ್ಲಾ ರೂಲ್ಸ್ ಗೊತ್ತಾ?
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್​​ನೊಂದಿಗೆ ಕೈಜೋಡಿಸಿದ ಪಾಲಿಕೆ: ಏನೆಲ್ಲ ರೂಲ್ಸ್ ಗೊತ್ತಾ?
Follow us
ಶಾಂತಮೂರ್ತಿ
| Updated By: ಗಂಗಾಧರ​ ಬ. ಸಾಬೋಜಿ

Updated on:Dec 30, 2024 | 6:54 PM

ಬೆಂಗಳೂರು, ಡಿಸೆಂಬರ್​ 30: ಹೊಸ ವರ್ಷವನ್ನ (New Year) ವೆಲ್ ಕಮ್ ಮಾಡುವುದಕ್ಕೆ ಕೇವಲ ಒಂದೇ ದಿನ ಬಾಕಿ ಉಳಿದಿದೆ. ರಾಜಧಾನಿಯಲ್ಲಿ ಹೊಸ ವರ್ಷ ಆಚರಣೆಗೆ ಸಕಲ ಸಿದ್ಧತೆ ನಡೆದಿದ್ದರೆ, ಇತ್ತ ಸಂಭ್ರಮಾಚರಣೆಗೆ ಯಾವುದೇ ಅಡ್ಡಿಯಾಗದಂತೆ ಕ್ರಮವಹಿಸುವುದಕ್ಕೆ ಖಾಕಿಪಡೆ ಸಜ್ಜಾಗಿದೆ. ಬಿಬಿಎಂಪಿ ಕೂಡ ನ್ಯೂ ಇಯರ್ ಸೆಲೆಬ್ರೇಷನ್​ಗೆ ಸಾಥ್ ನೀಡುತ್ತಿದೆ. ಸದ್ಯ ನ್ಯೂ ಇಯರ್ ಸಂಭ್ರಮಾಚರಣೆಗೆ ಬೆಂಗಳೂರಿನಲ್ಲಿ ಯಾವೆಲ್ಲಾ ರೂಲ್ಸ್ ಇರುತ್ತೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆಗೆ ಸಕಲ ತಯಾರಿ ನಡೆದಿದೆ. ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ರಂಗೇರುತ್ತಿದ್ರೆ, ಯಾವುದೇ ಕಹಿ ಘಟನೆ ನಡೆಯದಂತೆ ಖಾಕಿಪಡೆ ಕಣ್ಣಿಡೋಕೆ ಸಜ್ಜಾಗಿದೆ. ಇತ್ತ ಪ್ರತಿವರ್ಷದಂತೆ ಈ ಬಾರೀ ಹೊಸ ವರ್ಷಕ್ಕೆ ಪಾಲಿಕೆ ಕೂಡ ಕೈ ಜೋಡಿಸೋಕೆ ಸಜ್ಜಾಗಿದ್ದು, ಕಸದ ನಿರ್ವಹಣೆ, ಸಿಸಿಟಿವಿ ಕ್ಯಾಮರಾ ನಿರ್ವಹಣೆ ಸೇರಿ ಇನ್ನಿತರ ಕೆಲಸಗಳಲ್ಲಿ ಪೊಲೀಸ್ ಇಲಾಖೆ ಜೊತೆ ಕೈಜೋಡಿಸೋಕೆ ಸಜ್ಜಾಗಿದೆ. ಅಲ್ಲದೇ ಹೆಚ್ಚು ಜನ ಸೇರುವ ಕಡೆ ಪ್ರಾಥಮಿಕ ಚಿಕಿತ್ಸೆಗೆ ಪಾಲಿಕೆ ವೈದ್ಯರನ್ನ ನೇಮಿಸಿ ಮೇಲ್ವಿಚಾರಣೆ ನಡೆಸುವುದು ಪಾಲಿಕೆ ರೆಡಿಯಾಗಿದೆ.

ನ್ಯೂ ಇಯರ್​ಗೆ ಏನೆಲ್ಲ ರೂಲ್ಸ್?

  • ರಾತ್ರಿ 1ರಿಂದ 2 ಗಂಟೆಯೊಳಗೆ ಸೆಲೆಬ್ರೇಷನ್ ಮುಗಿಸಬೇಕು
  • ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಇಂದಿರಾನಗರದಲ್ಲಿ ಆಚರಣೆಗೆ ಅನುಮತಿ.
  • ರಾತ್ರಿ 9 ಗಂಟೆ ಬಳಿಕ ಪ್ರಮುಖ ಫ್ಲೈ ಓವರ್​ಗಳು ಬಂದ್​
  • ಸಂಜೆ 7 ಗಂಟೆ ಬಳಿಕ ಎಂ.ಜಿ.ರಸ್ತೆ, ಚರ್ಚ್ ಸ್ಟ್ರೀಟ್ ವಾಹನ ಸಂಚಾರ ಬಂದ್​
  • ಹೆಚ್ಚು ಜನ ಸೇರುವ ಕಡೆ 800 ಸಿಸಿಟಿವಿ ಕ್ಯಾಮರಾ ಅಳವಡಿಕೆ
  • ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸರ ನಿಯೋಜನೆ
  • ಲೌಡ್ ಸ್ಪೀಕರ್, ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ
  • ಅನುಮತಿ ಪಡೆದಿದ್ರೆ ಮಾತ್ರ ಹೆಚ್ಚು ಜನ ಸೇರಿ ಆಚರಣೆಗೆ ಅವಕಾಶ
  • ಡ್ರಿಂಕ್ ಆ್ಯಂಡ್​ ಡ್ರೈವ್, ವೀಲಿಂಗ್ ಮಾಡಿದ್ರೆ ಕ್ರಮ
  • ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತ ವರ್ತನೆ ಮಾಡಿದ್ರೆ ಕ್ರಮ
  • ದೊಡ್ಡ ದೊಡ್ಡ ಸ್ಕ್ರೀನ್​ಗಳ ಮೂಲಕ ಖಾಕಿಪಡೆ ನಿಗಾ

ರಾತ್ರಿ 2ಗಂಟೆವರೆಗೂ ಬಿಎಂಟಿಸಿ, ಮೆಟ್ರೋ ಸಂಚಾರ

ಡಿಸೆಂಬರ್ 31ರ ರಾತ್ರಿ 11ಗಂಟೆಯಿಂದ ರಾತ್ರಿ 2ಗಂಟೆವರೆಗೂ, ಬಿಎಂಟಿಸಿ ಬಸ್​ಗಳು ಸಂಚರಿಸಲಿವೆ. ಹೆಚ್ಚಿನ ಜನ ಸೇರುವ ಸಾಧ್ಯತೆ ಡಿಸೆಂಬರ್ 31ರ ರಾತ್ರಿ 11 ರಿಂದ 2ರವರೆಗೆ ಎಂ.ಜಿ.ರಸ್ತೆ ಮೆಟ್ರೋ ರೈಲು ನಿಲ್ದಾಣ ಬಂದ್ ಮಾಡಲಾಗುತ್ತಿದೆ. ಅಂದರೆ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಇಳಿಯಬಹುದು, ಹೊರತು ಹತ್ತಲು ಅವಕಾಶ ಇರುವುದಿಲ್ಲ ಅಂತಾ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆಗೆ ಸಿದ್ದತೆ: ಬಿಗಿ ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?

ಸದ್ಯ ಈಗಾಗಲೇ ರಾಜಧಾನಿಯ ಬಾರ್, ಪಬ್​ಗಳು ಜೊತೆಗೆ ಪ್ರಮುಖ ರಸ್ತೆಗಳಲ್ಲಿ ಹೊಸ ವರ್ಷದ ಆಚರಣೆಗೆ ತಯಾರಿ ನಡೆದಿದ್ದು, ಇನ್ನು ಈ ಬಾರೀ ಕೂಡ ಅಧಿಕ ಜನರು ಸಂಭ್ರಮಾಚರಣೆಗೆ ಸೇರುವ ನಿರೀಕ್ಷೆಯಿದೆ. ಸದ್ಯ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ ಶೋಕಾಚರಣೆ ಜಾರಿಯಲ್ಲಿದ್ದರೂ ನ್ಯೂ ಇಯರ್ ಸೆಲೆಬ್ರೇಷನ್​ಗೆ ಯಾವುದೇ ಅಡ್ಡಿ ಇಲ್ಲವೆಂದು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಸಿಟಿಮಂದಿ ಹೊಸ ವರ್ಷವನ್ನ ವೆಲ್ ಕಮ್ ಮಾಡುವುದಕ್ಕೆ ತುದಿಗಾಲಲ್ಲಿ ಕಾದುನಿಂತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:52 pm, Mon, 30 December 24

ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ