ಬೀದರ್ನಲ್ಲಿ ಬರೋಬ್ಬರಿ 15 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿದ NCB ಅಧಿಕಾರಿಗಳು
ಬರೋಬ್ಬರಿ 15 ಕೋಟಿ ರೂಪಾಯಿ ಮೌಲ್ಯದ ಗಾಂಜಾವನ್ನು ಎನ್ಸಿಬಿ(NCB) ಅಧಿಕಾರಿಗಳು ಜಪ್ತಿ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಔರಾದ್(Aurad) ತಾಲೂಕಿನ ವನಮಾರಪಳ್ಳಿ ಬಳಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಎಸ್‌ಸಿಬಿ ಅಧಿಕಾರಿಗಳು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ವನಮಾರಪಳ್ಳಿ ಬಳಿ ಜಪ್ತಿ ಮಾಡಿದ್ದು, ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೀದರ್, ಮೇ.12: ಜಿಲ್ಲೆಯ ಔರಾದ್(Aurad) ತಾಲೂಕಿನ ವನಮಾರಪಳ್ಳಿ ಬಳಿ ಬರೋಬ್ಬರಿ 15 ಕೋಟಿ ರೂಪಾಯಿ ಮೌಲ್ಯದ ಗಾಂಜಾವನ್ನು ಎನ್ಸಿಬಿ(NCB) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಒಡಿಶಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಲಾರಿಯಲ್ಲಿ 1500 ಕೆ.ಜಿ ಗಾಂಜಾವನ್ನ ಸಾಗಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಎಸ್‌ಸಿಬಿ ಅಧಿಕಾರಿಗಳು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ವನಮಾರಪಳ್ಳಿ ಬಳಿ ಜಪ್ತಿ ಮಾಡಿದ್ದು, ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕಾರು ನಿಯಂತ್ರಣ ತಪ್ಪಿ ಮನೆಗಳ ಮುಂದೆ ನಿಂತಿದ್ದ ಬೈಕ್ಗಳಿಗೆ ಡಿಕ್ಕಿ
ಕಾರು ನಿಯಂತ್ರಣ ತಪ್ಪಿ ಮನೆಗಳ ಮುಂದೆ ನಿಂತಿದ್ದ ಬೈಕ್ಗಳಿಗೆ ಡಿಕ್ಕಿ ಹೊಡೆದಿದ್ದು, ಒಂದು ಬುಲೆಟ್ ಸೇರಿದಂತೆ 6 ಬೈಕ್ಗಳು ಫುಲ್ ಜಖಂಗೊಂಡಿದೆ. ಈ ವೇಳೆ ಬೈಕ್ಗಳಿಗೆ ಡಿಕ್ಕಿ ಹೊಡೆದು ಮನೆ ಮುಂದೆ ನಿಂತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಕಾರು ನಿಂತಿದೆ. ಈ ವೇಳೆ ಮಕ್ಕಳಿಗೆ ಡಿಕ್ಕಿ ಹೊಡೆದಾಗ ಗಾಬರಿಗೊಂಡ ಆರೋಪಿ ಬಾಲಕ, ತನ್ನ ಮನೆಗೆ ತೆರಳಿದ್ದ. ನಂತರ ಆರೋಪಿ ಕುಟುಂಬಸ್ಥರು ಬಾಲಕನನ್ನ ಮನೆಯಲ್ಲಿ ಇರಿಸಿ ಬೀಗ ಹಾಕಿದ್ದರು. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಬಾಲಕನನ್ನ ವಶಕ್ಕೆ ಪಡೆದು ತೆರಳಿದ್ದು, ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಸಧ್ಯ ಸ್ಥಳದಿಂದ ಕಾರುಗಳು ಮತ್ತು ಜಖಂಗೊಂಡಿದ್ದ ಬೈಕ್ಗಳನ್ನ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಪುಷ್ಪ ಸಿನಿಮಾ ಶೈಲಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ; 1 ಕೋಟಿ ಮೌಲ್ಯದ ಗಾಂಜಾ ಜಪ್ತಿ
ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ದರೋಡೆ
ಮಂಗಳೂರು: ನೀರು ಕೇಳುವ ಸೋಗಿನಲ್ಲಿ ಬಂದು ದರೋಡೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದಲ್ಲಿ ನಿನ್ನೆ(ಮೇ.11) ನಡೆದಿದೆ. ಸುಹೈಬಾ (25) ಎಂಬುವರ ಮನೆಗೆ ಬಂದ ಓರ್ವ ಗಂಡಸು ಮತ್ತು ಹೆಂಗಸು, ನೀರು ಕೇಳಿ ಮನೆಯ ಸದಸ್ಯರ ಬಗ್ಗೆ ವಿಚಾರಣೆ ಮಾಡಿದ್ದಾರೆ. ನೀರು ತರಲು ಹೋದಾಗ ಮನೆಗೆ ನುಗ್ಗಿ ಬೀರು ತಗೆದು ಹುಡುಕಾಟ ನಡೆಸಿದ್ದಾರೆ. ಇದನ್ನು ನೋಡಿ ಕಿರುಚಿದ ಸುಹೈಬಾ ಮೇಲೆ ಹಲ್ಲೆ ಮಾಡಿ ಚೂರಿ ತೋರಿಸಿ ಕೂಗಾಡದಂತೆ ಬೆದರಿಕೆ ಹಾಕಿದ್ದಾರೆ. ಜೊತೆಗೆ ಸುಹೈಬಾ ಕೈಯಲ್ಲಿದ್ದ ಎರಡು ಚಿನ್ನದ ಉಂಗುರ ಮತ್ತು ಕರಿಮಣಿ ಕಸಿದು ಪರಾರಿಯಾಗಿದ್ದಾರೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:03 pm, Sun, 12 May 24