ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಿಂದ ವಿಡಿಯೋವೊಂದು ಹೊರಬಿದ್ದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ದೇವಸ್ಥಾನದಲ್ಲಿ ಕಳ್ಳನೊಬ್ಬ ಪೂಜೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪೂಜೆ ಮುಗಿಸಿ ಅಲ್ಲಿದ್ದ ದೇವರ ಬೆಳ್ಳಿಯ ಕಿರೀಟವನ್ನು ಕಳ್ಳ ಕದ್ದುಕೊಂಡು ಹೋಗುತ್ತಾನೆ. ಅದೇ ರೀತಿ ಇಲ್ಲೂ ಕಳ್ಳನೊಬ್ಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಗವಂತನ ವರವನ್ನು ಪಡೆದವರಂತೆ ಆಂಜನೇಯ ಸ್ವಾಮಿಯ ಬೆಳ್ಳಿ ಕಿರೀಟವನ್ನು ಕದ್ದೊಯ್ದಿದ್ದಾನೆ.
ಮೊದಲು ಕೈಗಳನ್ನು ಮುಗಿದು ಕುಳಿತ ಕಳ್ಳ ನಂತರ ಆಂಜನೇಯ ಸ್ವಾಮಿಯ ಕಿರೀಟವನ್ನೇ ಕದ್ದಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ನಡೆದಿದೆ. ದೇವಸ್ಥಾನದಲ್ಲಿ ಕಳ್ಳನೊಬ್ಬ ಪೂಜೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪೂಜೆ ಮುಗಿಸಿ ಅಲ್ಲಿದ್ದ ದೇವರ ಬೆಳ್ಳಿಯ ಕಿರೀಟವನ್ನು ಕಳ್ಳ ಕದ್ದುಕೊಂಡು ಹೋಗಿದ್ದಾನೆ. ಈ ಕಳ್ಳತನದ ವಿಡಿಯೋ ಹೊರಬಿದ್ದಿದೆ. ಇದರಲ್ಲಿ ಬೆಳ್ಳಿ ಕಿರೀಟವನ್ನು ಹೇಗೆ ಕಳವು ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos