ಬೆಂಗಳೂರು, ಡಿಸೆಂಬರ್ 19: ಬೆಂಗಳೂರಿನ ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಆವರಣದಲ್ಲಿ (jnanabharati campus) ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸರಕು ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಈ ಕುರಿತು ಟಿವಿ9 ನಿರಂತರ ಸುದ್ದಿ ಪ್ರಸಾರ ಬೆನ್ನಲ್ಲೇ ಇದೀಗ ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿನ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ. ವಿದ್ಯಾರ್ಥಿಗಳ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ವಿಶ್ವವಿದ್ಯಾಲಯಕ್ಕೆ ಗೂಡ್ಸ್ ವಾಹನಗಳು ಪ್ರವೇಶಿಸಿದಂತೆ ನಿರ್ಬಂಧ ಹೇರಲಾಗಿದೆ.
ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಿಕೊಳ್ಳಲು ವಿವಿ ಕ್ಯಾಂಪಸ್‌ಗೆ ಸರಕು ವಾಹನಗಳು ನುಗ್ಗುತ್ತಿದ್ದವು. ಟಿಪ್ಪರ್, ಲಾರಿ, ಟೆಂಪೋ,ಗೂಡ್ಸ್ ಆಟೋಗಳ ಓಡಾಟದಿಂದ ಕ್ಯಾಂಪಸ್‌ನಲ್ಲಿ ಅಪಘಾತ ಹೆಚ್ಚಾಗಿತ್ತು. ಈ ಹಿಂದೆ ಕ್ಯಾಂಪಸ್‌ನಲ್ಲಿ ಬಿಎಂಟಿಸಿ ಬಸ್ ಹರಿದು ವಿದ್ಯಾರ್ಥಿನಿ ಮೃತಪಟ್ಟದ್ದಳು. ಟಿವಿ9 ಈ ಬಗ್ಗೆ ಸುದ್ದಿ ಪ್ರಸಾರ ಮಾಡಿದ ಬಳಿಕ ವಿವಿ ಎಚ್ಚೆತ್ತುಕೊಂಡಿತ್ತು.
ಉಲ್ಲಾಳ, ಮರಿಯಪ್ಪನಪಾಳ್ಯ, ನಾಗರಭಾವಿ ಸರ್ಕಲ್, ಜ್ಞಾನಭಾರತಿ ಕಡೆಯಿಂದ ಯಾವುದೇ ಸರಕು ವಾಹನಗಳು ವಿಶ್ವವಿದ್ಯಾಲಯ ಪ್ರವೇಶಿದಂತೆ ಪರ್ಯಾಯ ಮಾರ್ಗವನ್ನು ಬಳಸಬೇಕೆಂದು ಕಡ್ಡಾಯ ಮಾಡಲಾಗಿದೆ.
ಆದರೆ, ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಬೃಹತ್ ಹಾಗೂ ಸರಕು ವಾಹನಗಳ ನಿಷೇಧಕ್ಕೆ ಡೋಂಟ್ ಕೇರ್ ಎನ್ನಲಾಗುತ್ತಿದೆ. ಕ್ಯಾಂಪಸ್‌ನಲ್ಲಿ ಬೃಹತ್ ಹಾಗೂ ಸರಕು ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿದರೂ ವಾಹನಗಳು ಓಡಾಟ ನಡೆಸುತ್ತಿವೆ. ಕೇವಲ ಆದೇಶ ಮಾಡಿ ಪೊಲೀಸ್ ಇಲಾಖೆ ಹಾಗೂ ವಿವಿ ಸುಮ್ಮನಾಗಿದೆ. ಕ್ಯಾಂಪಸ್ ಒಳ ಪ್ರವೇಶ ನಿಷೇಧ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಎಲ್ಲಾ ರಸ್ತೆಗಳಿಂದಲೂ ವಿವಿ ಕ್ಯಾಂಪಸ್ ಗೆ ಬೃಹತ್ ಹಾಗೂ ಸರಕು ವಾಹನಗಳು ಬರುತ್ತಿವೆ.
ಇದನ್ನೂ ಓದಿ: ಬೆಂಗಳೂರು ವಿವಿ ಆವರಣದಲ್ಲಿ ಸಾರ್ವಜನಿಕ ವಾಹನ ಸಂಚಾರ ನಿಷೇಧಿಸಿ: ಸರ್ಕಾರಕ್ಕೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ವಾಹನಗಳ ಓಡಾಟ ಹೆಚ್ಚಾಗಿರುವುದರಿಂದ ವಿದ್ಯಾರ್ಥಿ ಹಾಗೂ ಶಿಕ್ಷಕರ ವಲಯಕ್ಕೆ ಕಿರಿಕಿರಿ ಎದುರಾಗಿದೆ. ಕಳೆದ ವರ್ಷವಷ್ಟೇ ವಾಹನಗಳ ಆರ್ಭಟದಿಂದ ವಿದ್ಯಾರ್ಥಿನಿ ಬಲಿಯಾಗಿದ್ದು, ಘಟನೆ ಮಾಸುವ ಮುನ್ನವೇ ಮತ್ತೆ ವಾಹನಗಳ ಸಂಚಾರ ಏರಿಕೆ ಸಮಸ್ಯೆ ತಂದೊಡಿದೆ. ಹೀಗಾಗಿ ಸರ್ಕಾರ ಹಾಗೂ ವಿವಿ ಕಬ್ಬನ್ ಪಾರ್ಕ್ನಲ್ಲಿರುವಂತೆ ರೂಲ್ಸ್ ವಿವಿಯಲ್ಲಿಯೂ ಜಾರಿಗೆ ಮುಂದಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.