ನನ್ನಣ್ಣನ ಜೀವವನ್ನ ಸರ್ಕಾರ ಕೊಡಲಾಗಲ್ಲ, ಪರಿಹಾರವನ್ನಾದರೂ ನೀಡಿ ನೆರವಾಗಲಿ: ಸುಗುಣ, ವಿಕ್ರಂಗೌಡನ ತಂಗಿ
ಸುಗುಣ ಕುಟುಂಬ ಬಡತನದಲ್ಲಿ ಜೀವಿಸುತ್ತಿದೆ, ಮಗ ಮತ್ತು ಮಗಳು ದುಡಿದು ತಂದರೆ ಮಾತ್ರ ಮನೆಯಲ್ಲಿ ಅನ್ನ ಬೇಯುತ್ತದೆ, ಮನೇಲಿ ಒಬ್ಬ ವ್ಯಕ್ತಿ ಹಾಸಿಗೆ ಹಿಡಿದಿದ್ದಾರೆ, ಕೈಕಾಲು ಬಿದ್ದುಹೋಗಿರುವುದರಿಂದ ಅವರಿಗೆ ಎದ್ದು ನಿಲ್ಲಲೂ ಅಗಲ್ಲ. ಈ ಭಾಗದಲ್ಲಿ ದಿನಗೂಲಿ ಬಹಳ ಕಡಿಮೆ ಎನ್ನಲಾಗುತ್ತಿದೆ, ಹಾಗಾಗಿ ತಮಗೊಂದು ಸೂರು ಮತ್ತು ಪರಿಹಾರ ನೀಡಿದರೆ ಬಹಳ ಪ್ರಯೋಜನವಾಗುತ್ತದೆ ಎಂದು ಸುಗುಣ ಹೇಳುತ್ತಾರೆ.
ಉಡುಪಿ: ಕರಾವಳಿ ಭಾಗದ ನಕ್ಸಲರು ಶರಣಾಗುತ್ತಿದ್ದಾರೆ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. ಕೆಲ ತಿಂಗಳ ಮೊದಲು ಪೊಲೀಸರ ಜೊತೆ ನಡೆದ ಎನ್ಕೌಂಟರ್ ನಲ್ಲಿ ಬಲಿಯಾದ ನಕ್ಸಲ್ ನಾಯಕ ವಿಕ್ರಂಗೌಡನ ಸಹೋದರಿ ಸುಗುಣ ನಮ್ಮ ಉಡುಪಿ ಪ್ರತಿನಿಧಿಯೊಂದಿಗೆ ಮಾತಾಡಿದ್ದು ಶರಣಾಗುತ್ತಿರುವ ನಕ್ಸಲರಿಗೆ ಮಾಡಿಕೊಡುತ್ತಿರುವ ಸೌಲಭ್ಯಗಳನ್ನು ತಮ್ಮ ಕುಟುಂಬಕ್ಕೂ ನೀಡಲಿ ಎನ್ನುತ್ತಾರೆ. ಸರ್ಕಾರ ನನ್ನಣ್ಣನ ಜೀವ ತೆಗೆದುಕೊಂಡಿತು, ಜೀವವನ್ನಂತೂ ವಾಪಸ್ಸು ಕೊಡಲಾಗಲ್ಲ, ಅದರೆ ಪರಿಹಾರ ಕೊಟ್ಟರೆ ಬಹಳ ಕಷ್ಟದಿಂದ ಸಾಗುತ್ತಿರುವ ತಮ್ಮ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತದೆ ಎಂದು ಸುಗುಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾಳೆ ಮೋಸ್ಟ್ ವಾಂಟೆಡ್ 6 ನಕ್ಸಲ್ ಶರಣಾಗತಿ…ನಾವೆಲ್ಲರೂ ನಿಮ್ಮ ಮುಂದೆ ಬರುತ್ತೇವೆ ಎಂದ ನಾಯಕಿ