ಬೆಂಗಳೂರು: ಕೊವಿಡ್ ಸೋಂಕಿನಿಂದ ಗುಣಮುಖರಾದವರು ತಮ್ಮ ಪ್ಲಾಸ್ಮಾ ದಾನ ಮಾಡಿದರೆ ಸರ್ಕಾರವು 5,000 ರೂಪಾಯಿ ಆರೈಕೆ ಭತ್ಯೆ ನೀಡಬೇಕೆಂದು ಕೊವಿಡ್ ಮಾನವ ಶಕ್ತಿ ಮತ್ತು ತರಬೇತಿ ಟಾಸ್ಕ್ ಫೋರ್ಸ್ ಈ ಹಿಂದೆ ಶಿಫಾರಸು ಮಾಡಿತ್ತು. ಇದೀಗ, ಈ ಶಿಫಾರಸ್ಸಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಹೌದು, ಸಕ್ರೀಯ ರೋಗಿಗಳ ಚಿಕಿತ್ಸೆಗೆ ಈಗಾಗಲೇ ಸೋಂಕಿನಿಂದ ಗುಣಮುಖರಾದವರ ಪ್ಲಾಸ್ಮಾ ಸಹಕಾರಿಯಾಗಲಿದೆ. ಹೀಗಾಗಿ, ಸೋಂಕಿನಿಂದ ಗುಣಮುಖರಾದವರು ಡಿಸ್ಚಾರ್ಜ್ ಆದ 14 ರಿಂದ 28 ದಿನಗಳ ಒಳಗಾಗಿ ಪ್ಲಾಸ್ಮಾ ದಾನ ಮಾಡಬಹುದು.
ಹೀಗಾಗಿ, ಗುಣಮುಖರಾದವರು ಅತಿ ಹೆಚ್ಚು ಸಂಖ್ಯೆಯಲ್ಲಿ ಬಂದು ಪ್ಲಾಸ್ಮಾ ದಾನ ಮಾಡೋಕೆ ಪ್ರೋತ್ಸಾಹಿಸಲು ಸರ್ಕಾರ 5 ಸಾವಿರ ರೂಪಾಯಿಗಳ ಆರೈಕೆ ಭತ್ಯೆ ನೀಡುವುದಾಗಿ ಘೋಷಣೆ ಮಾಡಿದೆ. ಪ್ಲಾಸ್ಮಾ ದಾನ ಮಾಡಿದವರಿಗೆ ಈ ಆರೈಕೆ ಭತ್ಯೆಯ ಮೂಲಕ ಉತ್ತಮ ಗುಣಮಟ್ಟದ ಆಹಾರ ಖರೀದಿಸಲು ನೆರವಾಗಲಿದೆ ಎಂದು ನೀಡಲಾಗುತ್ತಿದೆ.
Published On - 6:52 pm, Wed, 15 July 20