ಬೆಂಗಳೂರು: ದೇಶದ ಸ್ವಾತಂತ್ರ್ಯ ಅಮೃತಮಹೋತ್ಸವಕ್ಕೆ (Azadi Ka Amrit Mahotsav) ರಾಜ್ಯ ಸರ್ಕಾರ ವಿವಾದವೊಂದನ್ನು ಸದ್ಯಕ್ಕೆ ಇತ್ಯರ್ಥ ಪಡಿಸಿದೆ. ಈ ಸಂಬಂಧ, ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ ನಡೆಯಲಿದೆ, ಬೇರೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಕಂದಾಯ ಸಚಿವ ಅಶೋಕ್ (Revenue Minister R Ashok) ಘೋಷಣೆ ಮಾಡಿದ್ದಾರೆ. ಚಾಮರಾಜಪೇಟೆ ಮೈದಾನದ ಸಂಬಂಧ ಕಂದಾಯ ಸಚಿವ ಅಶೋಕ್ ನೇತೃತ್ವದ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ (Chamraj pet Edga Maidan) ಯಾವ ಸಂಘ-ಸಂಸ್ಥೆಗಳಿಗೂ ಧ್ವಜಾರೋಹಣಕ್ಕೆ ಅವಕಾಶವಿಲ್ಲ. ಸ್ಥಳೀಯ ಶಾಸಕ ಜಮೀರ್ ಅಹ್ಮದ್ಗೂ ಅವಕಾಶವಿರುವುದಿಲ್ಲ. ಸರ್ಕಾರದಿಂದಲೇ ಧ್ವಜಾರೋಹಣ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಅದು ಗುಟ್ಟಹಳ್ಳಿ, ಚಾಮರಾಜಪೇಟೆ ಕಂದಾಯ ಇಲಾಖೆ ಅಂತಾ ಅಸ್ತಿತ್ವದಲ್ಲಿ ಇರಲಿದೆ
ಬೆಂಗಳೂರಿನ ಉತ್ತರ ತಾಲ್ಲೂಕಿನ ಸಹಾಯಕ ಆಯುಕ್ತರು ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ. ರಾಷ್ಟ್ರಧ್ವಜದ ನೀತಿ ನಿಯಮಗಳಡಿ ಎಲ್ಲರೂ ಭಾಗವಹಿಸಬಹುದು. ನನಗ್ಯಾರು ಸ್ನೇಹಿತರಿಲ್ಲ, ಯಾರು ಶತೃುಗಳಿಲ್ಲ. ನಾನು ಅಜಾತಶತ್ರು ಎಂದಿರುವ ಆರ್. ಅಶೋಕ್ ವೇದಿಕೆ ಮೇಲೆ ಸಂಘಟನೆಯವರಿಗೆ ಅವಕಾಶವಿಲ್ಲ. ಈದ್ಗಾ ಮೈದಾನ ಅಂತಾ ಇನ್ಮುಂದೆ ಇರುವುದಿಲ್ಲ. ಅದು ಗುಟ್ಟಹಳ್ಳಿ, ಚಾಮರಾಜಪೇಟೆ ಕಂದಾಯ ಇಲಾಖೆ ಅಂತಾ ಇರಲಿದೆ. ಸದ್ಯ ಕಂದಾಯ ಇಲಾಖೆಗೆ ಆ ಸ್ವತ್ತು ಸೇರಿದೆ. ಹೀಗಾಗಿ ಅದನ್ನ ಮುಂದೆ ಬಿಬಿಎಂಪಿಗೆ ಕೊಡಬೇಕಾ, ಬಿಡಿಎಗೆ ಕೊಡಬೇಕಾ ಅಥವಾ ಕಂದಾಯ ಇಲಾಖೆಯಲ್ಲೇ ಉಳಿಸಿಕೊಳ್ಳಬೇಕಾ ಅನ್ನೋದನ್ನ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದೂ ಆರ್. ಅಶೋಕ್ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಆದೇಶವನ್ನ ಪಾಲನೆ ಮಾಡುತ್ತೇವೆ. ಅದರಂತೆ ಅಲ್ಲಿ ಯಾವುದನ್ನ ತೆರುವುಗೊಳಿಸೋದು, ನಿರ್ಮಿಸೋದು ಇರಲ್ಲ. ಸದ್ಯ ಧ್ವಜಾರೋಹಣವನ್ನ ಮಾಡುತ್ತೇವೆ. ಮುಂದೆ ಧಾರ್ಮಿಕ ಚಟುವಟಿಕೆಗಳಿಗೆ ಕೊಡಬೇಕಾ!? ಬೇಡ್ವಾ ಅನ್ನೋದನ್ನ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಮಾಡಲು ಅವಕಾಶ ನಿಡುವುದರ ಬಗ್ಗೆಯೂ ಚಿಂತಿಸಲಾಗುವುದು ಎಂದು ಸಚಿವ ಅಶೋಕ್ ಹೇಳಿದರು.
ಆಗಸ್ಟ್ 15ರಂದು ಸಹಾಯಕ ಆಯುಕ್ತರಿಂದಲೇ ಧ್ವಜಾರೋಹಣ
ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇವೆ. ಕಂದಾಯ ಇಲಾಖೆಗೆ ಸೇರಿದ ಸ್ವತ್ತು ಅಂತಾ ತೀರ್ಪು ಬಂದಿದೆ. ಹೀಗಾಗಿ ನಮ್ಮ ಇಲಾಖೆಯ ಸುಪರ್ದಿಯಲ್ಲೇ ಆಗಸ್ಟ್ 15ರಂದು ಸಹಾಯಕ ಆಯುಕ್ತರಿಂದಲೇ ಧ್ವಜಾರೋಹಣ ನಡೆಯಲಿದೆ. ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕ, ಸಂಸದರು ಬರಬಹುದು. ಅಲ್ಲಿ ಭಾರತ ಮಾತಾಕೀ ಜೈ, ವಂದೇ ಮಾತರಂ ಘೋಷಣೆ ಮಾತ್ರ ಕೇಳಿಬರುತ್ತದೆ. ಬೇರೆ ಯಾವುದೇ ಘೋಷಣೆ ಮಾಡಬಾರದು ಎಂದು ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಆ ರೂಲ್ಸ್ ಪಾಲನೆಯನ್ನು ಪೊಲೀಸರು ನೋಡಿಕೊಳ್ಳಲಿದ್ದಾರೆ. ಹೆಚ್ಚು ಕಡಿಮೆ ಯಾರಾದ್ರೂ ಗಲಾಟೆ ಮಾಡಿದ್ರೆ ಕಾನೂನು ಕ್ರಮ ಕೈಗೊಳುತ್ತಾರೆ. ಇದನ್ನು ಎಲ್ಲರೂ ಸ್ವಾಗತಿಸುತ್ತಾರೆ ಅನ್ನೋ ಭರವಸೆ ಇದೆ. ಯಾರಿಗಾದರೂ ಹಕ್ಕಿನ ಬಗ್ಗೆ ಆಕ್ಷೇಪವಿದ್ದರೇ ಕಂದಾಯ ಇಲಾಖೆಗೆ ದೂರು ಕೊಡಬಹುದು. ಯಾವುದೇ ಕೋರ್ಟ್ ಹಕ್ಕನ್ನ ಪಾಲಿಕೆಗಾಗಲಿ ಅಥವಾ ವಕ್ಫ್ ಬೋರ್ಡ್ಗೆ ಕೊಟ್ಟಿಲ್ಲ. ಅದು ಕಂದಾಯ ಇಲಾಖೆಗೆ ಸೇರಿದ್ದು ಅಂತಾ ನೀಡಲಾಗಿದೆ. ಹೀಗಾಗಿ ನಾನು ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಖಚಿತಪಡಿಸಿಕೊಂಡಿದ್ದಾರೆ.
ಪ್ರಕರಣದ ಕಾಲಘಟ್ಟವನ್ನು ಸಚಿವ ಅಶೋಕ್ ಸಾದ್ಯಂತವಾಗಿ ಇಂಚಿಂಚು ಬಿಚ್ಚಿಟ್ಟಿದ್ದಾರೆ:
ಬೆಳಗ್ಗೆ ಸಿಎಂ ಜೊತೆ ಫೋನ್ ಮೂಲಕ ಚರ್ಚೆ ಮಾಡಿದ್ದೇನೆ. ಇದು ಬೆಂಗಳೂರಿಗೆ ಹಾಗೂ ರಾಜ್ಯಕ್ಕೆ ಸಂಬಂಧಪಟ್ಟ ಚಾಮರಾಜಪೇಟೆ ಮೈದಾನದ ವಿಚಾರ. ಪರ ವಿರೋಧದ ಕಾಮೆಂಟ್ಸ್ ಬರ್ತಿದೆ. ಅದಕ್ಕಾಗಿ ಚರ್ಚೆ ಮಾಡಿದೆ. ಸರ್ವೆ ನಂಬರ್ 40 ಗುಟ್ಟಹಳ್ಳಿಯಲ್ಲಿ 10 ಎಕರೆ 5 ಗುಂಟೆ ಇತ್ತು. ಈಗ 2 ಎಕರೆ 5 ಗುಂಟೆ ಉಳಿದಿದೆ. ಲೇ ಔಟ್ ಮಾಡಬೇಕಾದರೇ ಉಳಿದ ಜಾಗ ಬಳಸಿಕೊಂಡಿದ್ದಾರೆ. 1952 ರಲ್ಲಿ ಸರ್ಕಾರವು ಸರ್ಕಾರಿ ಕನ್ನಡ ಸ್ಕೂಲ್ ಕಟ್ಟಲು ಪ್ರಸ್ತಾವನೆ ಮಂಡಿಸಿತು. ಅಬ್ದುಲ್ ವಾಜಿದ್ ಅನ್ನೋ ವ್ಯಕ್ತಿ ಮುನಿಸಿಲ್ ಕೋರ್ಟ್ ಆಗ ಹೋಗಿದ್ದರು. ನಾವೂ ಇಲ್ಲಿ ಪ್ರಾರ್ಥನೆ ಮಾಡ್ತಿವಿ, ಅದಕ್ಕೆ ಸ್ಕೂಲ್ ಬೇಡ. ಪ್ರೇಯರ್ ಗೆ ಅನುಮತಿ ಕೊಡಿ ಅಂತಾ ಅಪೀಲ್ ಹೋಗ್ತಾರೆ. ಇವರದ್ದೇ ಒರಿಜಿನಲ್ ಅಪೀಲ್. ಕೇವಲ ಸ್ಟೇಗೆ ಹೋಗ್ತಾರೆ, ಟೈಟಲ್ ಗಾಗಿ ಅಲ್ಲ. ಆಗ ಅದು ಕಾರ್ಪೋರೇಶನ್ ಪರ ಆಗುತ್ತೆ. ಆದಾದ ಬಳಿಕ 30/03/ 1956 ರಲ್ಲಿ ಅವರ ಅಪೀಲ್ ವಜಾ ಆಗುತ್ತದೆ. ಸ್ಕೂಲ್ ಕಟ್ಟಬೇಕು ಅನ್ನೋ ಮನವಿಯನ್ನು ನ್ಯಾಯಲಯ ಎತ್ತಿಹಿಡಿಯುತ್ತೆ. ಅದಾದ ಮೇಲೂ ಸಿವಿಲ್ ಕೋರ್ಟ್ ಗೆ ಹೋಗ್ತಾರೆ. 1881 ರಲ್ಲಿ ಇದು ಖರಾಬ್ ಜಮೀನು ಎಂದು, 1974 ರಲ್ಲಿ ಸಿಟಿ ಸರ್ವೆಯಲ್ಲೂ ಅಳತೆ ಮಾಡಿ ಒಂದು ನಂಬರ್ ಕೊಡ್ತಾರೆ. ಈ ಜಾಗದಲ್ಲಿ ಒಂದು ಸಣ್ಣ ಹಾಲಿನ ಬೂತ್ ಇರುತ್ತೆ. 1935 ಅಂತಾ ಗ್ರೌಂಡ್ ಗೆ ನಂಬರ್ ಕೊಡ್ತಾರೆ. 1236 ಅಂತಾ ಹಾಲಿನ ಬೂತ್ ಗೆ ನಂಬರ್ ಕೊಡ್ತಾರೆ. ಮೈಸೂರು ಸರ್ಕಾರ ಅನುಭವದ ಹಕ್ಕನ್ನ ಆಟದ ಮೈದಾನ ಅಂತಾ ತೋರಿಸುತ್ತಾರೆ. ಅನುಭವಿಸುವ ಹಕ್ಕನ್ನ ಪಾಲಿಕೆಗೆ ಕೊಡ್ತಾರೆ. 1976 ರಲ್ಲಿ ಆಟದ ಮೈದಾನ ಅಂತಾ ನೀಡಲಾಗುತ್ತೆ. ಪಾಲಿಕೆ ಪರ ಆದ ಬಳಿಕ ಅವರು ಸಿವಿಲ್ ಕೋರ್ಟ್ ಗೆ ಅಪೀಲ್ ಹೋಗ್ತಾರೆ. ಸಿವಿಲ್ ಕೋರ್ಟ್ ನಲ್ಲಿ ಸ್ಕೂಲ್ ಕಟ್ಟದಂತೆ ಸ್ಟೇ ಕೊಡ್ತಾರೆ. ಆಗ ಅವರಿಗೆ ಪ್ರಾರ್ಥನೆ ಮಾಡಲು ಅನುಮತಿ ಕೊಡ್ತಾರೆ ಎಂದು ಸಾದ್ಯಂತವಾಗಿ ಪ್ರಕರಣದ ಕಾಲಘಟ್ಟವನ್ನು ಸಚಿವ ಅಶೋಕ್ ಇಂಚಿಂಚು ಬಿಚ್ಚಿಟ್ಟಿದ್ದಾರೆ.
ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ವಿರುದ್ಧ ದೂರು
ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ವಿರುದ್ಧ ಬೆಂಗಳೂರಿನ ಚಾಮರಾಜಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಿಸಲು ಬಿಡಲ್ಲ ಎಂದಿದ್ದ ಜಮೀರ್ ವಿರುದ್ಧ ಶ್ರೀರಾಮ ಸೇನೆ ಬೆಂಗಳೂರು ಘಟಕ ದೂರು ನೀಡಿತ್ತು.
ಗಣೇಶ ಉತ್ಸವ ಆಚರಣೆಗೂ ಬಿಡಲ್ಲ ಎಂದಿದ್ದ ಶಾಸಕ ಜಮೀರ್ ಹೇಳಿಕೆ ಖಂಡಿಸಿ ಪೊಲೀಸ್ ಆಯುಕ್ತರಿಗೂ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, ಶಾಸಕ ಜಮೀರ್ ವಿರುದ್ಧ ಕ್ರಮ ಕೈಗೊಳ್ಳುವಂಗತೆ ಶ್ರೀರಾಮಸೇನೆ ಆಗ್ರಹಿಸಿದೆ.
Published On - 2:11 pm, Thu, 11 August 22