ಕೊರೊನಾ ನಿಯಂತ್ರಿಸಲು ಸರ್ಕಾರಕ್ಕೆ ಹಣ ಬೇಕು, ಅದಕ್ಕೇ ಪೆಟ್ರೋಲ್ ಬೆಲೆ ಹೆಚ್ಚಳವಾಗ್ತಿದೆ- ಉಮೇಶ್ ಕತ್ತಿ ಹೊಸ ವ್ಯಾಖ್ಯಾನ

| Updated By: ಸಾಧು ಶ್ರೀನಾಥ್​

Updated on: Oct 20, 2021 | 9:14 AM

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ವಿತ್ತ ಸಚಿವರು ಚರ್ಚೆ ಮಾಡಿದ್ದಾರೆ. ದೀಪಾವಳಿ ಹಬ್ಬದೊಳಗೆ ತೈಲ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಬೆಳಗಾವಿಯಲ್ಲಿ ಆಹಾರ ಸಚಿವ ಉಮೇಶ್ ಕತ್ತಿ ಆಶಾಭಾವ ವ್ಯಕ್ತಪಡಿಸಿದರು.

ಕೊರೊನಾ ನಿಯಂತ್ರಿಸಲು ಸರ್ಕಾರಕ್ಕೆ ಹಣ ಬೇಕು, ಅದಕ್ಕೇ ಪೆಟ್ರೋಲ್ ಬೆಲೆ ಹೆಚ್ಚಳವಾಗ್ತಿದೆ- ಉಮೇಶ್ ಕತ್ತಿ ಹೊಸ ವ್ಯಾಖ್ಯಾನ
ಉಮೇಶ್ ಕತ್ತಿ
Follow us on

ಬೆಳಗಾವಿ: ಮಹಾಮಾರಿ ಕೊವಿಡ್ ನಿಯಂತ್ರಣ ಮಾಡಲು ಸರ್ಕಾರಕ್ಕೆ ಹಣ ಬೇಕಾಗಿದೆ. ಹೀಗಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದೆ ಎಂದು ರಾಜ್ಯ ಆಹಾರ ಸಚಿವ ಉಮೇಶ್ ಕತ್ತಿ ಏರುತ್ತಿರುವ ಬೆಲೆಗಳ ಬಗ್ಗೆ ಹೊಸ ವ್ಯಾಖ್ಯಾನ ನೀಡಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವ ಸಂಬಂಧ ಚರ್ಚೆಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ವಿತ್ತ ಸಚಿವರು ಚರ್ಚೆ ಮಾಡಿದ್ದಾರೆ. ದೀಪಾವಳಿ ಹಬ್ಬದೊಳಗೆ ತೈಲ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಬೆಳಗಾವಿಯಲ್ಲಿ ಆಹಾರ ಸಚಿವ ಉಮೇಶ್ ಕತ್ತಿ ಆಶಾಭಾವ ವ್ಯಕ್ತಪಡಿಸಿದರು.

ದೇಶದಲ್ಲಿ ‌ತೈಲಬೆಲೆ ಹೆಚ್ಚಳ ವಿಚಾರ ಸಚಿವ ಕತ್ತಿ ಪ್ರತಿಕ್ರಿಯೆ ನೀಡಿದ್ದು, ಕೊವಿಡ್ ಹಿನ್ನೆಲೆಯಲ್ಲಿ ದೇಶದಲ್ಲಿ ತೈಲ ಬೆಲೆ ಹೆಚ್ಚಳವಾಗಿದೆ. ಶೀಘ್ರವೇ ತೈಲ ಬೆಲೆ ಇಳಿಮುಖವಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೇ ಕಚ್ಚಾ ತೈಲಬೆಲೆ ಹೆಚ್ಚಳವಾಗಿದೆ‌. ರಾಜ್ಯ-ಕೇಂದ್ರ ಸರ್ಕಾರ ಕೂಡ ತೈಲದ ಮೇಲಿನ ಸುಂಕವನ್ನು ಹೆಚ್ಚಿಸಿವೆ. ಅಷ್ಟಕ್ಕೂ ಕೊವಿಡ್ ಸಮಯದಲ್ಲಿ ಸರ್ಕಾರಕ್ಕೆ ಹಣ ಬೇಡವೇ? ಕೊವಿಡ್ ಕಡಿಮೆ ಮಾಡಲು ಸರ್ಕಾರಕ್ಕೆ ಖರ್ಚಿಗೆ ಹಣ ಬೇಕಿತ್ತು ಅದಕ್ಕೆ ಏರಿಕೆ ಮಾಡಿದ್ದೇವೆ ಎಂದು ಸಮಜಾಯಿಷಿ ಹೇಳಿದ್ದಾರೆ.

‘ಹೆಬ್ಬೆಟ್​ ಗಿರಾಕಿ ಮೋದಿಯಿಂದ ದೇಶ ನಲುಗುತ್ತಿದೆ’ ಎಂಬ ಕಾಂಗ್ರೆಸ್ ಟ್ವೀಟ್‌ಗೆ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯಿಸಿದ್ದು ಪ್ರಧಾನಿ ಮೋದಿ ಜನಪರ ಆಡಳಿತವನ್ನು ಕೊಡುತ್ತಿದ್ದಾರೆ. ಮೋದಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ಮಾಡಲು ಕೆಲಸವಿಲ್ಲದೆ ಇಂತಹ ಟ್ವೀಟ್ ಮಾಡಿದೆ ಎಂದು ಕಾಂಗ್ರೆಸ್ ಟ್ವೀಟ್‌ಗೆ ಸಚಿವ ಉಮೇಶ್ ಕತ್ತಿ ಆಕ್ರೋಶ ವ್ಯಕ್ತಪಡಿಸಿದರು.

Petrol, Diesel ದರ ಏರಿಕೆ ಬಗ್ಗೆ ಉಮೇಶ್​ ಕತ್ತಿ ಏನಂದ್ರು ಗೊತ್ತಾ?| UmeshKatti |Tv9kannada

ಇದನ್ನೂ ಓದಿ:
ನಾನು ಕೂಡ ಮುಖ್ಯಮಂತ್ರಿ ಆಗಬಹುದು, ಇದೇ ಅವಧಿಯಲ್ಲೇ ಸಿಎಂ ಆಗ್ತೀನಿ: ಸಚಿವ ಉಮೇಶ್ ಕತ್ತಿ

(Government wants funds for covid control as such petrol prices increased minister umesh katti in belagavi)

Published On - 8:41 am, Wed, 20 October 21