ನಾನು ಕೂಡ ಮುಖ್ಯಮಂತ್ರಿ ಆಗಬಹುದು, ಇದೇ ಅವಧಿಯಲ್ಲೇ ಸಿಎಂ ಆಗ್ತೀನಿ: ಸಚಿವ ಉಮೇಶ್ ಕತ್ತಿ
ಜೀವಂತ ಇದ್ದರೇ ಇದೇ ಅವಧಿಯಲ್ಲಿ, ಸತ್ತರೇ ಮುಂದಿನ ಅವಧಿಯಲ್ಲಿ ಸಿಎಂ ಆಗುವೆ. ಸತ್ತರೆ ನನ್ನ ಕಡೆಯಿಂದ ಏನೂ ಮಾಡೋಕೆ ಆಗಲ್ಲವೆಂದು ಗಹಿಗಹಿಸಿ ನಕ್ಕಿ ಸ್ಫೋಟಕ ಹೇಳಿಕೆ ನಡುವೆ ಸಚಿವ ಉಮೇಶ್ ಕತ್ತಿ ಹಾಸ್ಯ ಮಾಡಿದ್ದಾರೆ. ನಗು ನಗುತ್ತಲೇ ಸಿಎಂ ಆಗೋ ಆಸೆ ತೇಲಿಬಿಟ್ಟಿದ್ದಾರೆ.
ಬಾಗಲಕೋಟೆ: ಕೇಸರಿ ಮನೆಯಲ್ಲಿ ಖಾತೆ ಕ್ಯಾತೆ ನಡುವೆ ಕತ್ತಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬರುವ ದಿನಗಳಲ್ಲಿ ನಾನು ಕೂಡ ಮುಖ್ಯಮಂತ್ರಿ ಆಗಬಹುದು. ಇದೇ ಅವಧಿಯಲ್ಲೇ ಸಿಎಂ ಆಗ್ತೀನಿ ಎಂದು ಆಹಾರ ಸಚಿವ ಉಮೇಶ್ ಕತ್ತಿ(Umesh Katti) ಬಾಗಲಕೋಟೆಯಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಜೀವಂತ ಇದ್ದರೇ ಇದೇ ಅವಧಿಯಲ್ಲಿ, ಸತ್ತರೇ ಮುಂದಿನ ಅವಧಿಯಲ್ಲಿ ಸಿಎಂ ಆಗುವೆ. ಸತ್ತರೆ ನನ್ನ ಕಡೆಯಿಂದ ಏನೂ ಮಾಡೋಕೆ ಆಗಲ್ಲವೆಂದು ಗಹಿಗಹಿಸಿ ನಕ್ಕಿ ಸ್ಫೋಟಕ ಹೇಳಿಕೆ ನಡುವೆ ಹಾಸ್ಯ ಮಾಡಿದ್ದಾರೆ. ನಗು ನಗುತ್ತಲೇ ಸಿಎಂ ಆಗೋ ಆಸೆ ತೇಲಿಬಿಟ್ಟಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಹಿನ್ನೆಲೆಯಲ್ಲಿ ಬಾಗಲಕೋಟೆಯ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಧ್ವಜಾರೋಹಣ ನೆರವೇರಿಸಿದರು.
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಷಣೆ ಮಾಡಿದ್ರು. ಕಾರ್ಯಕ್ರಮದಲ್ಲಿ ಬಾಗಲಕೋಟೆ ಶಾಸಕ ಡಾ.ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾ.ಡಾ.ಕೆ.ರಾಜೇಂದ್ರ, ಜಿ.ಪಂ.ಸಿಇಓ ಟಿ.ಭೂಬಾಲನದ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು, ಮುಖಂಡರು ಭಾಗಿಯಾಗಿದ್ದರು.
ಇದೇ ವೇಳೆ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಉಮೇಶ್ ಕತ್ತಿ ಸಿ.ಟಿ ರವಿಯವರು ಇಂದಿರಾ ಬದಲು ಅನ್ನಪೂರ್ಣೇಶ್ವರಿ ಹೆಸರಿಡಿ ಎಂದಿದ್ದಾರೆ. ಇದು ಯಾವ ಪಕ್ಷದ್ದಲ್ಲ, ಈ ಬಗ್ಗೆ ಜನರಲ್ಲಿ ಚರ್ಚೆಯಾಗಲಿ. ರಾಜ್ಯದ ಜನ ಚರ್ಚೆ ಮಾಡಿ, ಒಂದು ತೀರ್ಮಾನಕ್ಕೆ ಬರಲಿ. ಜನ ಏನು ತೀರ್ಮಾನ ತೆಗೆದುಕೊಳ್ತಾರೆ ಅದನ್ನು ಮಾಡೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: Martin: ಸ್ವಾತಂತ್ರ್ಯ ದಿನಾಚರಣೆಗೆ ಧ್ರುವ ಸರ್ಜಾ ಕೊಟ್ರು ಭರ್ಜರಿ ಗಿಫ್ಟ್; ಹೊಸ ಚಿತ್ರದ ಟೈಟಲ್, ಫಸ್ಟ್ ಲುಕ್ ರಿಲೀಸ್
Published On - 11:51 am, Sun, 15 August 21