ಪ್ರಸಕ್ತ ಶೈಕ್ಷಣಿಕ ವರ್ಷದ ಬೋಧನಾ ಶುಲ್ಕ ಮಾತ್ರ ತೆಗೆದುಕೊಳ್ಳಿ; ಬೇರೆ ಯಾವ ಬಾಬತ್ತಿನಲ್ಲೂ ಹಣ ಪಡೆಯಬೇಡಿ: ಸರ್ಕಾರದ ಖಡಕ್ ಆದೇಶ

|

Updated on: Apr 29, 2021 | 12:54 PM

2019-20ನೇ ಸಾಲಿನಲ್ಲಿ ಪಡೆದ ಬೋಧನಾ ಶುಲ್ಕದ ಶೇಕಡಾ 70ರಷ್ಟನ್ನು ಮಾತ್ರ ಪಡೆಯಲು ಷರತ್ತುಗಳೊಂದಿಗೆ ಅನುಮತಿ ನೀಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದ ಬೋಧನಾ ಶುಲ್ಕ ಮಾತ್ರ ತೆಗೆದುಕೊಳ್ಳಿ; ಬೇರೆ ಯಾವ ಬಾಬತ್ತಿನಲ್ಲೂ ಹಣ ಪಡೆಯಬೇಡಿ: ಸರ್ಕಾರದ ಖಡಕ್ ಆದೇಶ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: 2020-21ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯಿಸುವಂತೆ ವಿದ್ಯಾರ್ಥಿಗಳ ಬೋಧನಾ ಶುಲ್ಕ ಪಡೆಯಲು ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಸರ್ಕಾರದ ಅನುಮತಿ ನೀಡಿದೆ. 2019-20ನೇ ಸಾಲಿನಲ್ಲಿ ಪಡೆದ ಬೋಧನಾ ಶುಲ್ಕದ ಶೇಕಡಾ 70ರಷ್ಟನ್ನು ಮಾತ್ರ ಪಡೆಯಲು ಷರತ್ತುಗಳೊಂದಿಗೆ ಅನುಮತಿ ನೀಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಶಾಲಾ ಅಭಿವೃದ್ಧಿ ಶುಲ್ಕ, ಐಚ್ಛಿಕ ಶುಲ್ಕ ಸೇರಿದಂತೆ ಉಳಿದ ಯಾವುದೇ ಶುಲ್ಕಗಳನ್ನು ಪಡೆಯುವಂತಿಲ್ಲ. ಟ್ರಸ್ಟ್‌, ಸೊಸೈಟಿಗಳಿಗೆ ದೇಣಿಗೆ ಸ್ವೀಕರಿಸುವಂತಿಲ್ಲ. ಈಗಾಗಲೇ ಪೂರ್ಣ ಶುಲ್ಕ ಪಾವತಿಸಿದ್ದಲ್ಲಿ ಹೆಚ್ಚುವರಿ ಶುಲ್ಕ ಪೋಷಕರಿಗೆ ಹಿಂತಿರುಗಿಸಬೇಕು ಅಥವಾ 2021-22ನೇ ಸಾಲಿನ ಶುಲ್ಕಕ್ಕೆ ಹೊಂದಿಸಿಕೊಳ್ಳಬೇಕು. ಶುಲ್ಕ ಕಡಿಮೆ ಮಾಡಲು ಇಚ್ಛಿಸಿದರೆ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗೆ ಸ್ವಾತಂತ್ರ್ಯ ನೀಡಲಾಗಿದೆ. ಪೋಷಕರಿಗೆ 2 ಕಂತುಗಳಲ್ಲಿ ಪಾವತಿಗೆ ಅವಕಾಶ ಕಲ್ಪಿಸಬೇಕು ಎಂದು ಆದೇಶ ನೀಡಿದೆ.

ಬೋಧನಾ ಶುಲ್ಕ ಪಡೆಯಲು ಸರ್ಕಾರದ ಅನುಮತಿ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಆದೇಶವನ್ನು ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸ್ವಾಗತಿಸಿದ್ದಾರೆ. ಪೋಷಕರು ಕಳೆದ ವರ್ಷದ ಶುಲ್ಕವನ್ನೇ ಇನ್ನೂ ಪಾವತಿಸಿಲ್ಲ. ಶಿಕ್ಷಕರಿಗೆ ವೇತನವನ್ನು ನೀಡಲು ಆಗುತ್ತಿಲ್ಲ. ಖಾಸಗಿ ಶಾಲೆಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೇ.70ರಷ್ಟು ಶುಲ್ಕ ಪಡೆಯಲು ಅನುಮತಿ ಸಮಾಧಾನವಾಗಿದೆ ಎಂದು ಟಿವಿ9ಗೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ

ಇದನ್ನೂ ಓದಿ: ಶಾಲಾ ಫೀಸ್ ಕಡಿತ: ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಖಾಸಗಿ ಶಾಲೆಗಳ ಒಕ್ಕೂಟ ಸಿದ್ಧತೆ