ಚಿತ್ರದುರ್ಗದಲ್ಲಿ ಅಂಧ ಕಲಾವಿದನಿಂದ ಕೊರೊನಾ ಜಾಗೃತಿ
ಚಿತ್ರದುರ್ಗ ನಗರದ ಜಯದೇವ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ತಾತ್ಕಾಲಿಕ ತರಕಾರಿ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಬಗ್ಗೆ ಅಂಧ ಕಲಾವಿದರೊಬ್ಬರು ಜಾಗೃತಿ ಮೂಡಿಸುತ್ತಿದ್ದಾರೆ. ಅಂಧ ಕಲಾವಿದ ಹಾಡುತ್ತಿರುವುದು ಮನರಂಜನೆಗಾಗಿ ಅಲ್ಲ. ಹಣ ಸಂಗ್ರಹಿಸಲೂ ಅಲ್ಲ.
ಚಿತ್ರದುರ್ಗ: ಕಣ್ಣಿಗೆ ಕಾಣದ ಕೊರೊನಾ ಸೋಂಕು ಮನು ಕುಲವನ್ನು ತಲ್ಲಣಗೊಳಿಸಿದೆ. ಅನೇಕರು ಕೊರೊನಾ ದುರಂತವನ್ನು ಕಂಡೂ ಕಾಣದವರಂತೆ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ. ಈ ನಡುವೆ ಕಣ್ಣಿಲ್ಲದ ಅಂಧ ವ್ಯಕ್ತಿಯೊಬ್ಬ ಕೊರೊನಾ ಜಾಗೃತಿಯಲ್ಲಿ ತೊಡಗಿದ್ದಾರೆ. ಹೊರಗೆ ಬರಬೇಡ ಮನುಷ್ಯ ಇನ್ನು ಹದಿನಾಲ್ಕು ದಿವಸ ಎಂದು ಗೀತೆ ಹಾಡಿ ಜಾಗೃತಿ ಮೂಡಿಸುತ್ತಿದ್ದಾರೆ. ಕೈಮುಗಿದು ಕೇಳುವ ಸರ್ಕಾರ ನೀಡಿದ ಕೊರೊನಾ ನಿಯಮಗಳನ್ನು ಪಾಲಿಸಿ ಎಂದು ಹಾಡಿನಲ್ಲಿ ಮನವಿ ಮಾಡಿದ್ದಾರೆ.
ಚಿತ್ರದುರ್ಗ ನಗರದ ಜಯದೇವ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ತಾತ್ಕಾಲಿಕ ತರಕಾರಿ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಬಗ್ಗೆ ಅಂಧ ಕಲಾವಿದರೊಬ್ಬರು ಜಾಗೃತಿ ಮೂಡಿಸುತ್ತಿದ್ದಾರೆ. ಅಂಧ ಕಲಾವಿದ ಹಾಡುತ್ತಿರುವುದು ಮನರಂಜನೆಗಾಗಿ ಅಲ್ಲ. ಹಣ ಸಂಗ್ರಹಿಸಲೂ ಅಲ್ಲ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸರ್ಕಾರ 14 ದಿನದ ಕಠಿಣ ನಿಯಮ ಜಾರಿಗೊಳಿಸಿದ್ದು, ತಪ್ಪದೇ ಪಾಲಿಸಿ ಎಂದು ಕಳಕಳಿಯ ಮನವಿ ಮಾಡುತ್ತಿದ್ದಾರೆ. ಕಾರಣ ಕಳೆದ ವರ್ಷ ಇದೆ ಕೊರೊನಾ ವೈರಸ್ಗೆ ಗೆಳೆಯ ವಿರೇಶ ಎಂಬಾತ ಬಲಿ ಆಗಿದ್ದರು. ಹೀಗಾಗಿ ಮಾರಕ ಕೊರೊನಾಗೆ ಜನ ಬಲಿ ಆಗದಿರಲಿ ಎಂದು ಕೈಲಾದಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಅಂಧ ಕಲಾವಿದ ಸುಲೇಮಾನ್ ಹೇಳುತ್ತಿದ್ದಾರೆ.
ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಜಾಗೃತಿ ಹಾವೇರಿ ಮೂಲದ ಸುಲೇಮಾನ್ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ. ಜನ ಸಂದಣಿ ಸೇರುವ ತರಕಾರಿ ಮಾರುಕಟ್ಟೆ ಮತ್ತಿತರೆ ವೃತ್ತಗಳಲ್ಲಿ ಸೌಂಡ್ ಬಾಕ್ಸ್ ಮತ್ತು ಮೈಕ್ ಸಮೇತ ಬಂದು ಜಾಗೃತಿ ಗೀತೆ ಹಾಡುತ್ತಾರೆ. ಕೆಲವರು ಅಂಧ ಕಲಾವಿದನ ಮಾತಿಗೆ ಗೌರವಿಸಿ ಹಣವನ್ನೂ ನೀಡುತ್ತಾರೆ. ಇನ್ನೂ ಕೆಲವರು ಎಂದಿನಂತೆ ಡೋಂಟ್ ಕೇರ್ ಎಂಬಂತೆ ತಿರುಗುತ್ತಾರೆ. ಅಂಧ ವ್ಯಕ್ತಿಯ ಈ ಜಾಗೃತಿ ಕಾರ್ಯಕ್ರಮದಿಂದಲೂ ಜನ ಎಚ್ಚೆತ್ತುಕೊಳ್ಳಬೇಕಿದೆ. ಇಂಥವರನ್ನು ಜಿಲ್ಲಾಡಳಿತ ಕೊರೊನಾ ಜಾಗೃತಿ ರಾಯಭಾರಿಗಳನ್ನಾಗಿ ಬಳಸಿಕೊಳ್ಳಬೇಕೆಂಬುದು ಎಂಬುದು ಸ್ಥಳೀಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ
Oxygen Cylinder: ಕೊರೊನಾದಿಂದ ಕಂಗಾಲಾದ ಬೆಂಗಳೂರಿಗೆ ಉಚಿತ ಆಕ್ಸಿಜನ್ ನೀಡಲು ಮುಂದೆ ಬಂದ ಸುನೀಲ್ ಶೆಟ್ಟಿ
(blind man is raising awareness of Corona by saying the song at chitradurga)
Published On - 12:27 pm, Thu, 29 April 21