ಗೌರಿಹಬ್ಬದಂದು ಪುತ್ರ ನಿಖಿಲ್​ಗೆ ಭರ್ಜರಿ ಗಿಫ್ಟ್​ ನೀಡಿದ ಕುಮಾರಸ್ವಾಮಿ

|

Updated on: Sep 06, 2024 | 4:35 PM

ಹೆಚ್​​ಎಮ್​ಟಿ ವಾಚ್​....ಈ ಬ್ರ್ಯಾಂಡಿನ ವಾಚ್​ ಯಾರಿಗೆ ಗೊತ್ತಿಲ್ಲ ಹೇಳಿ. ಈ ಹಿಂದಿನ ಜಮಾನದಲ್ಲೂ ಭಾರೀ ಸದ್ದು ಮಾಡಿರುವ ಬ್ರ್ಯಾಂಡ್ ಇದು​. ಈ ಹಿಂದೆ ಹೊಸ ಮದುಮಗನ ಕೈಯಲ್ಲಿ ನೋಡಿದರೆ ಇದೇ ಹೆಚ್​ಎಮ್​ಟಿ ಗಡಿಯಾರ ಇರುತ್ತಿತ್ತು. ಆದ್ರೆ, ಕಾಲ ಬದಲಾದಂತೆ ಜನರು ಹೊಸ-ಹೊಸ ಶೈಲಿಯ ವಾಚ್​ಗಳ ಮೊರೆ ಹೋಗಿದ್ದಾರೆ. ಹೀಗಾಗಿ ಹೆಚ್​ಎಮ್​ಟಿ ಕೊಂಚ ತನ್ನ ಬ್ರ್ಯಾಂಡ್​ ಕಳೆದುಕೊಂಡಿದೆ. ಹೀಗಾಗಿ ಇದನ್ನು ಪುನಶ್ಚೇತನಗೊಳಿಸಲು ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಅದು ತಮ್ಮ ಪುತ್ರನಿಗೆ ಇದೇ ಹೆಚ್​​ಎಮ್​ಟಿ ವಾಚ್​ ಗಿಫ್ಟ್​ ಮಾಡುವ ಮೂಲಕ.

ಗೌರಿಹಬ್ಬದಂದು ಪುತ್ರ ನಿಖಿಲ್​ಗೆ ಭರ್ಜರಿ ಗಿಫ್ಟ್​ ನೀಡಿದ ಕುಮಾರಸ್ವಾಮಿ
ನಿಖಿಲ್​ಗೆ ಭರ್ಜರಿ ಗಿಫ್ಟ್​
Follow us on

ಬೆಂಗಳೂರು, (ಸೆಪ್ಟೆಂಬರ್ 06): ಎಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮೊದಲಿಗೆ ಇಂದು(ಸೆಪ್ಟೆಂಬರ್ 06) ಗೌರಿ ಪೂಜೆ ಮಾಡಲಾಗಿದ್ದು, ನಾಳೆ ಗಣೇಶನ ಸರದಿ. ಈ ಹಬ್ಬದ ಸಂಭ್ರಮದಲ್ಲಿ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್​ಗೆ ಹೆಚ್​ಎಮ್​ಟಿ ವಾಚ್​ ಗಿಫ್ಟ್ ನೀಡಿದ್ದಾರೆ. ಹೆಚ್‌ಎಮ್‌ಟಿ (HMT) ಸಂಸ್ಥೆಯನ್ನು ಪುನಶ್ಚೇತನಗೊಳಿಸಲು ಮುಂದಾಗಿರುವ ಕುಮಾರಸ್ವಾಮಿ, ಹೆಚ್‌ಎಮ್‌ಟಿ ವಾಚ್ ಖರೀದಿ ಮಾಡಿ ತಮ್ಮ ಪುತ್ರ ನಿಖಿಲ್​ ಕೈಗೆ ಕಟ್ಟಿದ್ದಾರೆ. ಈ ಸಂದರ್ಭದಲ್ಲಿ HMT ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ ಕೋಹ್ಲಿ ಇನ್ನಿತರೆ ಹಿರಿಯ ಅಧಿಕಾರಿಗಳು ಹಾಜರಿದ್ದರು. ಈ ಮೂಲಕ ಬ್ರ್ಯಾಂಡ್​ ಕ್ರಿಯೆಟ್​ ಮಾಡಲು ಮುಂದಾಗಿದ್ದಾರೆ.

ಇನ್ನು ತಮ್ಮ ತಂದೆ ಹೆಚ್​ಎಮ್​ಟಿ ವಾಚ್​ ಗಿಫ್ಟ್​ ಮಾಡಿರುವ ವಿಚಾರವನ್ನು ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಅಲ್ಲದೇ ಯುವ ಜನರು ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾದ HMT ಕೈಗಡಿಯಾರಗಳನ್ನೇ ಕಟ್ಟಬೇಕು ಎಂದು ಕರೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್‌ಎಮ್‌ಟಿ ವಾಚ್  ಕುರಿತು ಮಾಹಿತಿ ನೀಡಿದ ನಿಖಿಲ್, HMT ಕೈಗಡಿಯಾರ ಒಂದು ಕಾಲದಲ್ಲಿ ಭಾರತದ ಹೃದಯ ಬಡಿತವಾಗಿತ್ತು. ಎಲ್ಲರ ಪಾಲಿಗೂ ಅದು ನಿತ್ಯನಾಡಿಯಾಗಿತ್ತು. ನಮ್ಮ ತಲೆಮಾರಿನ ಯುವಜನರಿಗೆ HMT ವಾಚ್ ಎಂದರೆ ಅದೊಂದು ದಂತಕಥೆ. ನನ್ನ ಪೂಜ್ಯ ತಂದೆಯವರು ಹಾಗೂ ಕೇಂದ್ರ ಸರಕಾರದ ಭಾರೀ ಕೈಗಾರಿಕೆ, ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಗೌರಿಹಬ್ಬದ ದಿನವಾದ ಇಂದು HMT ಕೈಗಡಿಯಾರ ಖರೀದಿಸಿ ನನ್ನ ಕೈಗೆ ಕಟ್ಟಿದರು. ಈ ಸಂದರ್ಭದಲ್ಲಿ HMT ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಕೋಹ್ಲಿ ಇನ್ನಿತರೆ ಹಿರಿಯ ಅಧಿಕಾರಿಗಳು ಹಾಜರಿದ್ದರು ಎಂದು ಟ್ವೀಟ್ ಮಾಡಿದ್ದಾರೆ.


ಅಲ್ಲದೇ ಯುವ ಜನರು ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾದ HMT ಕೈಗಡಿಯಾರಗಳನ್ನೇ ಕಟ್ಟಬೇಕು ಎಂಬುದು ನನ್ನ ವಿನಂತಿ. ನಾನು HMT ಕೈಗಡಿಯಾರ ಕಟ್ಟಿದ್ದೇನೆ, ನೀವೂ ಕಟ್ಟಿ ಎಂದಿದ್ದಾರೆ.

ಕುಮಾರಸ್ವಾಮಿ ಅವರು ಜೂನ್​​ನಲ್ಲಿ ಹರ್ಯಾಣದ (Haryana) ಪಿಂಜೋರ್‌ನಲ್ಲಿರುವ ಹಿಂದೂಸ್ತಾನ್ ಮಷೀನ್ & ಟೂಲ್ಸ್ (HMT) ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಾರ್ಖಾನೆಯ ವಹಿವಾಟು, ಲಾಭ, ಸಾಲ, ಬಾಕಿ ಸೇರಿದಂತೆ ಹಣಕಾಸು ಸ್ಥಿತಿಗತಿಗಳ ಬಗ್ಗೆ ಅಂಕಿ ಅಂಶಗಳನ್ನು ಪಡೆದುಕೊಂಡರು. ಕಾರ್ಖಾನೆಯ ನೌಕರರ ಬಳಿ ಮಾತುಕತೆ, ಕಾರ್ಮಿಕರ ಯೂನಿಯನ್ ಮುಖಂಡರ ಜತೆ ಚರ್ಚೆ ಮಾಡಿದ್ದರು.

ಅಲ್ಲದೇ ಸಾರ್ವಜನಿಕ ಸ್ವಾಮ್ಯದ ಕಾರ್ಖಾನೆಯನ್ನು ಉಳಿಸಿ ಬೆಳೆಸುವ ಹೊಣೆ ಎಲ್ಲರ ಹೊಣೆ. ಎಲ್ಲರೂ ಬದ್ಧತೆ, ಕ್ಷಮತೆಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳು, ಕಾರ್ಮಿಕರಿಗೆ ಕಿವಿಮಾತು ಹೇಳಿದ್ದರು.