ಕೊಪ್ಪಳ ಜಿಲ್ಲಾಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಶವ ಬೆತ್ತಲೆ ಸ್ಥಿತಿಯಲ್ಲಿ ಪತ್ತೆ: ಆರೋಗ್ಯಧಿಕಾರಿ ಲಾಡ್ಜಿನಲ್ಲಿ ಸಾವು
ಕೊಪ್ಪಳದ ಕಾಳಿದಾಸನಗರದ ಮನೆಯೊಂದರಲ್ಲಿ ಜಿಲ್ಲಾಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ವ್ಯಕ್ತಿಯ ಶವ ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಕಿರಿಯ ಆರೋಗ್ಯ ವೀಕ್ಷಣಾಧಿಕಾರಿ ಲಾಡ್ಜ್ನಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.
ಕೊಪ್ಪಳ, ಸೆಪ್ಟೆಂಬರ್ 06: ಜಿಲ್ಲಾಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ಶ್ರೀಕಾಂತ(45) ಎಂಬುವವರ ಶವ (dead body) ಬೆತ್ತಲೆ ಸ್ಥಿತಿಯಲ್ಲಿ ವಾಸವಿದ್ದ ಮನೆಯಲ್ಲಿ ಪತ್ತೆ ಆಗಿರುವಂತಹ ಘಟನೆ ಕಾಳಿದಾಸನಗರದಲ್ಲಿ ನಡೆದಿದೆ. ಕಳೆದ 7 ವರ್ಷಗಳಿಂದ ಶ್ರೀಕಾಂತ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮದ್ಯ ವ್ಯಸನಿಯಾಗಿದ್ದರು ಎಂಬ ಮಾಹಿತಿಯಿದೆ. ಕಳೆದ 4 ದಿನಗಳಿಂದ ಬಾಡಿಗೆ ಮನೆಯ ಬಾಗಿಲು ತೆಗೆದಿರಲಿಲ್ಲ. ಅತಿಯಾಗಿ ಮದ್ಯ ಸೇವಿಸಿ ಮಲಗಿದ್ದಲ್ಲೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ದುರ್ವಾಸನೆ ಬರುತ್ತಿದ್ದರಿಂದ ಪೊಲೀಸರಿಗೆ ಸ್ಥಳೀಯರಿಂದ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಮನೆ ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಶ್ರೀಕಾಂತ ಕುಟುಂಬದ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆರೋಗ್ಯಧಿಕಾರಿ ಲಾಡ್ಜಿನಲ್ಲಿ ಸಾವು
ಉಡುಪಿ: ಲಾಡ್ಜಿನಲ್ಲಿ ಅನುಮಾನಸ್ಪದವಾಗಿ ಕಿರಿಯ ಆರೋಗ್ಯ ವೀಕ್ಷಣಾಧಿಕಾರಿ ಸಾವನ್ನಪ್ಪಿರುವಂತಹ ಘಟನೆ ಕುಂದಾಪುರ ಖಾಸಗಿ ಲಾಡ್ಜ್ನಲ್ಲಿ ನಡೆದಿದೆ. ಜಿಲ್ಲೆಯ ಕುಂದಾಪುರ ತಾಲೂಕು ಕೊರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಶಿವಮೊಗ್ಗ ಮೂಲದ ಪ್ರಶಾಂತ್ (37) ಮೃತ ವ್ಯಕ್ತಿ.
ಇದನ್ನೂ ಓದಿ: ಕಾನ್ಸ್ಟೇಬಲ್ ವಿರುದ್ಧದ ಲೈಂಗಿಕ ಕಿರುಕುಳ ಕೇಸ್ಗೆ ಬಿಗ್ ಟ್ವಿಸ್ಟ್: ಉಲ್ಟಾ ಹೊಡೆದ ಮಹಿಳೆ
ಮದ್ಯ ಸೇವನೆ ಚಟವಿದ್ದ ಪ್ರಶಾಂತಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಯಾಗಿತ್ತು. ಮಾನಸಿಕವಾಗಿ ನೊಂದಿರುದಾಗಿ ಸ್ನೇಹಿತರ ಬಳಿ ಪ್ರಶಾಂತ್ ತಿಳಿಸಿದ್ದರು. ಕುಂದಾಪುರ ಖಾಸಗಿ ಲಾಡ್ಜ್ ರೂಮ್ ಪಡೆದಿದ್ದು, ಮಲಗಿದ್ದ ರೀತಿಯಲ್ಲಿ ಶವ ಪತ್ತೆ ಆಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ವರದಕ್ಷಿಣೆ ಕಿರುಕುಳ ಆರೋಪ: ಎಂಟು ತಿಂಗಳ ಗರ್ಭಿಣಿ ಆತ್ಮಹತ್ಯೆ
ಮೈಸೂರು: ವರದಕ್ಷಿಣೆ ಕಿರುಕುಳ ಆರೋಪಕ್ಕೆ ಎಂಟು ತಿಂಗಳ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಗರದ ಕನಕಗಿರಿಯಲ್ಲಿ ನಡೆದಿದೆ. ಚೈತ್ರಾ ಅಲಿಯಾಸ್ ಚಿಕ್ಕದೇವಿ(23) ಆತ್ಮಹತ್ಯೆ ಮಾಡಿಕೊಂಡ ಗರ್ಭಿಣಿ. ಗಂಡ, ಮುತ್ತುರಾಜ್, ಅತ್ತೆ ಪದ್ಮ, ಚಿಕ್ಕತ್ತೆ ಮಂಜು ವಿರುದ್ಧ ಆರೋಪ ಕೇಳಿಬಂದಿದ್ದು, ಚೈತ್ರಾ ಪತಿ ಶರತ್ರಾಜ್ರನ್ನು ವಿದ್ಯಾರಣ್ಯಪುರಂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಗೆಳತಿಯನ್ನು ನೋಡಲು ಬೆಂಗಳೂರಿಗೆ ಬಂದಿದ್ದ ಹರಿಯಾಣದ ನಕ್ಸಲ್ ಅರೆಸ್ಟ್
2 ವರ್ಷಗಳ ಹಿಂದೆ ಕನಕಗಿರಿಯ ಶರತ್‌ರಾಜು ಜೊತೆ ವಿವಾಹವಾಗಿದ್ದು, ಕಿರುಕುಳ ತಾಳಲಾರದೆ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಾಲ್ವರ ವಿರುದ್ಧ ಚೈತ್ರಾ ಪೋಷಕರಿಂದ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.