ಕಾನ್ಸ್​​ಟೇಬಲ್​​ ವಿರುದ್ಧದ ಲೈಂಗಿಕ ಕಿರುಕುಳ ಕೇಸ್​ಗೆ ಬಿಗ್ ಟ್ವಿಸ್ಟ್​: ಉಲ್ಟಾ ಹೊಡೆದ ಮಹಿಳೆ

ಜನವರಿ 13 ರಂದು ಕಮಲಾಪೂರ ಪೊಲೀಸ್ ಕಾನ್ಸಟೇಬಲ್​ ಬಸವರಾಜ್ ವಿರುದ್ಧ ಪೂಜಾ ಎನ್ನುವ ಮಹಿಳೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಕಲಬುರಗಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ಕೂಡ ಸಲ್ಲಿಸಿದ್ದರು. ಬಳಿಕ ಬಸವರಾಜ್​ರನ್ನು ಅಮಾನತ್ತು ಮಾಡಲಾಗಿತ್ತು. ನಂತರ ಇದೇ ಮಹಿಳೆ ಪೂಜಾ ಕೋರ್ಟ್​ನಲ್ಲಿ ಈ ಪೊಲೀಸ್​ನಿಂದ ಲೈಂಗಿಕ ದೌರ್ಜನ್ಯ ಆಗಿಲ್ಲ ಎಂದು ಉಲ್ಟಾ ಹೊಡೆದಿದ್ದರು. ಹಾಗಾಗಿ ಕೇಸ್ ಖುಲಾಸೆಯಾಗಿತ್ತು‌.

ಕಾನ್ಸ್​​ಟೇಬಲ್​​ ವಿರುದ್ಧದ ಲೈಂಗಿಕ ಕಿರುಕುಳ ಕೇಸ್​ಗೆ ಬಿಗ್ ಟ್ವಿಸ್ಟ್​: ಉಲ್ಟಾ ಹೊಡೆದ ಮಹಿಳೆ
ಕಾನ್ಸ್​​ಟೇಬಲ್​​ ವಿರುದ್ಧದ ಲೈಂಗಿಕ ಕಿರುಕುಳ ಕೇಸ್​ಗೆ ಬಿಗ್ ಟ್ವಿಸ್ಟ್​: ಉಲ್ಟಾ ಹೊಡೆದ ಮಹಿಳೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 06, 2024 | 3:43 PM

ಕಲಬುರಗಿ, ಸೆಪ್ಟೆಂಬರ್​ 06: ಪೊಲೀಸ್ ಕಾನ್ಸಟೇಬಲ್​ನಿಂದ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ (sexual harassment) ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಆತ ನನಗೆ ಕಿರುಕುಳ ನೀಡಿಲ್ಲ. ನಾನು ಮಾಡಿದ್ದು ಹನಿಟ್ರ್ಯಾಪ್ ಎಂದ ದೂರದಾರ ಮಹಿಳೆ ಇದೀಗ ಯೂ ಟರ್ನ್‌ ಹೊಡೆದಿದ್ದಾರೆ. ಜೊತೆಗೆ ನನ್ನಿಂದ ಪೊಲೀಸ್ ಪೇದೆಗೆ ಹನಿಟ್ರ್ಯಾಪ್ ಮಾಡಿಸಲಾಗಿದ್ದು, ದಲಿತ ಸಂಘಟನೆ ಪ್ರಮುಖರೇ ಇದರ ಸೂತ್ರದಾರರು ಎಂದು ಗಂಭೀರ ಆರೋಪ ಕೂಡ ಮಾಡಿದ್ದಾರೆ.

ಉಲ್ಟಾ ಹೊಡೆದ ಮಹಿಳೆ

ಜನವರಿ 13 ರಂದು ಕಮಲಾಪೂರ ಪೊಲೀಸ್ ಕಾನ್ಸಟೇಬಲ್​ ಬಸವರಾಜ್ ವಿರುದ್ಧ ಪೂಜಾ ಎನ್ನುವ ಮಹಿಳೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಕಲಬುರಗಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ಕೂಡ ಸಲ್ಲಿಸಿದ್ದರು. ಬಳಿಕ ಬಸವರಾಜ್​ರನ್ನು ಅಮಾನತ್ತು ಮಾಡಲಾಗಿತ್ತು. ನಂತರ ಇದೇ ಮಹಿಳೆ ಪೂಜಾ ಕೋರ್ಟ್​ನಲ್ಲಿ ಈ ಪೊಲೀಸ್​ನಿಂದ ಲೈಂಗಿಕ ದೌರ್ಜನ್ಯ ಆಗಿಲ್ಲ ಎಂದು ಉಲ್ಟಾ ಹೊಡೆದಿದ್ದರು. ಹಾಗಾಗಿ ಕೇಸ್ ಖುಲಾಸೆಯಾಗಿತ್ತು‌.

ಇದನ್ನೂ ಓದಿ: ಪೊಲೀಸ್ ಕಾನ್ಸ್ಟೆಬಲ್ ವಿರುದ್ಧವೇ ಎಫ್‌ಐಆರ್ ದಾಖಲಿಸಿದ ಪತ್ನಿ; ಯಾಕೆ ಗೊತ್ತಾ?

ನಾನು ಕೋರ್ಟ್​ನಲ್ಲಿ ಉಲ್ಟಾ ಹೊಡೆಯಲು ಕೆಲವುರು ನನ್ನ ಬ್ಲ್ಯಾಕ್ ಮೇಲ್ ಮಾಡಿದ್ದರು‌‌. ದಲಿತ ಸೇನೆಯ ಮುಖಂಡರಾದ ರಾಜು ಲೇಂಗಟಿ, ಶ್ರೀಕಾಂತ ರೆಡ್ಡಿ ಇವರೇ ಈ ಹನಿಟ್ರ್ಯಾಪ್ ಸೂತ್ರದಾರರು ಎಂದು ಪೂಜಾ‌ ಆರೋಪಿಸಿದ್ದಾರೆ. ನನ್ನಿಂದ ಹನಿಟ್ರ್ಯಾಪ್ ಮಾಡಿಸಿ ಬ್ಲ್ಯಾಕ್​ಮೇಲ್ ಮಾಡಿ 7 ಲಕ್ಷ ರೂ. ವಸೂಲಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಹನಿಟ್ರ್ಯಾಪ್​​ 

ನನ್ನ ಕೌಟುಂಬಿಕ ಕಲಹಕ್ಕಾಗಿ ನಾನು ನನ್ನ ಗಂಡನ ವಿರುದ್ಧ ಕಳೆದ ಜನವರಿಯಲ್ಲಿ ಕಮಲಾಪೂರ ಠಾಣೆ ಮೆಟ್ಟಿಲು ಹತ್ತಿದ್ದೆ. ಇದೇ ವೇಳೆ ಯಾರದೋ ಮಾತು ಕೇಳಿ ದಲಿತ ಸೇನೆಯವರನ್ನು ನ್ಯಾಯಕಾಗಿ ಭೇಟಿ ಮಾಡಿದ್ದೆ. ನಿನಗೆ ನಿನ್ನ ಗಂಡನಿಂದ ಬರಬೇಕಾದ ಆಸ್ತಿ ಕೊಡಿಸುತ್ತೇವೆ. ಆದರೆ ನಾವು ಹೇಳಿದಂತೆ ಕೇಳು ಎಂದು ನನ್ನಿಂದ ಹನಿಟ್ರ್ಯಾಪ್ ಮಾಡಿಸಿದ್ದಾರೆ. ಅವರ ಮಾತು ನಂಬಿ ನಾನೇ ಪೊಲೀಸ್ ಕಾನ್ಸಟೇಬಲ್​ ಜೊತೆ ಲವ್ವರ್ ಥರ ಮಾತನಾಡಿ ಲಾಡ್ಜ್​​ಗೆ ಕರೆದುಕೊಂಡು ಹೋದೆ ಎಂದಿದ್ದಾರೆ.

ನಾವು ಲಾಡ್ಜ್​ನ ರೂಮ್ ಪ್ರವೇಶಿಸಿದ ಕೆಲವೇ ನಿಮಿಷಗಳಲ್ಲಿ ಮೊದಲೇ ಮಾಡಿಕೊಂಡ ಪ್ಲ್ಯಾನ್​ನಂತೆ ನಾಲ್ವರು ಯುವಕರು ದಾಳಿ ಮಾಡಿದರು. ನಾನು ಇದರಿಂದ ಹೆದರಿದಂತೆ ನಟಿಸಿದೆ. ಆದರೆ ಆ ಕಾನ್ಸಟೇಬಲ್ ಬಸವರಾಜ್ ನಿಜವಾಗಿಯೂ ಹೆದರಿ ಬಿಟ್ಟಿದ್ದರು. ಅಲ್ಲದೇ ದಲಿತ ಸೇನೆ ಮುಖಂಡರ ಅಣತಿಯಂತೆ ನಾನು ಕಲಬುರಗಿಯ ಮಹಿಳಾ ಠಾಣೆಯಲ್ಲಿ ದೂರು ಸಹ ಕೊಟ್ಟೆ. ಮುಂದೆ ಆ ಕಾನ್ಸಟೇಬಲ್​ನಿಂದ 7 ಲಕ್ಷ ರೂ. ಪಡೆದು ನನ್ನಿಂದ ಕೋರ್ಟ್​ನಲ್ಲಿ ನನಗೆನೂ ಗೊತ್ತೇ ಇಲ್ಲ ಅಂತ ಹೇಳಿಸಿ ಬಿಟ್ಟರು.

ಇದನ್ನೂ ಓದಿ: ಕಲಬುರಗಿ ಜಿಮ್ಸ್​ ಅವ್ಯವಸ್ಥೆ; ಚಿಕಿತ್ಸೆಗಾಗಿ ಡಯಾಲಿಸಿಸ್ ರೋಗಿಗಳ ಪರದಾಟ!

ನಂತರ ನನಗೆ ಇದೇ ರೀತಿ ಬೇರೆ ಬೇರೆ ಹನಿಟ್ರ್ಯಾಪ್​ಗೆ ನನ್ನನ್ನು ಬಳಸಿಕೊಳ್ಳಲು ಹಣಮಂತ ಯಳಸಂಗಿ ಗ್ಯಾಂಗ್ ಪ್ರಯತ್ನ ಪಟ್ಟಿದ್ದಾರೆ. ದಲಿತ ಸೇನೆ ನನಗೆ ಕಿರುಕುಳ ನೀಡಿದ್ದಲ್ಲದೇ ನನ್ನ ಮೇಲೆ ಸ್ವತಃ ಇವರೇ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಪೂಜಾ ಆರೋಪಿಸಿದ್ದು, ಪೊಲೀಸರು ದೂರು ಸ್ವಿಕರಿಸುತ್ತಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.