ಗೆಳತಿಯನ್ನು ನೋಡಲು ಬೆಂಗಳೂರಿಗೆ ಬಂದಿದ್ದ ಹರಿಯಾಣದ ನಕ್ಸಲ್​​ ಅರೆಸ್ಟ್​

ಗೆಳತಿಯನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದ ಹರಿಯಾಣ ಮೂಲದ ನಕ್ಸಲ್ ಅನಿರುದ್ದ್​​ನನ್ನು ಕೇಂದ್ರ ಅಪರಾಧ ವಿಭಾಗದ ಎಟಿಸಿ ತಂಡ ಬಂಧಿಸಿದೆ. ಆರೋಪಿಯ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಬಂಧಿತ ನಕ್ಸಲ್ ಅನಿರುದ್ದ್​ನನ್ನು ಕಸ್ಟಡಿಗೆ ಪಡೆದು ಎಟಿಸಿ ತಂಡ ಹೆಚ್ಚಿನ ವಿಚಾರಣೆ ನಡೆಸುತ್ತಿದೆ.

ಗೆಳತಿಯನ್ನು ನೋಡಲು ಬೆಂಗಳೂರಿಗೆ ಬಂದಿದ್ದ ಹರಿಯಾಣದ ನಕ್ಸಲ್​​ ಅರೆಸ್ಟ್​
ಸಿಸಿಬಿ, ಅನಿರುದ್ದ್
Follow us
ವಿವೇಕ ಬಿರಾದಾರ
|

Updated on:Sep 06, 2024 | 2:27 PM

ಬೆಂಗಳೂರು, ಸೆಪ್ಟೆಂಬರ್​ 06: ಗೆಳತಿಯನ್ನು ಭೇಟಿ ಮಾಡಲು ಬೆಂಗಳೂರಿಗೆ (Bengaluru) ಬಂದಿದ್ದ ನಕ್ಸಲ್​ನನ್ನು (Naxal) ಕೇಂದ್ರ ಅಪರಾಧ ವಿಭಾಗ (CCB)ದ ಎಟಿಸಿ ತಂಡ ಬಂಧಿಸಿದೆ. ಹರಿಯಾಣ ಮೂಲದ ಅನಿರುದ್ದ್ ಬಂಧಿತ ನಕ್ಸಲ್. ಅನಿರುದ್ದ್ ನಿಷೇಧಿತ ಸಿಪಿಐ(ಎಂ) ನಕ್ಸಲ್ ಸಂಘಟನೆಯಲ್ಲಿ ಇದ್ದನು. ಅನಿರುದ್ದ್ ನಿಷೇಧಿತ ಬರಹಗಳನ್ನ ಬರೆದು ಪೋಸ್ಟ್​ ಮಾಡುತ್ತಿದ್ದನು. ಈತನಿಗಾಗಿ ಪೊಲೀಸ್​ ಮತ್ತು ನಕ್ಸಲ್ ನಿಗ್ರಹ ತಂಡ ಬಲೆ ಬೀಸಿತ್ತು. ಆದರೆ, ಅನಿರುದ್ದ್​ ಬಲೆಗೆ ಬಿದ್ದಿರಲಿಲ್ಲ. ಘಟನೆ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಿರುದ್ದ್ ರಾಜನ್ ಗೆಳತಿಯನ್ನು ನೋಡಲು 3-4 ದಿನದ ಹಿಂದೆ ಬೆಂಗಳೂರಿಗೆ ಬಂದಿದ್ದನು. ಅನಿರುದ್ದ್ ರಾಜನ್ ಗುರುವಾರ ಬೆಳಗ್ಗೆ 8 ಗಂಟೆಗೆ ಚೆನ್ನೈಗೆ ಹೋಗಲು ಕೆಎಸ್ಆರ್​ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದನು. ಈ ವೇಳೆ ಆತನ ಮೇಲೆ ನಿಗಾ ಇಟ್ಟಿದ್ದ ಎಟಿಸಿ ತಂಡ ಬಂಧಿಸಿದೆ. ತನಿಖೆ ವೇಳೆ, ಅನಿರುದ್ದ್ ರಾಜನ್ ಹಣ ಸಂಗ್ರಹ, ಗುಪ್ತ ಸಭೆಗಳನ್ನು ನಡೆಸಿರುವುದು ಪತ್ತೆಯಾಗಿದೆ. ನಕ್ಸಲ್ ಅನಿರುದ್ದ್,  ವಿಕಾಸ್ ಘಾಡ್ಗೆ ಎಂಬ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಹೊಂದಿದ್ದಾನೆ.

ಇದನ್ನೂ ಓದಿ: ದಾಳಿಗೂ ಮುನ್ನ ಪರಪ್ಪನ ಅಗ್ರಹಾರದ ಮುಂದೆ ಅರ್ಧಗಂಟೆ ಕಾಯ್ದಿದ್ದ ಸಿಸಿಬಿ: ತನಿಖೆಗೆ ಆದೇಶ

ಆರೋಪಿ ಅನಿರುದ್ದ್ ರಾಜನ್​ನಿಂದ 2 ಬ್ಯಾಗ್​, ಪೆನ್​ಡ್ರೈವ್​ಗಳು, ಟ್ಯಾಬ್ ವಶಕ್ಕೆ ಪಡೆಯಲಾಗಿದೆ. ಅನಿರುದ್ದ ರಾಜನ್​ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

​ಎಡಪಂಥಿಯ ಸಂಘಟನೆಗೆ ಸೇರಿದ ಅನಿರುದ್ದ್ ಬಂಧನ: ದಯಾನಂದ್​

ಪ್ರಕರಣ ಸಂಬಂಧ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾತನಾಡಿ, ಹರಿಯಾಣ ಮೂಲದ ಅನಿರುದ್ದ ರಾಜನ್​ ಖಾಸಗಿ ಕೆಲಸಕ್ಕೆ ಬೆಂಗಳೂರಿಗೆ ಬಂದಿದ್ದನು. ಈತ ನಿಷೇಧಿತ ಎಡಪಂಥಿಯ ಸಂಘಟನೆಯ ಸಂಪರ್ಕ ಹೊಂದಿದ್ದಾನೆ. ಆ ಸಂಘಟನೆಗಳ ಜೊತೆಗೆ ಈತ ಕಾರ್ಯ ನಿರ್ವಹಿಸುತ್ತಿದ್ದನು. ಸದ್ಯ ಆತನನ್ನ ಬಂಧಿಸಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನ 15 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದೇವೆ.‌ ಸದ್ಯ ಆತನ ಕಾರ್ಯ ಚಟುವಟಿಕೆ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:58 pm, Fri, 6 September 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ