ಪೊಲೀಸ್ ಕಾನ್ಸ್ಟೆಬಲ್ ವಿರುದ್ಧವೇ ಎಫ್‌ಐಆರ್ ದಾಖಲಿಸಿದ ಪತ್ನಿ; ಯಾಕೆ ಗೊತ್ತಾ?

ಆತ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ. ಠಾಣೆಗೆ ಬರುವಂತಹ ಜನರ ಕಷ್ಟ ಕಾರ್ಪಣ್ಯಗಳನ್ನ ಆಲಿಸುವುದರ ಜೊತೆಗೆ ಸಮಾಜದಲ್ಲಿ ಶಾಂತಿ ಕದಡದಂತೆ ನೋಡಿಕೊಳ್ಳಬೇಕು. ಆದರೆ, ಆ ಪೊಲೀಸಪ್ಪನ ವಿರುದ್ಧವೇ ಪತ್ನಿ ಠಾಣೆ ಮೆಟ್ಟಿಲೆರಿದ್ದಾಳೆ. ಅಷ್ಟಕ್ಕೂ ಇಲ್ಲಿ ಆಗಿದ್ದಾದರು ಏನು ಅಂತೀರಾ? ಈ ಸ್ಟೋರಿ ಓದಿ.

ಪೊಲೀಸ್ ಕಾನ್ಸ್ಟೆಬಲ್ ವಿರುದ್ಧವೇ ಎಫ್‌ಐಆರ್ ದಾಖಲಿಸಿದ ಪತ್ನಿ; ಯಾಕೆ ಗೊತ್ತಾ?
ಪೊಲೀಸ್ ಕಾನ್ಸ್ಟೆಬಲ್ ವಿರುದ್ಧವೇ ಎಫ್‌ಐಆರ್ ದಾಖಲಿಸಿದ ಪತ್ನಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 03, 2024 | 6:18 PM

ಕಲಬುರಗಿ. ಆ.03: ಸಾಮಾನ್ಯವಾಗಿ ಜನರಿಗೆ ತೊಂದರೆಯಾದಾಗ ಪೊಲೀಸ್ ಠಾಣೆ ಮೆಟ್ಟೀಲೇರುವುದು ಸಹಜ. ಆದರೆ, ಇಲ್ಲಿ ಪೊಲೀಸಪ್ಪನ ವಿರುದ್ಧವೇ ಎಫ್‌ಐಆರ್(FIR) ದಾಖಲಾಗಿದೆ. ಹೌದು, ಪೊಲೀಸ್ ಕಾನ್ಸ್ಟೆಬಲ್ ವಿರುದ್ಧ ಆತನ ಪತ್ನಿಯೇ ವರದಕ್ಷಿಣೆ, ಹಲ್ಲೆ, ಮಾನಸಿಕ ಹಿಂಸೆ ನೀಡಿದ್ದಾರೆಂದು ಕಲಬುರಗಿ(Kalaburagi) ಜಿಲ್ಲೆಯ ಯಡ್ರಾಮಿ ಪೊಲೀಸ್‌ಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಸದ್ಯ ಪೇದೆ ರೇವಣಸಿದ್ದಪ್ಪ ವಿಜಯಪುರ ಜಿಲ್ಲೆಯ ಕಲಕೇರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ‘ನನ್ನ ಪತಿ ರೇವಣಸಿದ್ದಪ್ಪ ನನಗೆ ತವರಿನಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದಾರೆಂದು ಆರೋಪಿಸಿದ್ದಾಳೆ.

ಅಲ್ಲದೇ ನನ್ನ ಸಹೋದರನಿಗೆ ಕಿಡ್ನಿ ಅವಶ್ಯಕತೆಯಿದ್ದು, ನಿನ್ನ ಕಿಡ್ನಿ ನನ್ನ ತಮ್ಮನಿಗೆ ಕೊಡು ಎಂದು ಪೇದೆ ರೇವಣಸಿದ್ದಪ್ಪ ಪತ್ನಿ ಜಗದೇವಿಗೆ ಕಿರುಕುಳ ಕೊಟ್ಟಿದ್ದಾನಂತೆ. ಹೀಗಾಗಿ ಮನನೊಂದ ಜಗದೇವಿ ಅವರು ಜಮಖಂಡಿ ಗ್ರಾಮದ ಯಡ್ರಾಮಿ ಠಾಣೆಯಲ್ಲಿ ಗಂಡ ರೇವಣಸಿದ್ದಪ್ಪನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾಳೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಎಸ್ಪಿ ಅಡ್ಡೂರು ಶ್ರೀನಿವಾಸುಲು, ಆತನ ಪತ್ನಿ ನೀಡಿದ ದೂರಿನ ಅನ್ವಯ ತನಿಖೆ ನಡೆಸಲಾಗುತ್ತಿದೆಂದು ಹೇಳಿದ್ದಾರೆ.

ಇದನ್ನೂ ಓದಿ:ಮಲತಂದೆಯಿಂದಲೇ ಮಗಳನ್ನು ವೇಶ್ಯೆವಾಟಿಕೆಗೆ ತಳ್ಳಿದ್ದ ಆರೋಪ: ಆರೋಪಿಗಳ ಬಂಧನ

7 ತಿಂಗಳ ಗರ್ಭಿಣಿ ಇರುವ ಪೇದೆ ಪತ್ನಿ ಜಗದೇವಿ

ಇನ್ನು ಈಗಾಗಲೇ ಪೇದೆ ರೇವಣಸಿದ್ದಪ್ಪ ದಂಪತಿಗೆ ಒಂದೂವರೆ ವರ್ಷದ ಹೆಣ್ಣು ಮಗುವಿದೆ. ಜೊತೆಗೆ ಪೇದೆ ಪತ್ನಿ ಜಗದೇವಿ 7 ತಿಂಗಳ ಗರ್ಭಿಣಿ ಇದ್ದಾಳೆ. ಇಷ್ಟಿದ್ದರೂ ಸಹ ಈ ಕುಟುಂಬದಲ್ಲಿ ಸದ್ಯ ಬಿರುಗಾಳಿಯೆ ಎದ್ದಿದೆ.. ಇಷ್ಟೇ ಅಲ್ಲದೇ ರೇವಣಸಿದ್ದಪ್ಪ ಮತ್ತು ಪತ್ನಿ ಜಗದೇವಿ ಮಧ್ಯೆ ಕೆಲವೊಂದು ವೈಯುಕ್ತಿಕ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಇದ್ದವು ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ಪೇದೆ ರೇವಣಸಿದ್ದಪ್ಪ, ‘ನಾನು ಪತ್ನಿ ಜಗದೇವಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಮಾನಸಿಕ, ದೈಹಿಕ ಕಿರುಕುಳ ಕೊಟ್ಟಿದ್ದೇನೆ ಎನ್ನವುದು ಶುದ್ಧ ಸುಳ್ಳು. ‘ನೀವು ತಂದೆ-ತಾಯಿಯನ್ನ ಬಿಟ್ಟು ಪ್ರತ್ಯೇಕ ಮನೆ ಮಾಡಬೇಕು ಎಂದು ನನ್ನ ಪತ್ನಿ ನನಗೆ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದಾಳೆ. ಎಷ್ಟೇ ಬುದ್ಧಿವಾದ ಹೇಳಿದ್ರು ನನ್ನ ಜೊತೆ ನಿತ್ಯವು ಜಗಳ ಆಡುತ್ತಿದ್ದಳು. ಅಂದು ತವರು ಮನೆಗೆ ಹೋಗ್ತಿನಿ ಅಂದಿದಕ್ಕೆ ನಾನೆ ಕಾರಿನಲ್ಲಿ ಬಿಟ್ಟು ಬಂದಿದ್ದು, ಅದಾದ ಬಳಿಕ ಆಕೆ ನಮ್ಮ‌ ಮನೆಗೆ ಜಗದೇವಿ ಬಂದಿಲ್ಲವೆಂದು ಪೇದೆ ರೇವಣಸಿದ್ದಪ್ಪ ಹೇಳಿದ್ದಾರೆ.

ನಾನು ಈಗಾಗಲೇ ಕೋರ್ಟ್‌ಗೆ ಡೈವೋರ್ಸ್​ ಪ್ರತಿ ಸಲ್ಲಿಸಿದ್ದು, ಮೊದಲ ಮಗು ನನಗೆ ಕೊಡು ಎಂದರು ಕೊಡ್ತಿಲ್ಲವೆಂದು ಪತ್ನಿ ಜಗದೇವಿ ಸುಳ್ಳು ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೆನೇ ಇರಲಿ ಸಣ್ಣಪುಟ್ಟ ಏನೇ ಸಮಸ್ಯೆಗಳಿದ್ದರೂ ಬಗೆಹರಿಸಿಕೊಳ್ಳೊದನ್ನ ಬಿಟ್ಟು, ಪೇದೆ ಪತಿ ವಿರುದ್ಧವೇ ಪತ್ನಿ ಠಾಣೆ ಮೆಟ್ಟಿಲೆರಿದ್ದು ದುರಂತವೇ ಸರಿ. ಒಟ್ಟಿನಲ್ಲಿ ಡೈವೋರ್ಸ್ ಪ್ರಕರಣ ನ್ಯಾಯಾಲಯದಲ್ಲಿದ್ದು, ಮುಂದೆನಾಗುತ್ತೋ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು