ಮಲತಂದೆಯಿಂದಲೇ ಮಗಳನ್ನು ವೇಶ್ಯೆವಾಟಿಕೆಗೆ ತಳ್ಳಿದ್ದ ಆರೋಪ: ಆರೋಪಿಗಳ ಬಂಧನ

ಚಿಕ್ಕಬಳ್ಳಾಪುರ ಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಲತಂದೆಯಿಂದಲೇ ವೇಶ್ಯಾವಾಟಿಕೆಗೆ ತಳ್ಳಿದ್ದ 13 ವರ್ಷದ ಬಾಲಕಿಯನ್ನು ಪೊಲೀಸರು ರಕ್ಷಿಸಿರುವಂತಹ ಘಟನೆ ನಡೆದಿದೆ. ಆಟೋ ಚಾಲಕನ ಮೂಲಕ ವೇಶ್ಯೆವಾಟಿಕೆಗೆ ಕಳುಹಿಸುದ್ದ ಆರೋಪ ಮಾಡಲಾಗಿದೆ. ಸದ್ಯ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸರಿಂದ ಬಾಲಕಿಯ ರಕ್ಷಣೆ ಆಡಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ.

ಮಲತಂದೆಯಿಂದಲೇ ಮಗಳನ್ನು ವೇಶ್ಯೆವಾಟಿಕೆಗೆ ತಳ್ಳಿದ್ದ ಆರೋಪ: ಆರೋಪಿಗಳ ಬಂಧನ
ಪ್ರಾತಿನಿಧಿಕ ಚಿತ್ರ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ

Updated on:Jan 23, 2024 | 7:32 PM

ಚಿಕ್ಕಬಳ್ಳಾಪುರ, ಜನವರಿ 23: ವೇಶ್ಯಾವಾಟಿಕೆಗೆ ತಳ್ಳಿದ್ದ 13 ವರ್ಷದ ಬಾಲಕಿ (girl) ಯನ್ನು ಪೊಲೀಸರು ರಕ್ಷಿಸಿರುವಂತಹ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಟೋ ಚಾಲಕನ ಮೂಲಕ ಬಾಲಕಿಯ ಮಲತಂದೆಯಿಂದಲೇ ವೇಶ್ಯೆವಾಟಿಕೆ ತಳ್ಳಿದ್ದ ಆರೋಪ ಮಾಡಲಾಗಿದೆ. ಚಿಕ್ಕಬಳ್ಳಾಪುರ ಮಹಿಳಾ ಪೊಲೀಸರಿಂದ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ.

ಲಾಡ್ಜ್​ನಲ್ಲಿ ನಡೆಯುತ್ತಿತ್ತು ವೈಶ್ಯಾವಾಟಿಕೆ

ವಿಜಯನಗರ: ಜಿಲ್ಲೆಯ ಹೊಸಪೇಟೆ ಪಟ್ಟಣದ ರಾಣಿಪೇಟೆಯಲ್ಲಿರುವ ವೆಂಕಟೇಶ್ವರ ಲಾಡ್ಜ್ ಮೇಲೆ ಇತ್ತೀಚೆಗೆ ಹೊಸಪೇಟೆ ಟೌನ್ ಪೊಲೀಸರು ಮತ್ತು ಮೈಸೂರಿನ ಒಡನಾಡಿ ಸಂಸ್ಥೆಯ ಸಿಬ್ಬಂದಿ ಜಂಟಿ ದಾಳಿ ಮಾಡಿ ಅನೇಕರು ವೈಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ. ದಂಧೆಯಲ್ಲಿ ಭಾಗಿಯಾಗಿದವರು ಮತ್ತು ಲಾಡ್ಜ್​ನಲ್ಲಿದ್ದ ಒಟ್ಟು 10 ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಅಕ್ಕ ಅಕ್ಕ ಎನ್ನುತ್ತಲೇ ದೀಪಿಕಾಳನ್ನು ಕೊಂದು ಬಿಟ್ನಾ ಯುವಕ? ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಶಿಕ್ಷಕಿ ಸಾವು

ಲಾಡ್ಜ್​​ನಲ್ಲಿ ಅಪ್ರಾಪ್ತ ಬಾಲಕಿಯರನ್ನು, ವಿಕಲಾಂಗ ಚೇತನರನ್ನು ಕೂಡ ಅಕ್ರಮ ದಂಧೆಗೆ ಬಳಸಿಕೊಳ್ಳಲಾಗುತ್ತಿತ್ತು ಎಂಬುವುದು ಬೆಳಕಿಗೆ ಬಂದಿದೆ. ಲಾಡ್ಜ್​ನಲ್ಲಿ ದಂಧೆಕೋರರು, ಪೊಲೀಸರು ದಾಳಿ ಮಾಡಿದರೆ ತಪ್ಪಿಸಿಕೊಂಡು ಹೋಗಲು ಮಾಡಿಕೊಂಡಿದ್ದ ವ್ಯವಸ್ಥೆಯನ್ನು ನೋಡಿ ಸ್ವತ ಪೊಲೀಸರು ಮತ್ತು ಒಡನಾಡಿ ಸಿಬ್ಬಂದಿಗಳು ಶಾಕ್ ಆಗಿದ್ದರು.

ಎಂಟ್ರಿಗೆ ಕ್ಯಾಶಿಯರ್ ಚೇಂಬರ್ ಇದ್ದು, ಕ್ಯಾಶಿಯರ್ ಕಾಲಿನ ಕೆಳಗೆ ಬಟನ್ ವ್ಯವಸ್ಥೆ ಮಾಡಲಾಗಿದೆ. ಯಾರಾದರು ಬಂದರೆ ಕ್ಯಾಶಿಯರ್ ಬಟನ್ ಒತ್ತುತ್ತಿದ್ದ. ಆಗ ಲಾಡ್ಜ್​ನ ನಾಲ್ಕನೆ ಮಹಡಿಯಲ್ಲಿನ ಅಲಾರಾಂ ಬೆಲ್​ನಲ್ಲಿ ದೇವರ ಸ್ತ್ರೂತ್ರಗಳು ಬರ್ತಿದ್ದವು. ಬೆಲ್ ಆದರೆ ಯಾರೋ ಬಂದಿದ್ದಾರೆ ಅನ್ನೋದು ಸಿಗ್ನಲ್.

ಹೀಗಾಗಿ ದಂಧೆಯಲ್ಲಿ ತೊಡಗುತ್ತಿದ್ದ ಪುರುಷರು, ಟಿನ್ ಶೆಡ್ ಓಪನ್ ಮಾಡಿ, ಬೇರಡೆಯಿಂದ ತಪ್ಪಿಸಿಕೊಂಡು ಹೋಗಲು ವ್ಯವಸ್ಥೆ ಮಾಡಿದ್ದರೆ, ಮಹಿಳೆಯರು, ಕೆಲ ಅನುಪಯುಕ್ತ ವಸ್ತುಗಳನ್ನು ಇಡಬಹುದಾದ ಪುಟ್ಟ ಕೋಣೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದರು.

ಇದನ್ನೂ ಓದಿ: ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ, ಕೊಲೆ ಆರೋಪ

ಹೊಸಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಲಾಡ್ಜ್ ಮಾಲೀಕ ಮತ್ತು ನಡೆಸುತ್ತಿದ್ದವರ ವಿಚಾರಣೆ ಮಾಡಲಾಗಿದೆ. ಬಳಿಕ ದಂಧೆಯ ಇನ್ನಷ್ಟು ಕರಾಳ ಮುಖಗಳು ಬಯಲಾಗಿವೆ.

ಪೊಲೀಸ್ಪನಿಂದಲೇ ಮಹಿಳೆಗೆ ಲೈಂಗಿಕ ಕಿರುಕುಳ‌ ಆರೋಪ

ಕಲಬುರಗಿ: ಜಿಲ್ಲೆಯಲ್ಲೊಬ್ಬ ಪೊಲೀಸ್​ ಠಾಣೆಗೆ ದೂರು ಕೊಡಲು ಬಂದ ಮಹಿಳೆಗೆ ಪೇದೆಯೇ ಲೈಂಗಿಕ ಕಿರುಕುಳ ನೀಡಿದಂತಹ ಅರೋಪ ಕೇಳಿಬಂದಿತ್ತು. ಕಮಲಾಪುರ ಪೊಲೀಸ್ ಠಾಣೆ ಕಾನ್ಸ್ಟೆಬಲ್ ಬಸವರಾಜ್ ಈ ಕೃತ್ಯ ಎಸಗಿರುವ ಆರೋಪ ಕೇಳಿಬಂದಿತ್ತು. ಕಮಲಾಪುರ ತಾಲೂಕಿನ ಡೊಂಗರಗಾಂವ್ ಗ್ರಾಮದ ಮಹಿಳೆ ತನ್ನ ಗಂಡನ ಕಿರುಕುಳಕ್ಕೆ ಬೇಸತ್ತು ಕಮಲಾಪುರ ಠಾಣೆಗೆ ದೂರು ಕೊಡಲು ಬಂದಿದ್ದಳು.

ಈ ವೇಳೆ ಕಾನ್ಸ್ಟೆಬಲ್ ಬಸವರಾಜ್, ಆಕೆಯೊಂದಿಗೆ ಸ್ನೇಹ ಬೆಳೆಸಿ ಮೊಬೈಲ್ ನಂಬರ್ ಪಡೆದಿದ್ದಾನೆ. ನಂತರ ಆಕೆಗೆ ಕಾಲ್ ಮಾಡಿ ನಾನು ನಿನ್ನ ಪ್ರೀತಿಸುತ್ತೇನೆ. ನಿನ್ನನ್ನೆ ಮದ್ವೆಯಾಗುತ್ತೇನೆ ಎಂದು ಪೀಡಿಸಲು ಶುರು ಮಾಡಿದ್ದಾನೆ. ಅದಕ್ಕೆ ಆಕೆ ಒಪ್ಪದೇ ಇದ್ದಾಗ, ನೀನು ಸಹಕರಿಸದಿದ್ದರೆ ಮನೆಗೆ ಬಂದು ನಿನ್ನನ್ನ ಎತ್ತಾಕ್ಕೊಂಡು ಹೋಗುತ್ತೆನೆಂದು ಆವಾಜ್ ಹಾಕಿದ್ದಾನೆ. ಇದೀಗ ನೊಂದ ಮಹಿಳೆ ಪೇದೆ ಬಸವರಾಜ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾಳೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:32 pm, Tue, 23 January 24