AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೀರ್ಥಹಳ್ಳಿಯಲ್ಲಿ ಸರಣಿ ಆತ್ಮಹತ್ಯೆ: ಮೂರು ದಿನಗಳಲ್ಲಿ ಮೂವರು ಯುವತಿಯರ ಸಾವು

ಮಲೆನಾಡಿನ ತೀರ್ಥಹಳ್ಳಿಯಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ಆತ್ಮಹತ್ಯೆ ಕೇಸ್ ಜಾಸ್ತಿಯಾಗುತ್ತಲೇ ಇವೆ. ಮಾಜಿ ಗೃಹ ಸಚಿವರು ಮತ್ತು ಹಾಲಿ ಶಾಸಕರ ಕ್ಷೇತ್ರದಲ್ಲಿ ಆತ್ಮಹತ್ಯೆ ಎನ್ನುವುದು ಕಾಮನ್ ಆಗಿ ಬಿಟ್ಟಿದೆ. ಕಾಲೇಜ್ ವಿದ್ಯಾರ್ಥಿಗಳು, ಯುವತಿಯರು, ವಿವಾಹಿತರು ಸಣ್ಣ ಪುಟ್ಟ ವಿಷಯಕ್ಕೆ ಸಾವಿಗೆ ಶರಣಾಗುತ್ತಿದ್ದಾರೆ. ತೀರ್ಥಹಳ್ಳಿಯಲ್ಲಿನ ಸರಣಿ ಆತ್ಮಹತ್ಯೆ ಕುರಿತು ಒಂದ ವರದಿ ಇಲ್ಲಿದೆ.

ತೀರ್ಥಹಳ್ಳಿಯಲ್ಲಿ ಸರಣಿ ಆತ್ಮಹತ್ಯೆ: ಮೂರು ದಿನಗಳಲ್ಲಿ ಮೂವರು ಯುವತಿಯರ ಸಾವು
ತೀರ್ಥಹಳ್ಳಿಯಲ್ಲಿ ಸರಣಿ ಆತ್ಮಹತ್ಯೆ: ಮೂರು ದಿನಗಳಲ್ಲಿ ಮೂವರು ಯುವತಿಯರ ಸಾವು (ಸಾಂದರ್ಭಿಕ ಚಿತ್ರ)
Basavaraj Yaraganavi
| Edited By: |

Updated on: Jan 24, 2024 | 6:53 AM

Share

ಶಿವಮೊಗ್ಗ, ಜ.24: ಜಿಲ್ಲೆಯ ತೀರ್ಥಹಳ್ಳಿ (Thirthahalli) ತಾಲೂಕು ಅಪ್ಪಟ ಮಲೆನಾಡಿನ ಪರಿಸರ. ಕುವೆಂಪು ಮತ್ತು ಯು ಆರ್ ಅನಂತಮೂರ್ತಿ ಅವರಂತಹ ಕವಿ ಸಾಹಿತಿಗಳ ತವರು ಜಿಲ್ಲೆ. ಇಂತಹ ಬುದ್ಧಿವಂತರ ತಾಲೂಕಿನಲ್ಲಿ ಕೆಲವು ವರ್ಷಗಳಿಂದ ಆತ್ಮಹತ್ಯೆ (Suicide) ಕೇಸ್​ಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ಪ್ರತಿ ವರ್ಷ 60 ರಿಂದ 70 ಯುಡಿಆರ್ ಕೇಸ್​ಗಳು ಇಲ್ಲಿ ದಾಖಲು ಆಗುತ್ತವೆ. ಕೇವಲ ಮೂರೇ ದಿನಗಳ ಅಂತರದಲ್ಲಿ ಕಾಲೇಜ್ ವಿದ್ಯಾರ್ಥಿನಿ, ಮದುವೆ ನಿಶ್ಚಯವಾಗಿದ್ದ ಯುವತಿ ಹಾಗೂ ಮದುವೆಯಾಗಿ ಕೇವಲ 8 ತಿಂಗಳ ನವವಿವಾಹಿತೆ ನೇಣಿಗೆ ಶರಣಾಗಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಗ್ರಾಮದಲ್ಲಿ ಶಮಿತಾ ಎನ್ನುವ ಬಿ.ಕಾಂ ಪಧವಿಧರೆ ಜನವರಿ 18 ರಂದು ಗಂಡನ ಮನೆಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದ ವಿದ್ಯಾರ್ಥ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಒಂಟಿತನ ಮತ್ತು ಥೈರಾರ್ಡ್ ಸಮಸ್ಯೆ ಹಿನ್ನೆಲೆ ಆತ್ಮಹತ್ಯೆ ಅಂತಾ ಡೆತ್ ಬರೆದಿಟ್ಟು ಸಾವನ್ನಪ್ಪಿದ್ದು, ಆಗುಂಬೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಕಾಲೇಜ್ ವಿದ್ಯಾರ್ಥಿನಿಯಾಗಿರುವ ತೀರ್ಥಹಳ್ಳಿ ತಾಲೂಕಿನ ಬಿಳುಕೊಪ್ಪ ಗ್ರಾಮದ ಅದೀಕ್ಷಾ (20) ಎಂಬಾಕೆ ಜನವರಿ 19 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಲವ್ ಕೇಸ್​ನಲ್ಲಿ ಯುವತಿಯು ಆತ್ಮಹತ್ಯೆ ಮಾಡಿಕೊಡಿರುವ ಸಾಧ್ಯತೆಯಿದೆ. ಸಾಯಿಯುವ ಮೊದಲು ಒಂದೇ ನಂಬರ್​ನಿಂದ 19 ಮಿಸ್ ಕಾಲ್​ಗಳಿದ್ದವು. ಹೀಗೆ ಹಿಂದೆ ಮುಂದೆ ನೋಡದೇ ಯುವತಿಯು ನೇಣಿಗೆ ಶರಣಾಗಿದ್ದಾಳೆ.

ಇದನ್ನೂ ಓದಿ: 13 ವರ್ಷ ಪ್ರೀತಿಸಿ ಮದುವೆಯಾಗಿದ್ದರು: ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆ, ಕೊಲೆ ಎಂದು ಪತಿ ವಿರುದ್ದ ದೂರು

ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಗ್ರಾಮದಲ್ಲಿ ಚೈತ್ರ ಎನ್ನುವ 26 ವರ್ಷ ಯುವತಿಯು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎಂ.ಕಾಂ ಪಧವಿಧರೆ ಆಗಿದ್ದ ಯವತಿಗೆ ಫೆ. 4 ರಂದು ಮದುವೆ ನಿಶ್ಚಯವಾಗಿತ್ತು. ಆದರೆ ಜನವರಿ 21 ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮದುವೆಯಾಗುವ ಯುವಕನು ಹಿಂದಿನ ದಿನ ಭೇಟಿಯಾಗಿ ಹೋಗಿದ್ದನು. ಬಳಿಕ ಯುವತಿಯು ಮದುವೆ ನಿರಾಕರಣೆ ಮಾಡಿದ್ದಳು. ಇದಕ್ಕೆ ಕುಟುಂಬಸ್ಥರು ಒಪ್ಪಿರಲಿಲ್ಲ. ಮದುವೆ ಫಿಕ್ಸ್ ಆಗಿದೆ. ಈಗ ಬೇಡೆ ಅಂದರೆ ಹೇಗೆ ಅಂತಾ ಬುದ್ಧಿ ಮಾತು ಹೇಳಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೀಗೆ ಕೇವಲ ಮೂರು ನಾಲ್ಕು ದಿನಗಳ ಅಂತರದಲ್ಲಿ ತೀರ್ಥಹಳ್ಳಿಯಲ್ಲಿ ಮೂರು ಆತ್ಮಹತ್ಯೆ ಕೇಸ್ ದಾಖಲು ಆಗಿರುವುದು ಅಚ್ಚರಿ ಮೂಡಿಸಿತ್ತು. ಶಾಸಕರೂ ಆಗಿರುವ ಮಾಜಿ ಗೃಹ ಸಚಿವ ಆರಗ ಜ್ಷಾನೇಂದ್ರ ಅವರು ಕ್ಷೇತ್ರದಲ್ಲಿ ಆದ ನಿರಂತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ತೀರ್ಥಹಳ್ಳಿಯಲ್ಲಿ ಒಂದು ಮಾನಸಿಕ ಕೇಂದ್ರ ತೆರೆಯಲು ಎಲ್ಲ ವ್ಯವಸ್ಥೆಗಳನ್ನು ಕೂಡಾ ಮಾಡಿಕೊಂಡಿದ್ದರು. ನಿಮಾನ್ಸ್​ನಿಂದ ಒಂದು ತಂಡ ತೀರ್ಥಹಳ್ಳಿಗೆ ಬಂದು ಒಂದಿಷ್ಟು ಕೌನ್ಸಿಲಿಂಗ್ ಮತ್ತು ಜಾಗೃತಿ ಮೂಡಿಸುತ್ತಿದೆ. ತೀರ್ಥಹಳ್ಳಿಯಲ್ಲಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚು ಇದೆ. ಈ ಹಿನ್ನಲೆಯಲ್ಲಿ ನಿಮಾನ್ಸ್ ವೈದ್ಯರ ತಂಡವು ತೀರ್ಥಹಳ್ಳಿಗೆ ಬಂದು ಹೋಗುತ್ತಿದೆ.

ಇನ್ನು, ಈ ಮೂರು ಆತ್ಮಹತ್ಯೆ ಪ್ರಕರಣಗಳಲ್ಲಿ ಅಂತಹ ದೊಡ್ಡ ಸಮಸ್ಯೆಗಳು ಇರಲಿಲ್ಲ. ಎಲ್ಲವೂ ಸಣ್ಣ ಪುಟ್ಟ ವಿಷಯಗಳಿಗೆ ಮೂರು ಯುವತಿಯರು ನೇಣಿಗೆ ಶರಣಾಗಿದ್ದಾರೆ. ಮೂವರು ಪ್ರಕರಣಗಳಲ್ಲಿ ವಿವಿಧ ಠಾಣೆಯಲ್ಲಿ ಕೇಸ್ ದಾಖಲಾಗಿವೆ. ಈ ಮೂವರ ಸಾವಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಆದರೆ ಈ ಮೂವರು ಆತ್ಮಹತ್ಯೆ ಪ್ರಕರಣಗಳಿಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದಲೇ ಹೊರಬೀಳಬೇಕಿದೆ.

ತೀರ್ಥಹಳ್ಳಿಯಲ್ಲಿ ಮೂರನೇ ದಿನಕ್ಕೆ ಮೂರು ಆತ್ಮಹತ್ಯೆ ಕೇಸ್​ಗಳಾಗಿವೆ. ಯುವತಿಯು ಆತ್ಮಹತ್ಯೆಗೆ ತುಂಬಾ ಸಿಲ್ಲಿ ವಿಷಯಗಳು ಸಾವಿನ ಹಿಂದೆ ಕಂಡು ಬಂದಿವೆ. ತೀರ್ಥಹಳ್ಳಿಯಲ್ಲಿ ಆತ್ಮಹತ್ಯೆ ಕೇಸ್​ಗಳು ಹೆತ್ತವರನ್ನು ಕಂಗೆಡಿಸಿವೆ. ಯುವತಿಯರು ಸಾವಿಗೆ ಶರಣಾಗುತ್ತಿರುವುದು ಕಳವಳಕಾರಿ ಸಂಗತಿ

ಆತ್ಮಹತ್ಯೆ ಸಹಾಯವಾಣಿ

ಕಾರಣ ಯಾವುದೇ ಇರಲಿ, ಆತ್ಮಹತ್ಯೆಯ ನಿರ್ಧಾರ ಬೇಡ. ಆತ್ಮಹತ್ಯೆಯ ಭಾವನೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೆ ನಿಮ್ಮ ಆಪ್ತರೊಂದಿಗೆ ಮಾತನಾಡಿ. ಸಾಧ್ಯವಾಗದಿದ್ದರೆ ಆತ್ಮಹತ್ಯೆ ಸಹಾಯವಾಣಿಗೆ ಕರೆ ಮಾಡಿ. ಸಹಾಯವಾಣಿ ಸಂಖ್ಯೆ – 9152987821, ಆರೋಗ್ಯ ವಾಣಿ: 104, ಸಹಾಯ್ ಸಹಾಯವಾಣಿ: 080-25497777

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Basavaraj Yaraganavi
Basavaraj Yaraganavi
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ