AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಳಿ ಬಂಗಾರ ಲೀಥಿಯಮ್ ಯಾದಗಿರಿಯಲ್ಲಿ ಪತ್ತೆ: ದೇಶದಲ್ಲೇ ಮೊದಲ ಬಾರಿಗೆ ಲೀಥಿಯಮ್ ಗಣಿಗಾರಿಕೆ ಆರಂಭ

ಯಾದಗಿರಿ ಜಿಲ್ಲೆಯಲ್ಲಿ ಲೀಥಿಯಮ್ ಸಿಗುತ್ತೆ ಅಂತ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರೆ ಸ್ಪಷ್ಟ ಪಡಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ವಸ್ತುಗಳನ್ನ ತಯಾರಿಕೆಯಲ್ಲಿ ಬಹುಮುಖ್ಯ ಪಾತ್ರವಾಗುವ ಲೀಥಿಯಮ್ ಅಂಶ ಯಾದಗಿರಿ ಜಿಲ್ಲೆಯಲ್ಲೂ ಸಿಗ್ತಾಯಿರೋದು ವಿಶೇಷವಾಗಿದೆ. ಆ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಲೀಥಿಯಮ್ ಗಣಿಗಾರಿಕೆ ಆರಂಭಿಸಲು ಕೇಂದ್ರ ಮುಂದಾಗಿದೆ.

ಬಿಳಿ ಬಂಗಾರ ಲೀಥಿಯಮ್ ಯಾದಗಿರಿಯಲ್ಲಿ ಪತ್ತೆ: ದೇಶದಲ್ಲೇ ಮೊದಲ ಬಾರಿಗೆ ಲೀಥಿಯಮ್ ಗಣಿಗಾರಿಕೆ ಆರಂಭ
ಬಿಳಿ ಬಂಗಾರ ಲೀಥಿಯಮ್ ಯಾದಗಿರಿಯಲ್ಲಿ ಪತ್ತೆ, ದೇಶದಲ್ಲೇ ಮೊದಲ ಬಾರಿಗೆ ಲೀಥಿಯಮ್ ಗಣಿಗಾರಿಕೆ ಆರಂಭ
ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 06, 2024 | 6:39 PM

Share

ಯಾದಗಿರಿ, ಸೆಪ್ಟೆಂಬರ್​ 06: ಇದೆ ಮೊದಲ ಬಾರಿಗೆ ದೇಶದಲ್ಲಿ ಲೀಥಿಯಮ್ (lithium) ಗಣಿಗಾರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಚಿನ್ನದಂತೆ ವಿರಳವಾಗಿ ಸಿಗುವ ಬಿಳಿ ಬಂಗಾರ ಅಂತ ಕರೆಸಿಕೊಳ್ಳುವ ಲೀಥಿಯಮ್ ಗಣಿಗಾರಿಕೆ ಮಾಡಲು ಮುಂದಾಗಿದೆ. ಇದೆ ಕಾರಣಕ್ಕೆ ದೇಶದಲ್ಲಿ ಲೀಥಿಯಮ್ ಸಿಗುವ ಸ್ಥಳಗಳನ್ನ ಗುರುತಿಸುವ ಕೆಲಸ ಮಾಡ್ತಾಯಿದೆ. ಇದೆ ಲೀಥಿಯಮ್ ಅಂಶ ರಾಜ್ಯದ ಆ ಎರಡು ಜಿಲ್ಲೆಗಳಲ್ಲಿ ಸಿಗುವ ಬಗ್ಗೆ ಖುದ್ದು ಕೇಂದ್ರ ಸರ್ಕಾರವೇ ಮಾಹಿತಿ ಬಹಿರಂಗ ಪಡೆಸಿದೆ.

ಮಂಡ್ಯ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಲೀಥಿಯಮ್ ಪತ್ತೆ

ರಾಜ್ಯದ ಮಂಡ್ಯ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಲೀಥಿಯಮ್ ಸಿಗುತ್ತೆ ಅಂತ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರೆ ಸ್ಪಷ್ಟ ಪಡಿಸಿದ್ದಾರೆ. ಅದರಲ್ಲೂ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಂಗಳೂರು ಗ್ರಾಮದ ಹೊರ ಭಾಗದಲ್ಲಿ ಸಿಗುತ್ತೆ ಅಂತ ಹೇಳಲಾಗಿದೆ. ಗ್ರಾಮದ ಹೊರ ಭಾಗದಲ್ಲಿರುವ ಬೆಟ್ಟದಲ್ಲಿ ಲೀಥಿಯಮ್ ನಿಕ್ಷೇಪ ಪತ್ತೆಯಾಗಿದೆ. ಕಳೆದ ಆರು ತಿಂಗಳ ಹಿಂದೆ ನಿರಂತರವಾಗಿ ಎರಡು ವರ್ಷಗಳ ಕಾಲ ಲೀಥಿಯಮ್ ನಿಕ್ಷೇಪಕ್ಕಾಗಿ ಸಂಶೋಧನೆಯನ್ನ ನಡೆಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಸ್ಟೋರ್​ಗಳಲ್ಲಿ ಸಿಗುತ್ತಿಲ್ಲ ಮದ್ಯ, ಕಾರಣ ಇಲ್ಲಿದೆ

ದೆಹಲಿಯಿಂದ ಬಂದಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಕೆ ಅಧಿಕಾರಿಗಳು ಹಾಗೂ ಸಂಶೋಧಕರು ಇದೆ ಸ್ಥಳದಲ್ಲಿ ಎರಡು ವರ್ಷಗಳ ಕಾಲ ಇದ್ದು ಸಂಶೋಧನೆ ನಡೆಸಿದ್ದಾರೆ. ಭೂಗರ್ಭಕ್ಕೆ ಕೈಹಾಕಿ ಕೆಲ ವಸ್ತುಗಳನ್ನ ಹೊರ ತೆಗೆಯುವ ಕೆಲಸ ಮಾಡಿದ್ದಾರೆ. ಬಳಿಕ ಇದೆ ಸ್ಥಳದಿಂದ ಕಳೆದ ಆರು ತಿಂಗಳ ಹಿಂದೆ ಸ್ಯಾಂಪಲ್​ಗಳನ್ನ ಕಲೆಕ್ಟ್ ಮಾಡಿಕೊಂಡು ಹೋಗಿದ್ದಾರೆ.

ಮಂಗಳೂರು ಹೊರ ಭಾಗದ ಬೆಟ್ಟದಲ್ಲಿ ನಿರಂತರವಾಗಿ ಎರಡು ವರ್ಷಗಳ ಕಾಲ ಸಂಶೋಧನೆಯನ್ನ ನಡೆಸಿದ್ದಾರೆ. ದೆಹಲಿಯಿಂದ ಬಂದಿದ್ದ ಅಧಿಕಾರಿಗಳು ಸ್ಥಳೀಯರನ್ನ ಸಹ ಈ ಕೆಲಸಕ್ಕೆ ಕರೆದುಕೊಂಡಿದ್ದರು. ಎರಡು ವರ್ಷಗಳ ಕಾಲ ಸ್ಥಳೀಯರನ್ನ ತಮ್ಮ ಸಹಾಯಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಎರಡು ವರ್ಷಗಳ ಕಾಲ ಸಂಶೋಧನೆ ನಡೆಸಿದ ಬಳಿಕ ಸ್ಥಳದಲ್ಲಿ ಸಿಕ್ಕ ಕೆಲ ಸ್ಯಾಂಪಲ್​ಗಳನ್ನ ಲ್ಯಾಬ್​ನಲ್ಲಿ ಪರೀಕ್ಷೆ ನಡೆಸಿದ್ದಾರೆ.

ಪರೀಕ್ಷೆ ನಡೆಸಿದ ಬಳಿಕ ಇದೆ ಬೆಟ್ಟದ ನಾನಾ ಕಡೆ ಲೀಥಿಯಮ್ ಅಂಶ ಸಿಗುತ್ತೆ ಕೇಂದ್ರ ಸರ್ಕಾರ ಸ್ಪಷ್ಟ ಪಡೆಸಿದೆ. ಎರಡು ವರ್ಷಗಳ ಕಾಲ ಲೀಥಿಯಮ್​ ಗಾಗಿಯೇ ಸಂಶೋಧನೆ ನಡೆಸುತ್ತಿದ್ದರು ಅಂತ ಸ್ವತಃ ಗ್ರಾಮಸ್ಥರಿಗೂ ಸಹ ಗೊತ್ತಿರಲಿಲ್ಲ ಅಂತ ಗ್ರಾಮಸ್ಥರು ಹೇಳುತ್ತಾರೆ. ಇನ್ನು ಜಾಗತಿಕ ಮಟ್ಟದಲ್ಲಿ ಲೀಥಿಯಮ್ ಅತಿ ಹೆಚ್ಚು ಚೀನಾ ದೇಶದಲ್ಲಿ ಬಳಕೆಯಾಗುತ್ತಿದೆ. ಹೀಗಾಗಿ ದೇಶದಲ್ಲೂ ಲೀಥಿಯಮ್ ಬಳಕೆ ಮಾಡಬೇಕು ಅಂತ ಕೇಂದ್ರ ಸರ್ಕಾರ ಮುಂದಾಗಿದೆ.

ಲೀಥಿಯಮ್ ಯಾವುದಕ್ಕೆ ಬಳಕೆ

ಈ ಲೀಥಿಯಮ್ ಯಾವ ಕೆಲಸಕ್ಕೆ ಬಳಕೆ ಆಗುತ್ತೆ ಅಂದರೆ ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಬಳಕೆಯಾಗುತ್ತೆ. ಜಾಗತಿಕವಾಗಿ ದೇಶದಲ್ಲಿ ಈಗ ಬರುವ ದಿನಗಳಲ್ಲಿ ಎಲೆಕ್ಟ್ರಿಕಲ್ ವಾಹನಗಳ ಬಳಕೆ ಹೆಚ್ಚಾಗಲಿದೆ. ಹೀಗಾಗಿ ಎಲೆಕ್ಟ್ರಿಕಲ್ ವಾಹನಗಳ ಬ್ಯಾಟರಿ ಸಿದ್ದಪಡಿಸಲು ಈ ಲೀಥಿಯಮ್ ಬಹಳ ಮುಖ್ಯವಾಗಿದೆ. ಮೊಬೈಲ್ ಫೋನ್ ಹಾಗೂ ಲ್ಯಾಪ್ ಟಾಪ್ ಬ್ಯಾಟರಿ ತಯಾರಿಕೆಗೂ ಈ ಲೀಥಿಯಮ್ ಬಹಳ ಅವಶ್ಯಕತೆಯಿದೆ.

ಬೇರೆ ದೇಶಗಳಿಂದ ಲೀಥಿಯಮ್ ಆಮದು ಮಾಡಿಕೊಳ್ಳಲಾಗುತ್ತಿದೆ. ಆದ್ರೆ ದೇಶದಲ್ಲೇ ಲೀಥಿಯಮ್ ನಿಕ್ಷೇಪ ಪತ್ತೆ ಹಚ್ಚಿ ಎಲೆಕ್ಟ್ರಾನಿಕ್ಸ್ ಸಾಧನಗಳ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ. ಜಗತ್ತಿನಲ್ಲೇ ಅತಿ ಹೆಚ್ಚಾಗಿ ಲೀಥಿಯಮ್ ಅಪ್ಘಾನಿಸ್ಥಾನದಲ್ಲಿ ಸಿಗುತ್ತೆ ಅಂತ ಹೇಳಲಾಗುತ್ತಿದೆ.

ಇದನ್ನೂ ಓದಿ: ಮತ್ತೊಂದು ನಮ್ಮ ಮೆಟ್ರೋ ಸುರಂಗ ಮಾರ್ಗ ಕೊರೆದು ಯಶಸ್ವಿಯಾಗಿ ಹೊರ ಬಂದ ತುಂಗಾ

ಎಲೆಕ್ಟ್ರಾನಿಕ್ಸ್ ವಸ್ತುಗಳನ್ನ ತಯಾರಿಕೆಯಲ್ಲಿ ಬಹುಮುಖ್ಯ ಪಾತ್ರವಾಗುವ ಲೀಥಿಯಮ್ ಅಂಶ ಯಾದಗಿರಿ ಜಿಲ್ಲೆಯಲ್ಲೂ ಸಿಗ್ತಾಯಿರೋದು ವಿಶೇಷವಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಲೀಥಿಯಮ್ ಗಣಿಗಾರಿಕೆ ಆರಂಭಿಸಿದರೆ ಸ್ಥಳೀಯರಿಗೆ ಕೆಲಸ ಕೂಡ ಸಿಗುವ ಸಾಧ್ಯತೆಗಳಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:39 pm, Fri, 6 September 24

ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ
ಮಧು ಬಂಗಾರಪ್ಪ ಹೇಳಿಕೆ ವಿಡಿಯೋ ವೈರಲ್: ಬಿಜೆಪಿ ವಿರುದ್ಧ ಸಿಡಿದೆದ್ದ ಭಕ್ತರು
ಮಧು ಬಂಗಾರಪ್ಪ ಹೇಳಿಕೆ ವಿಡಿಯೋ ವೈರಲ್: ಬಿಜೆಪಿ ವಿರುದ್ಧ ಸಿಡಿದೆದ್ದ ಭಕ್ತರು
ಗುಂಡಿ ತೋಡಿಸಿ, ಕಟ್ಟಿಸಿ ಮುಚ್ಚದೆ ಹೋಗಿದ್ದು ರೆಸಾರ್ಟ್​ನವರ ತಪ್ಪಲ್ಲವೇ?
ಗುಂಡಿ ತೋಡಿಸಿ, ಕಟ್ಟಿಸಿ ಮುಚ್ಚದೆ ಹೋಗಿದ್ದು ರೆಸಾರ್ಟ್​ನವರ ತಪ್ಪಲ್ಲವೇ?
ಬಾಬು ಪಾವತಿಸಿದ ಹಣ ಮಹಾರಾಷ್ಟ್ರ ಆರ್​ಟಿಓ ಕಚೇರಿಯಿಂದ ರೀಫಂಡ್ ಆಗಲಿದೆ
ಬಾಬು ಪಾವತಿಸಿದ ಹಣ ಮಹಾರಾಷ್ಟ್ರ ಆರ್​ಟಿಓ ಕಚೇರಿಯಿಂದ ರೀಫಂಡ್ ಆಗಲಿದೆ
ಉಫ್​... ವಾಟ್ ಎ ಕ್ಯಾಚ್: ಎಬಿಡಿಯ ಫೀಲ್ಡಿಂಗ್​ಗೆ ಪ್ರೇಕ್ಷಕರು ದಂಗು
ಉಫ್​... ವಾಟ್ ಎ ಕ್ಯಾಚ್: ಎಬಿಡಿಯ ಫೀಲ್ಡಿಂಗ್​ಗೆ ಪ್ರೇಕ್ಷಕರು ದಂಗು
ಬಿಜೆಪಿ ಕಚೇರಿ ಬದಲು ಫ್ರೀಡಂ ಪಾರ್ಕಲ್ಲಿ ಕಾಂಗ್ರೆಸ್ ಧರಣಿ ಮಾಡಲಿ:ವಿಜಯೇಂದ್ರ
ಬಿಜೆಪಿ ಕಚೇರಿ ಬದಲು ಫ್ರೀಡಂ ಪಾರ್ಕಲ್ಲಿ ಕಾಂಗ್ರೆಸ್ ಧರಣಿ ಮಾಡಲಿ:ವಿಜಯೇಂದ್ರ
ಆಲಕೆರೆ ಶಾಲೆಯಲ್ಲಿ ಮೊಟ್ಟೆ ಗಲಾಟೆ, ಪರ-ವಿರೋಧ ಶುರುವಾಗಿದ್ದೇಕೆ ನೋಡಿ
ಆಲಕೆರೆ ಶಾಲೆಯಲ್ಲಿ ಮೊಟ್ಟೆ ಗಲಾಟೆ, ಪರ-ವಿರೋಧ ಶುರುವಾಗಿದ್ದೇಕೆ ನೋಡಿ
ತೆರಿಗೆ ನೋಟಿಸ್ ವಿರುದ್ಧ ಪ್ರತಿಭಟನೆ: ಬೆಂಗಳೂರಿನ ಹಲವು ಬೇಕರಿಗಳು ಬಂದ್
ತೆರಿಗೆ ನೋಟಿಸ್ ವಿರುದ್ಧ ಪ್ರತಿಭಟನೆ: ಬೆಂಗಳೂರಿನ ಹಲವು ಬೇಕರಿಗಳು ಬಂದ್