ಗ್ರಾ. ಪಂ. ಚುನಾವಣೆಯಲ್ಲಿ ಜೈಲಿನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಗೆಲುವು.. ಎಲ್ಲಿ?

| Updated By: ಸಾಧು ಶ್ರೀನಾಥ್​

Updated on: Dec 30, 2020 | 12:23 PM

ಗ್ರಾ.ಪಂ ಚುನಾವಣೆಗೆ ಅಭ್ಯರ್ಥಿ ಪುಲಿಯಂಡ ಬೋಪಣ್ಣ ಜೈಲಿನಲ್ಲಿದ್ದುಕೊಂಡೇ ನಾಮಪತ್ರ ಸಲ್ಲಿಸಿದ್ದರು. ಇನ್ನೇನು ಪ್ರಚಾರದ ಅಂತ್ಯದಲ್ಲಿ ಜೈಲಿನಿಂದ ಬಿಡುಗಡೆಗೊಂಡು ಪ್ರಚಾರ ಕೈಗೊಂಡಿದ್ದರು. ಇದೀಗ,  ಸತತ ನಾಲ್ಕನೇ ಬಾರಿಗೆ ಜಯ ಗಳಿಸಿದ್ದಾರೆ.

ಗ್ರಾ. ಪಂ. ಚುನಾವಣೆಯಲ್ಲಿ ಜೈಲಿನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಗೆಲುವು.. ಎಲ್ಲಿ?
ಸಾಂದರ್ಭಿಕ ಚಿತ್ರ
Follow us on

ಕೊಡಗು: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜೈಲಿನಿಂದ ಸ್ಪರ್ಧಿಸಿದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಮ್ಮೆಗುಂಡಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಎಮ್ಮೆಗುಂಡಿಯ ಬಿಜೆಪಿ ಅಭ್ಯರ್ಥಿ ಪುಲಿಯಂಡ ಬೋಪಣ್ಣ ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಇನ್ನೇನು ಪ್ರಚಾರದ ಅಂತ್ಯದಲ್ಲಿ ಜೈಲಿನಿಂದ ಬಿಡುಗಡೆಗೊಂಡು ಪ್ರಚಾರ ಕೈಗೊಂಡಿದ್ದರು. ಇದೀಗ,  ಸತತ ನಾಲ್ಕನೇ ಬಾರಿಗೆ ಜಯ ಗಳಿಸಿದ್ದಾರೆ.

ಗ್ರಾಮ ಪಂಚಾಯತಿ ಎಲೆಕ್ಷನ್​ನಲ್ಲಿ ಅವಿರೋಧವಾಗಿ ಆಯ್ಕೆಯಾದವರಿಗೆ ಶುರುವಾಯ್ತು ಢವ ಢವ