ವಿಜಯಪುರ: ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶ ಇದೀಗ ಹೊರಬಿದ್ದಿದೆ. 2ನೇ ವಾರ್ಡ್ನ ಅಭ್ಯರ್ಥಿಗಳಿಬ್ಬರ ನಡುವೆ ಭರ್ಜರಿ ಸ್ಪರ್ಧೆ ಏರ್ಪಟ್ಟಿತ್ತು. ಟಾಸ್ ಮಾಡುವ ಮೂಲಕ ವಿಜೇತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಯಿತು.
ಶ್ರೀಶೈಲ ಹಿಪ್ಪರಗಿ ಮತ್ತು ರಾವುತಪ್ಪ ಆಲೂರಗೆ 311 ಮತದಂತೆ ಸಮಾನ ಮತ ಚಲಾವಣೆಯಾಗಿತ್ತು. ಆದ್ದರಿಂದ, ಪರ್ಯಾಯವಾಗಿ ಟಾಸ್ ಹಾಕುವ ಮೂಲಕ ಜಯಶಾಲಿಯನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ, ಶ್ರೀಶೈಲ ಹಿಪ್ಪರಗಿ ಜಯ ಸಾಧಿಸಿದ್ದು, ರಾವುತಪ್ಪ ಆಲೂರು ಸೋಲು ಕಂಡಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪತಿ-ಪತ್ನಿ ಮುಖಾಮುಖಿ: ಗಮನ ಸೆಳೆದಿದೆ ದಂಪತಿ ಸ್ಪರ್ಧೆ