ಚುನಾವಣೆಯಲ್ಲಿ ಗೆದ್ದ ತಕ್ಷಣವೇ ಮದ್ಯ ಸೇವನೆ ಮಾಡಿ.. ಚುನಾವಣಾಧಿಕಾರಿ ಎದುರು ಬಂದ ನೂತನ ಸದಸ್ಯ!

| Updated By: ಸಾಧು ಶ್ರೀನಾಥ್​

Updated on: Dec 30, 2020 | 6:09 PM

ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಆರ್​​ಸಿ ಗ್ರಾಮ ಪಂಚಾಯಿತಿಗೆ ರಾವುತಪ್ಪ ಮಟ್ಟಿಹಾಳ ಎಂಬುವವರು ಸ್ಪರ್ಧಿಸಿದ್ದರು. ಇವರನ್ನು ಗ್ರಾಮದವರು ಗೆಲ್ಲಿಸಿದ್ದರು. ಗೆದ್ದ ಅಭ್ಯರ್ಥಿ ಚುನಾವಣಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಲು ಮದ್ಯ ಸೇವಿಸಿಯೇ ಬಂದಿದ್ದಾರೆ.

ಚುನಾವಣೆಯಲ್ಲಿ ಗೆದ್ದ ತಕ್ಷಣವೇ ಮದ್ಯ ಸೇವನೆ ಮಾಡಿ.. ಚುನಾವಣಾಧಿಕಾರಿ ಎದುರು ಬಂದ ನೂತನ ಸದಸ್ಯ!
Follow us on

ವಿಜಯಪುರ: ಇಂದು ಗ್ರಾಮ ಪಂಚಾಯಿತಿ ಚುನಾವಣೆಗಳ ಫಲಿತಾಂಶ ಹೊರ ಬಿದ್ದಿದೆ. ಕೆಲವರು ಗೆದ್ದ ಖುಷಿಗೆ ಬಾಡೂಟ ಹಾಕಿಸಿದರೆ, ಇನ್ನೂ ಕೆಲವರು ಸಿಹಿ ಹಂಚಿದ್ದಾರೆ. ಆದರೆ, ಇಲ್ಲೋರ್ವ ವ್ಯಕ್ತಿ ಗೆದ್ದ ಖುಷಿಗೆ ಮದ್ಯ ಸೇವನೆ ಮಾಡಿ ಜನರೆದುರು ಹಾಜರಾಗಿದ್ದಾರೆ!

ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಆರ್​​ಸಿ ಗ್ರಾಮ ಪಂಚಾಯತಿಗೆ ರಾವುತಪ್ಪ ಮಟ್ಟಿಹಾಳ ಎಂಬುವವರು ಸ್ಪರ್ಧಿಸಿದ್ದರು. ಇವರನ್ನು ಗ್ರಾಮದವರು ಗೆಲ್ಲಿಸಿದ್ದರು. ಗೆದ್ದ ಅಭ್ಯರ್ಥಿ ಚುನಾವಣಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಲು ಮದ್ಯ ಸೇವಿಸಿಯೇ ಬಂದಿದ್ದಾರೆ.

ಚುನಾವಣಾಧಿಕಾರಿಗಳ ಎದುರು ಕುಡಿದು ಬಂದು ಪ್ರಮಾಣ ಪತ್ರ ಪಡೆದಿದ್ದಲ್ಲದೇ, ಗೆಲುವಿನ ಕುರಿತು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಬೇಕಾಬಿಟ್ಟಿಯಾಗಿ ಮಾತನಾಡಿದ್ದಾರೆ. ಕಡು ಬಡವರಿಗೆ ಫ್ಲ್ಯಾಟ್, ಹಣ ನೀಡಬೇಕು. ಶ್ರೀಮಂತರು ಮತ್ತೂ ಶ್ರೀಮಂತರಾಗಬೇಕು. ಅದೇ ನನ್ನ ಟೆಕ್ನಿಕ್ ಎಂದು ಎದೆ ಬಡಿದುಕೊಂಡು ಹೇಳಿದ್ದಾರೆ. ಬಳಿಕ ಅವರನ್ನು ಅಧಿಕಾರಿಗಳು, ಪೊಲೀಸರು ಸಮಾಧಾನ ಪಡಿಸಿ ಮತ ಎಣಿಕೆ ಕೇಂದ್ರದಿಂದ ಕಳುಹಿಸಿದ್ದಾರೆ.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ರೋಚಕ ಗೆಲುವು ತಂದು ಕೊಟ್ಟ ಅಂಚೆ ಮತ!

Published On - 6:07 pm, Wed, 30 December 20