ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ ಹಣ
ಹೊಸ ವರ್ಷಕ್ಕೆ ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಬೆಳಗಾವಿ ಜಿಲ್ಲೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾವಣೆಗೊಂಡಿದೆ. ಟಿವಿ9 ನಿರಂತರ ವರದಿಯ ನಂತರ ಈ ಹಣ ವರ್ಗಾವಣೆಯಾಗಿದೆ. ಫಲಾನುಭವಿಗಳು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. 2,000 ಮೊತ್ತದ ಹಣ ಹಲವು ತಿಂಗಳುಗಳಿಂದ ಬಾಕಿ ಇತ್ತು.
ಬೆಳಗಾವಿ, ಡಿಸೆಂಬರ್ 30: ಹೊಸ ವರ್ಷದ ಸಂದರ್ಭದಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಯೋಜನೆಯ 24ನೇ ಕಂತಿನ 2,000 ರೂ. ಬೆಳಗಾವಿ ಜಿಲ್ಲೆಯ ಹಲವು ಮಹಿಳೆಯರ ಖಾತೆಗೆ ಸಂದಾಯವಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಟಿವಿ9 ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು. ಇನ್ನು ಹಣ ಪಡೆದ ಫಲಾನುಭವಿಗಳು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಹಣ ಹಾಕೋದು ವಿಳಂಬವಾದ ಹಿನ್ನೆಲೆ ಮಹಿಳೆಯರಲ್ಲಿ ಅಸಮಾಧಾನವಿತ್ತು. ಆದರೆ ಈಗ ಹೊಸ ವರ್ಷದ ಹೊತ್ತಲ್ಲಿ ಹಣ ಬಂದಿರುವುದು ಸಂತಸ ತಂದಿದೆ ಎಂದು ಫಲಾನುಭವಿಗಳು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 30, 2025 02:04 PM
